ಬೆಂಗಳೂರು:ಇಂದು ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಅಲ್ಲಲ್ಲಿ ಮಳೆಯಾಗಿದ್ದು, ಕರಾವಳಿಯಲ್ಲಿ ಒಣಹವೆ ಮುಂದುವರೆದಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ರಾಜ್ಯದಲ್ಲಿ ಡಿ. 2ರವರೆಗೆ ಹಗುರ ಮಳೆ ಸಾಧ್ಯತೆ
ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್, ಮಳೆ ಕುರಿತಾದ ಮಾಹಿತಿ ನೀಡಿದರು.
ಈ ಕುರಿತು ಹವಾಮಾನ ಮುನ್ಸೂಚನೆ ವಿಭಾಗದ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದು, ಅಂಡಮಾನ್ ಸಮುದ್ರ ಹಾಗೂ ಬಂಗಾಳ ಉಪಸಾಗರದ ಆಗ್ನೇಯ ಭಾಗದಲ್ಲಿ ಗಂಟೆಯಲ್ಲಿ ವಾಯುಭಾರ ಕುಸಿತವಾಗಿದೆ. ಇದು ಮತ್ತಷ್ಟು ತೀವ್ರಗೊಂಡು ಮುಂದಿನ 48 ಗಂಟೆಗಳಲ್ಲಿ ದುರ್ಬಲಗೊಂಡು ಪಶ್ಚಿಮ ದಿಕ್ಕಿನೆಡೆ ಚಲಿಸಿ, ತಮಿಳುನಾಡು ಕರಾವಳಿಗೆ ಡಿ. 2ರಂದು ತಲುಪುವ ಸಾಧ್ಯತೆಯಿದೆ. ಇದರ ಪ್ರಭಾವದಿಂದ ದ.ಒಳನಾಡಿನಲ್ಲಿ ನಾಳೆಯಿಂದ ನ. 30ರವರೆಗೆ ಅಲ್ಲಲ್ಲಿ ಮಳೆಯಾಗಲಿದ್ದು, ಡಿ. 1 ಹಾಗೂ 2ರಂದು ಹಗುರದಿಂದ ಸಾಧಾರಣವಾಗಿ ಹಲವು ಸ್ಥಳಗಳಲ್ಲಿ ಮಳೆಯಗಾಲಿದೆ ಎಂದು ತಿಳಿಸಿದರು.
ಉತ್ತರ ಒಳನಾಡಿನಲ್ಲಿ ನಾಳೆ ಹಾಗೂ ನ. 29ರಂದು ಅಲ್ಲಲ್ಲಿ ಹಗುರ ಮಳೆಯಾಗಲಿದ್ದು, ನ. 30 ಮತ್ತು ಡಿ. 2ರ ನಂತರ ಒಣಹವೆ ಮುಂದುವರೆಯಲಿದೆ. ಕರಾವಳಿ ಜಿಲ್ಲೆಗಳಲ್ಲಿ ನಾಳೆಯಿಂದ ಡಿ. 2ರವರೆಗೆ ಒಣಹವೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ನಾಳೆ ಹಾಗೂ 29ರಂದು ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದು ತಿಳಿಸಿದರು.