ಬೆಂಗಳೂರು: ರಾಜ್ಯದಲ್ಲಿಂದು 1,31,898 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 523 ಜನರಿಗೆ ವೈರಸ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,79,331 ಏರಿಕೆ ಆಗಿದೆ.
ಇತ್ತ 621 ಮಂದಿ ಡಿಸ್ಚಾರ್ಜ್ ಆಗಿದ್ದು, 29,29,629 ಜನ ಗುಣಮುಖರಾಗಿದ್ದಾರೆ. 09 ಸೋಂಕಿತರು ಮೃತರಾಗಿದ್ದಾರೆ. ಸಾವಿನ ಸಂಖ್ಯೆ 37,854 ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 11,819 ರಷ್ಟು ಇದೆ. ಸೋಂಕಿತರ ಪ್ರಮಾಣ ಶೇ.0.39 ರಷ್ಟಿದ್ದರೆ, ಸಾವಿನ ಪ್ರಮಾಣ 1.72 ರಷ್ಟು ತಲುಪಿದೆ.