ಕರ್ನಾಟಕ

karnataka

ETV Bharat / state

ಸಂಚಲನ ಸೃಷ್ಟಿಸಿದ ಡ್ರಗ್ಸ್​​ ಘಾಟು: ಮಾದಕ ವಸ್ತುವಿನ ಜಾಲ ಪತ್ತೆಗೆ ಸಿಸಿಬಿ, ಎನ್​ಸಿಬಿ ತನಿಖೆ ಚುರುಕು

ಬೆಂಗಳೂರು ಮಾದಕ ಲೋಕದ ಸುದ್ದಿ ದೇಶಾದ್ಯಂತ ಸದ್ದು ಮಾಡ್ತಿದೆ. ಬೆಂಗಳೂರಲ್ಲಿ ತಮ್ಮ ಕಣ್ತಪ್ಪಿಸಿ ಡ್ರಗ್ಸ್​ ಹೇಗೆ ಬರ್ತಿದೆ ಎಂಬುದು ಪೊಲೀಸರಿಗೇ ಯಕ್ಷ ಪ್ರಶ್ನೆಯಾಗಿದೆ.

By

Published : Aug 30, 2020, 9:50 AM IST

Bangalore
ಡ್ರಗ್ ಮಾಫಿಯಾದ ಬೆನ್ನತ್ತಿದ ಸಿಸಿಬಿ, ಎನ್​ಸಿಬಿ

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ದಂಧೆ ಎಗ್ಗಿಲ್ಲದೇ ಸಾಗ್ತಿದೆ ಅನ್ನೋ ವಿಚಾರವನ್ನ ಎನ್​ಸಿಬಿ ಇತ್ತೀಚೆಗೆ ಬಯಲಿಗೆ ಎಳೆದಿತ್ತು. ಹದ್ದಿನ ಕಣ್ಣನ್ನು ತಪ್ಪಿಸಿ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತು ನಗರದೊಳಗೆ ಬಂದಿದ್ದಾದರೂ ಹೇಗೆ ಎಂದು ಸಿಸಿಬಿ ಮತ್ತು ಎನ್​ಸಿಬಿ ಅಧಿಕಾರಿಗಳ ತಂಡ ಶೋಧ ನಡೆಸಲು ‌ಮುಂದಾಗಿದ್ದಾರೆ.

ಜರ್ಮನಿ, ಅಮೆರಿಕ, ರಷ್ಯಾ ಸೇರಿ ಲ್ಯಾಟಿನ್ ಅಮೆರಿಕ ದೇಶಗಳ ಡ್ರಗ್ಸ್​ ಮಾಫಿಯಾ ಹಿಡಿತದಲ್ಲಿರುವ ಕೊಕೇನ್, ಆ್ಯಸಿಡ್, ಹೆರಾಯಿನ್, ಕೆಟಾಮಿನ್ ಪ್ರತಿದಿನವೂ ಗ್ರಾಹಕರ ಕೈಗೆ ನಿರಾತಂಕವಾಗಿ ತಲುಪುತ್ತಿದೆ. ಇದು ತಮ್ಮ ಕಣ್ತಪ್ಪಿಸಿ ಹೇಗೆ ಬರ್ತಿದೆ ಎಂಬುದು ಮಾತ್ರ ಪೊಲೀಸರಿಗೆ ಯಕ್ಷ ಪ್ರಶ್ನೇಯಾಗಿದೆ. ಏಕೆಂದರೆ ಡ್ರಗ್ಸ್​ ಪೂರೈಸುವುದು ಅಪರಾಧ. ಅದರಲ್ಲಿಯೂ ಲಾಕ್ ‌ಡೌನ್ ಸಂದರ್ಭದಲ್ಲಿ ಎಲ್ಲಾ ಕಡೆ ಚಟುವಟಿಕೆ ಬಂದ್​ ಆಗಿತ್ತು. ರೈಲ್ವೆ, ವಿಮಾನ ನಿಲ್ದಾಣ ಯಾವುದು ಹಾರಾಟ ನಡೆಸ್ತಿರಲಿಲ್ಲ. ಆದರೂ ವಿದೇಶದಿಂದ ಡ್ರಗ್ಸ್​ ಮೊದಲೇ ಕಸ್ಟಮ್ ಅಧಿಕಾರಿಗಳ ಕಣ್ತಪ್ಪಿಸಿ ಡ್ರಗ್ಸ್​ ಪೆಡ್ಲರ್ ಕೈ ಸೇರಿತ್ತು. ಹಾಗಾದರೆ ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಅನ್ನೋ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ.

ಪಂಚತಾರಾ ಹೋಟೆಲ್, ಪಾರ್ಟಿಗಳಲ್ಲಿ ಕೆಲವು ಹಾಲಿ-ಮಾಜಿ ಶಾಸಕರು, ಸಚಿವರ ಮಕ್ಕಳು, ಸಿನಿಮಾ ನಟ ನಟಿಯರು, ಅಧಿಕಾರಿ-ಉದ್ಯಮಿಗಳ ಮಕ್ಕಳೆಲ್ಲರೂ ಭಾಗಿಯಾಗಿ ಡ್ರಗ್ಸ್​ ನಶೆಯಲ್ಲಿ ತೇಲ್ತಾರೆ. ಸದ್ಯ ಈ ಮಾಫಿಯಾ ಹಿಂದೆ ಯಾರ ಕೈವಾಡ ಇದೆ ಎಂದು ತನಿಖಾಧಿಕಾರಿಗಳು ತನಿಖೆ ಮುಂದುವರೆಸಿದ್ದು, ಡ್ರಗ್ಸ್​ ಪೆಡ್ಲರ್ ಮಟ್ಟ ಹಾಕಲು ಸಿಸಿಬಿ ತಂಡ ರೆಡಿಯಾಗಿದೆ.

ABOUT THE AUTHOR

...view details