ಕರ್ನಾಟಕ

karnataka

ETV Bharat / state

ರಾತ್ರೋರಾತ್ರಿ ವಂಡರ್ ಲಾ ಬಂದ್: ಟಿಕೆಟ್‌ ಬುಕ್‌ ಮಾಡಿದ ಪ್ರವಾಸಿಗರ ಆಕ್ರೋಶ

ವಂಡರ್ ಲಾ ಅಮ್ಯೂಸ್​ಮೆಂಟ್ ಪಾರ್ಕ್​ ಅನ್ನು ರಾತ್ರೋರಾತ್ರಿ ಬಂದ್ ಮಾಡಿದ್ದರಿಂದ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

By

Published : Dec 13, 2020, 8:06 PM IST

Wonderla
ರಾತ್ರೋರಾತ್ರಿ ವಂಡರ್ ಲಾ ಬಂದ್

ಬೆಂಗಳೂರು:ರಾಮನಗರ ತಾಲೂಕಿನ ಬಿಡದಿ ಸಮೀಪದ ಮನರಂಜನಾ ಉದ್ಯಾನ ವಂಡರ್ ಲಾ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಕಡಿಮೆ ದರ ಘೋಷಿಸಿತ್ತು. ಆನ್‌ಲೈನ್ ಮೂಲಕ ರಾಜ್ಯಾದ್ಯಂತ ಪ್ರವಾಸಿಗರು ಟಿಕೆಟ್‌ ಬುಕ್ ಮಾಡಿದ್ದರು. ಆದ್ರೆ ರಾತ್ರೋರಾತ್ರಿ ಟಿಕೆಟ್ ಬುಕ್ ಮಾಡಿಸಿಕೊಂಡು ಸೇವೆ ನಿಲ್ಲಿಸಿರುವ ವಂಡರ್ ಲಾ ಅಮ್ಯೂಸ್​ಮೆಂಟ್ ಪಾರ್ಕ್ ವಿರುದ್ಧ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಂಡರ್ ಲಾ ಬಂದ್​: ಪ್ರವಾಸಿಗರ ಆಕ್ರೋಶ

ಮುಂಗಡ ಆನ್​​ಲೈನ್ ಟಿಕೆಟ್ ಬುಕ್ ಮಾಡಿಸಿಕೊಂಡು ಏಕಾಏಕಿ ಬಂದ್ ಮಾಡಿರುವ ಹಿನ್ನೆಲೆ ಬೆಂಗಳೂರು, ಮೈಸೂರು, ಮಡಿಕೇರಿ ಸೇರಿದಂತೆ ದೂರದ ಊರುಗಳಿಂದ ಬಂದಿರುವ ಪ್ರವಾಸಿಗರು ಗೇಟ್ ಬಳಿ ಸಿಬ್ಬಂದಿ ಜೊತೆ ಜಗಳವಾಡಿದ್ದಾರೆ.

ಮುಂಗಡ ಟಿಕೆಟ್ ಬುಕ್ ಮಾಡಿರೋ ಹಣವನ್ನು ವಾಪಸ್ ನೀಡದಿದ್ದರಿಂದ ಸಂಸ್ಥೆ ವಿರುದ್ಧ ಪ್ರವಾಸಿಗರು ಸಿಟ್ಟಿಗೆದ್ದರು.

ABOUT THE AUTHOR

...view details