ಕರ್ನಾಟಕ

karnataka

ರಾಜ್ಯದ ಮೊದಲ ಒಮಿಕ್ರಾನ್ ಸೋಂಕಿತ ಡಿಸ್ಚಾರ್ಜ್

By

Published : Dec 15, 2021, 8:50 PM IST

46 ವರ್ಷದ ಒಮಿಕ್ರಾನ್​ ಸೋಂಕಿತ ವೈದ್ಯ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇವರು ಬೆಂಗಳೂರಿನ ಕೋಣನಕುಂಟೆ ನಿವಾಸಿಯಾಗಿದ್ದಾರೆ.

ರಾಜ್ಯದ ಮೊದಲ ಒಮಿಕ್ರಾನ್ ಸೋಂಕಿತ ಡಿಸ್ಚಾರ್ಜ್
ರಾಜ್ಯದ ಮೊದಲ ಒಮಿಕ್ರಾನ್ ಸೋಂಕಿತ ಡಿಸ್ಚಾರ್ಜ್

ಬೆಂಗಳೂರು: ರಾಜ್ಯದ ಮೊದಲ ಒಮಿಕ್ರಾನ್ ಸೋಂಕಿತ ಡಿಸ್ಚಾರ್ಜ್ ಆಗಿದ್ದಾರೆ. ಇವರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 46 ವರ್ಷದ ವೈದ್ಯ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಇವರು ಬೆಂಗಳೂರಿನ ಕೋಣನಕುಂಟೆ ನಿವಾಸಿಯಾಗಿದ್ದು, ವೈದ್ಯ ವೃತ್ತಿ ಮಾಡಿಕೊಂಡಿದ್ದರು. ಇವರಿಗೆ 22 ನೇ ತಾರೀಖು ಕೋವಿಡ್ ಪಾಸಿಟಿವ್ ಆಗಿತ್ತು. ನಂತರ ಡಿಸೆಂಬರ್ 2 ರಂದು ಒಮಿಕ್ರಾನ್ ವೈರಸ್ ಇರುವುದು ದೃಢಪಟ್ಟಿತ್ತು. ಪರಿಣಾಮ ಸುಮಾರು 14 ದಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇದನ್ನೂ ಓದಿ:ಒಮಿಕ್ರಾನ್​ ಸೋಂಕಿನಿಂದ ಗುಣಮುಖವಾಗಿ ಮನೆಗೆ ತೆರಳಿದ ವ್ಯಕ್ತಿ ನೀಡಿದರು ಕೆಲ ಉಪಯುಕ್ತ ಟಿಪ್ಸ್‌..

ಎರಡು RTPCR ಟೆಸ್ಟ್ ನೆಗೆಟಿವ್ ಆದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಹಾಗೆ ವೈದ್ಯರ ಪತ್ನಿ,ಇಬ್ಬರು ಮಕ್ಕಳು ಕೂಡ ಡಿಸ್ಚಾರ್ಜ್ ಆಗಿದ್ದಾರೆ.

ABOUT THE AUTHOR

...view details