ಬೆಂಗಳೂರು :ಜೂನ್ 14 ರಿಂದ ರಾಜ್ಯದ ಮಂಗಳೂರು ಹಾಗೂ ಮೈಸೂರಿಗೆ ಪ್ರವೇಶಿಸಿದ ಮುಂಗಾರು, ಕರ್ನಾಟಕದಾದ್ಯಂತ ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ.
ಇನ್ನೂ 3 ದಿನ ರಾಜ್ಯಾದ್ಯಂತ ಬಿಡದೆ ಸುರಿಯುವ ವರುಣ, ಆ ಬಳಿಕ ಕ್ಷೀಣ- ಹವಾಮಾನ ಇಲಾಖೆ
ರಾಜ್ಯದಲ್ಲಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮುಂಗಾರು ಚುರುಕಾಗಲಿದ್ದು, ನಂತರ ಮಳೆ ಕ್ಷೀಣಿಸುತ್ತದೆ ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಮೂರು ದಿನ ರಾಜ್ಯಾದ್ಯಂತ ಜೋರು ಮಳೆ
ಈವರೆಗೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿಲ್ಲ. ಆದರೆ, ಮುಂದಿನ ನಾಲ್ಕು ದಿನಗಳಲ್ಲಿ ಮುಂಗಾರು ಚುರುಕಾಗಲಿದ್ದು, ಬಳಿಕ ಕ್ಷೀಣಿಸಲಿದೆ ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಬೀದರ್ ಹೊರತು ಪಡಿಸಿ ಕೋಲಾರ, ಚಾಮರಾಜನಗರ, ದಕ್ಷಿಣ ಕನ್ನಡ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ನಿನ್ನೆ ಹಾಗೂ ಇಂದು ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಿದೆ. ಆದರೆ, ಇನ್ನೂ ಮೂರು ದಿನಗಳು ಮಾತ್ರ ಮಳೆಯಾಗಲಿದ್ದು, ನಂತರ ಕ್ಷೀಣಿಸಲಿದೆ ಅಂತಾ ಹವಾಮಾನ ಇಲಾಖೆ ಹೇಳಿದೆ .