ದೊಡ್ಡಬಳ್ಳಾಪುರ:ದೇವಸ್ಥಾನದ ಒಳಗೆ ದಲಿಯ ಯುವಕನೋರ್ವ ಮೊಬೈಲ್ನಲ್ಲಿ ಮಾತನಾಡಿದ್ದನ್ನು ಪ್ರಶ್ನಿಸಿ ದೇಗುಲದ ಆಡಳಿತ ಮಂಡಳಿಯವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಕೇಳಿ ಬಂದಿದೆ.
ಘಟನೆ ಹಿನ್ನೆಲೆ:ವಿಜಯಪುರ ಪಟ್ಟಣದ ನಿವಾಸಿ ಎ.ನಾರಾಯಣಸ್ವಾಮಿ ಎಂಬುವವರ ಪುತ್ರ ದಿಲೀಪ್ ಕುಮಾರ್ ಅ.30ರಂದು ಕಾಲೇಜಿಗೆ ಹೋಗುವ ಮುನ್ನ ಆಂಜನೇಯ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ದಿಲೀಪ್ಗೆ ದೂರವಾಣಿ ಕರೆ ಬಂದಿದೆ. ಆಗ ಅರ್ಚಕರು ದೇಗುಲದಲ್ಲಿ ಮೊಬೈಲ್ ಬಳಕೆಗೆ ನಿಷೇಧವಿದೆ. ಹೊರಗಡೆ ಹೋಗಿ ಮಾತನಾಡುವಂತೆ ಸೂಚಿಸುತ್ತಾರೆ. ಅದರಂತೆ ಯುವಕ ದೇವಸ್ಥಾನದ ಹೊರಗೆ ಹೋಗಿ ಮಾತನಾಡಿದ್ದಾರೆ.
ಬಳಿಕ ದೇವಸ್ಥಾನದ ಸಮಿತಿ ಅಧ್ಯಕ್ಷ ಪ್ರಕಾಶ್ ದೇವಸ್ಥಾನದ ಆವರಣದೊಳಗೆ ಮೊಬೈಲ್ನಲ್ಲಿ ಮಾತನಾಡುತ್ತಿರುತ್ತಾರೆ. ಇದನ್ನು ಗಮನಿಸಿದ ದಿಲೀಪ್, ಪ್ರಕಾಶ್ನನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪ್ರಕಾಶ್ ಮತ್ತು ಆತನ ಸಹಚರರು ಯುವಕನ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ, ವೈರನಿಂದ ಕತ್ತು ಬಿಗಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಒಂದು ವೇಳೆ ದಿಲೀಪ್ ಸಹೋದರ ಸ್ಥಳಕ್ಕೆ ಬರದಿದ್ದಲ್ಲಿ ತನ್ನ ಮಗನನ್ನು ಕೊಂದು ಬಿಡುತ್ತಿದ್ದರು ಎಂದು ಹಲ್ಲೆಗೊಳಗಾದ ಯುವಕನ ತಾಯಿ ಆರೋಪಿಸಿದ್ದಾರೆ.