ಆನೇಕಲ್:ಮಹಾರಾಷ್ಟ್ರದಿಂದ ಆನೇಕಲ್ಗೆ ಬಂದಿದ್ದ ಮೂವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ.
ಆನೇಕಲ್ನಲ್ಲಿ ಮೂವರಿಗೆ ಕೊರೊನಾ ಸೋಂಕು ದೃಢ
ಆನೇಕಲ್ಗೂ 'ಮಹಾ' ನಂಟು ಭೀತಿ ಹುಟ್ಟಿಸಿದ್ದು, ತಾಲೂಕಿನಲ್ಲಿ ಮೂವರು ವಲಸಿಗರಿಗೆ ಕೊರೊನಾ ವೈರಸ್ ಸೋಂಕು ಕಂಡುಬಂದಿದೆ.
ಆನೇಕಲ್ನಲ್ಲಿ ಮೂವರಿಗೆ ಕೊರೊನಾ ಸೋಂಕು ದೃಢ
ಸೋಕಿತರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸಾಗಿಸಲಾಗಿದೆ. ಆನೇಕಲ್-ಯಳಿ ರಸ್ತೆಯ ಅಮೃತಮಹಲ್ ಕ್ವಾರಂಟೈನ್ ಕೇಂದ್ರದಲ್ಲಿ ಒಂದು ಹಾಗೂ ಕಿತ್ತೂರುರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಎರಡು ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಮೂರು ಪಾಸಿಟಿವ್ ಬಂದ ಹಿನ್ನೆಲೆ ಕ್ವಾರಂಟೈನ್ನಲ್ಲಿರುವ ಇನ್ನುಳಿದ 200 ಮಂದಿ ವಲಸಿಗರ ಪರೀಕ್ಷೆ ನಡೆಸಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಜ್ಞಾನಪ್ರಕಾಶ್ ತಿಳಿಸಿದ್ದಾರೆ.