ಬೆಂಗಳೂರು :ರಾಜ್ಯದಲ್ಲಿಂದು 1,46,772 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 847 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಪ್ರಮಾಣ 29,70,208ಕ್ಕೆ ಏರಿಕೆ ಕಂಡಿದೆ. ಪಾಸಿಟಿವಿಟಿ ದರ ಶೇ.0.57ರಷ್ಟು ದಾಖಲಾಗಿದೆ. ಇಂದು 946 ಸೋಂಕಿತರು ಗುಣಮುಖರಾಗಿದ್ದು, ಈ ತನಕ 29,18,890 ಜನರು ಡಿಸ್ಚಾರ್ಜ್ ಆಗಿದ್ದಾರೆ.
ಇತ್ತ ಸಕ್ರಿಯ ಪ್ರಕರಣಗಳು 13,621ರಷ್ಟು ದಾಖಲಾಗಿವೆ. 20 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,668ಕ್ಕೆ ಏರಿದೆ. ಈ ಮೂಲಕ ಮೃತರ ಪ್ರಮಾಣ ಶೇ.2.36ರಷ್ಟು ದಾಖಲಾಗಿದೆ. ವಿಮಾನ ನಿಲ್ದಾಣದಿಂದ 1,296 ಪ್ರಯಾಣಿಕರು ಆಗಮಿಸಿದ್ದು, 96 ಪ್ರಯಾಣಿಕರು ಯುಕೆಯಿಂದ ಆಗಮಿಸಿದ್ದಾರೆ.