ಕರ್ನಾಟಕ

karnataka

ETV Bharat / state

ಮಧ್ಯಾಹ್ನದ ಉಪಹಾರ, ಕ್ಷೀರಭಾಗ್ಯ ಯೋಜನೆ ಪರಿಣಾಮಕಾರಿ ಅನುಪಾಲನೆಗೆ ಶಿಫಾರಸು ವರದಿ ಸಲ್ಲಿಕೆ

ಶಾಲೆಗಳಲ್ಲಿ ಮಧ್ಯಾಹ್ನದ ಉಪಾಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಗಳ ಮಹತ್ವದ ಶಿಫಾರಸುಗಳ ಕುರಿತಂತೆ ರಾಜ್ಯ ಸರ್ಕಾರದ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಹಾಗೂ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಪರಿಣಾಮಕಾರಿಯಾದ ಅನುಪಾಲನ ಕೈಗೊಳ್ಳುವ ಬಗ್ಗೆ ಶಿಫಾರಸು ವರದಿ ಸಲ್ಲಿಕೆ ಮಾಡಿದೆ.

By

Published : Dec 12, 2022, 4:16 PM IST

ವಿಧಾನಸೌಧ
ವಿಧಾನಸೌಧ

ಬೆಂಗಳೂರು: ರಾಜ್ಯ ಸರ್ಕಾರದ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಹಾಗೂ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯವು ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಗಳ ಮಹತ್ವದ ಶಿಫಾರಸುಗಳ ಕುರಿತಂತೆ ಪರಿಣಾಮಕಾರಿಯಾದ ಅನುಪಾಲನ ಕೈಗೊಳ್ಳುವ ಬಗ್ಗೆ ಶಿಫಾರಸು ವರದಿ ಸಲ್ಲಿಕೆ ಮಾಡಿದೆ.

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಕೈಗೊಂಡ ಪ್ರಮುಖ ಶಿಫಾರಸ್ಸುಗಳು

ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆ ಈ ಅಧ್ಯಯನ ನಡೆದಿದ್ದು, ಈ ಮೇಲಿನ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಗಳ ಅನುಷ್ಠಾನ, ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ಸುಧಾರಣೆ ತರಲು ಹಾಗೂ ಗುಣಮಟ್ಟ ಮತ್ತು ಉತ್ತಮೀಕರಣ ಸಾಧಿಸಲು ಈ ಕೆಳಕಂಡ ಶಿಫಾರಸುಗಳನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ತನ್ನ ಮೌಲ್ಯಮಾಪನ ಅಧ್ಯಯನದಿಂದ ಹಾಗೂ ಸಾಮಾಜಿಕ ನಿರ್ದೇಶನಾಲಯವು ಸಾಮಾಜಿಕ ಪರಿಶೋಧನೆ ನಡೆಸಿ ಈ ಕಚೇರಿಗೆ ವರದಿ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.

ಕರ್ನಾಟಕ ಮೌಲ್ಯಮಾಪನದ ಪ್ರಾಧಿಕಾರದ ಶಿಫಾರಸ್ಸುಗಳು

ಈ ಶಿಫಾರಸುಗಳನ್ನು ಜಿಲ್ಲಾ ಹಂತ, ತಾಲೂಕು ಹಂತ, ಕ್ಲಸ್ಟರ್ ಹಂತ ಮತ್ತು ಶಾಲಾ ಹಂತಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಚರ್ಚಿಸಿ, ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಕಾರ್ಯಕ್ರಮದ ಪರಿಣಾಮವನ್ನು ಹೆಚ್ಚಿಸುವಂತೆ ಈ ಮೂಲಕ ಸೂಚಿಸಿದೆ.

ಕರ್ನಾಟಕ ಮೌಲ್ಯಮಾಪನದ ಪ್ರಾಧಿಕಾರದ ಶಿಫಾರಸ್ಸುಗಳು

ಸುಧಾರಣಾ ಕ್ರಮಗಳನ್ನು ಅನುಸರಿಸಿ ಉತ್ತಮ ಫಲಿತಾಂಶಗಳನ್ನು ಕಂಡುಕೊಂಡಿರುವ ಬಗ್ಗೆ ದಾಖಲೆ ಸಮೇತ ಈ ಕಚೇರಿಗೆ ಶಾಲಾವಾರು ತಾಲೂಕು ಹಂತ ಮತ್ತು ಜಿಲ್ಲಾ ಹಂತಗಳಲ್ಲಿ ಕ್ರೂಢೀಕರಿಸಿ ಸಂಬಂಧಿಸಿದ ಅಕ್ಷರ ದಾಸೋಹ ಅಧಿಕಾರಿಗಳು ಅನುಸರಣಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಕೈಗೊಂಡ ಅಧ್ಯಯನದ ಪ್ರಮುಖ 25 ಶಿಫಾರಸು ಹಾಗೂ 2021-22 ನೇ ಸಾಲಿನಲ್ಲಿ ಸಾಮಾಜಿಕ ಪರಿಶೋಧನಾ ಅಧ್ಯಯನದ ವರದಿಯ 19 ಶಿಫಾರಸುಗಳನ್ನು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಓದಿ:ಜ್ವಲಂತ ಸಮಸ್ಯೆಗಳಿಗೆ ನಮ್ಮ ಸರ್ಕಾರದಲ್ಲಿ ಶೀಘ್ರ ಪರಿಹಾರ: ಸಚಿವ ಕೆ ಗೋಪಾಲಯ್ಯ

ABOUT THE AUTHOR

...view details