ಕರ್ನಾಟಕ

karnataka

ETV Bharat / state

ವಿಧಾನಸೌಧಕ್ಕಿಂದು ಸ್ಪೀಕರ್ ಆಗಮನ:​ ಇನ್ನೂ ಹಲವರು ರಾಜೀನಾಮೆಗೆ ಸಿದ್ಧ, ಏನಾಗುತ್ತೆ ದೋಸ್ತಿ ಭವಿಷ್ಯ?​​​

ಕಾಂಗ್ರೆಸ್ ಹಾಗೂ ಜೆಡಿಎಸ್​ನ 13 ಅತೃಪ್ತ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದು, ಇಂದು ಇನ್ನೂ ಹಲವರು ನೀಡುವ ಸಾಧ್ಯತೆಯಿದೆ. ಸದ್ಯ ಸರ್ಕಾರದ ಭವಿಷ್ಯ ಸ್ಪೀಕರ್​​ ಕೈನಲ್ಲಿದ್ದು, ಶಾಸಕರ ರಾಜೀನಾಮೆಯನ್ನು ಸ್ವಿಕರಿಸುತ್ತಾರಾ ಅಥವಾ ನಿರಾಕರಿಸುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ.

By

Published : Jul 9, 2019, 8:32 AM IST

ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು: ಕಳೆದೆರಡು ದಿನಗಳಿಂದ ಖಾಸಗಿ ಕಾರ್ಯಕ್ರಮದ ನಿಮಿತ್ತ ರಾಜಕೀಯದಿಂದ ಕೊಂಚ ದೂರ ಇರುವ ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ವಿಧಾನಸೌಧಕ್ಕೆ ಆಗಮಿಸಲಿದ್ದು, ರಾಜೀನಾಮೆಗೆ ಮುಂದಾಗಿರುವ ಶಾಸಕರ ಭವಿಷ್ಯ ಇಂದು ಗೊತ್ತಾಗಲಿದೆ.

ಎರಡು ದಿನಗಳಿಂದ ಕೋಲಾರದಲ್ಲಿದ್ದ ಸ್ಪೀಕರ್​ ಇಂದು ಬೆಂಗಳೂರಿಗೆ ಖಾಸಗಿ ವಾಹನದಲ್ಲಿ ಯಾವುದೇ ಸರ್ಕಾರಿ ಭದ್ರತೆಯಿಲ್ಲದೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸ್ಪೀಕರ್​​ ಅವರಿಗೆ ಇಂದು ಅತೃಪ್ತ ಶಾಸಕರಾದ ಬಿ, ನಾಗೇಂದ್ರ, ಸೌಮ್ಯ ರೆಡ್ಡಿ, ಶ್ರೀನಿವಾಸಗೌಡ, ಸುಬ್ಬಾರೆಡ್ಡಿ, ಎಂಟಿಬಿ ನಾಗರಾಜ್, ಶಿರಾ ಸತ್ಯನಾರಾಯಣ್ ಹಾಗೂ ಜೆಡಿಎಸ್​ನ ಅಶ್ವಿನ್ ಕುಮಾರ್ ಸೇರಿದಂತೆ ಇನ್ನೂ ಹಲವರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಈಗಾಗಲೇ ರಾಜೀನಾಮೆ ನೀಡಿರುವ ಕಾಂಗ್ರೆಸ್, ಜೆಡಿಎಸ್​ನ ಅತೃಪ್ತ ಶಾಸಕರ ರಾಜೀನಾಮೆಯನ್ನು ಸ್ಪೀಕರ್​​ ಅಂಗೀಕರಿಸುತ್ತಾರಾ ಅಥವಾ ನಿರಾಕರಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

ದೋಸ್ತಿ ಸರ್ಕಾರದ ಭವಿಷ್ಯ ಇಂದು ಫೈನಲ್​​​​

ಇನ್ನು ಕೆಪಿಸಿಸಿ ಘಟಕ 13 ಶಾಸಕರ ರಾಜೀನಾಮೆ ಅಂಗೀಕರಿಸಬಾರದು ಎಂದು ಸ್ಪೀಕರ್ ಅವರಿಗೆ ಪತ್ರವನ್ನು ಬರೆದಿದ್ದು, ಇಂದು ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರ ಮೈತ್ರಿ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ.

For All Latest Updates

TAGGED:

ABOUT THE AUTHOR

...view details