ಬೆಂಗಳೂರು: ವಿಧಾನಸಭೆ ಕ್ಷೇತ್ರವಾರು ರಾಜ್ಯ ಕಾಂಗ್ರೆಸ್ ನಾಯಕರು ಹಮ್ಮಿಕೊಂಡಿರುವ ಪ್ರಜಾ ಧ್ವನಿ ಯಾತ್ರೆ ಸಂದರ್ಭ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕರಿಗೆ ಸಹಕರಿಸಲು ವಿಶೇಷ ಸಮನ್ವಯ ಸಮಿತಿ ರಚಿಸಲಾಗಿದೆ.
ಈ ಸಮನ್ವಯ ಸಮಿತಿಗೆ ಅಧ್ಯಕ್ಷರಾಗಿ ಬಸವರಾಜ ರಾಯರೆಡ್ಡಿ ನಿಯೋಜಿತರಾಗಿದ್ದರೆ. ಸಮನ್ವಯಕಾರರಾಗಿ ಪ್ರಕಾಶ್ ಕೆ ರಾಥೋಡ್ ನೇಮಕಗೊಂಡಿದ್ದಾರೆ. ಉಳಿದಂತೆ ಸಮಿತಿಯಲ್ಲಿ 35 ಸದಸ್ಯರಿದ್ದು ಇವರಲ್ಲಿ ಪ್ರಮುಖವಾಗಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಚ್ ಕೆ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ.
ನಾಯಕರದ ಅಲ್ಲಮ ವೀರಭದ್ರಪ್ಪ, ಎಸ್ಆರ್ ಪಾಟೀಲ್, ಎನ್ಎಸ್ ಬೋಸರಾಜ್, ಜಮೀರ್ ಅಹಮದ್, ಎಚ್ ಸಿ ಮಹದೇವಪ್ಪ, ಆರ್ಬಿ ತಿಮ್ಮಾಪುರ್, ವಿನಯ್ ಕುಲಕರ್ಣಿ, ಪ್ರಿಯಾಂಕ ಖರ್ಗೆ, ವಿಎಸ್ ಉಗ್ರಪ್ಪ, ಕೆ ಬಿ ಕೋಳಿವಾಡ, ಶರಣಪ್ರಕಾಶ್ ಪಾಟೀಲ್, ಸಂತೋಷ್ ಲಾಡ್, ಶಿವಾನಂದ ಪಾಟೀಲ್, ಅಬ್ದುಲ್ ಜಬ್ಬಾರ್, ಸಿಎಸ್ ಅಪ್ಪಾಜಿ ನಾಡಗೌಡ, ಪ್ರಕಾಶ್ ಹುಕ್ಕೇರಿ, ಬೈರತಿ ಸುರೇಶ್, ಅಂಜಲಿ ನಿಂಬಾಳ್ಕರ್, ಉಮಾಶ್ರೀ, ಲಕ್ಷ್ಮಿ ಹೆಬ್ಬಾಳ್ಕರ್, ಪಿಎಂ ಅಶೋಕ್, ಕೆಎಸ್ಎಲ್ ಸ್ವಾಮಿ, ಐಜಿ ಸನದಿ, ಎಸ್ಎಸ್ ಮಲ್ಲಿಕಾರ್ಜುನ್, ರಹೀಮ್ ಖಾನ್, ಆಂಜನೇಯ, ನಾಸಿರ್ ಅಹಮದ್, ಪಿಟಿ ಪರಮೇಶ್ವರ ನಾಯಕ್, ತುಕಾರಾಂ, ಶರಣು ಸಲಗರ್ ಹಾಗೂ ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಇವರೆಲ್ಲರೂ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಿಗೆ ಸಹಕರಿಸಲು ರಚಿಸಿರುವ ಸಮನ್ವಯ ಸಮಿತಿಯ ಸದಸ್ಯರು. ಇದೇ ರೀತಿ ಕೆಪಿಸಿಸಿ ಅಧ್ಯಕ್ಷ ಟಿ ಕೆ ಶಿವಕುಮಾರ್ ನೇತೃತ್ವದ ತಂಡಕ್ಕೂ ಸಹ ಸಮನ್ವಯಕಾರರನ್ನು ನಿಯೋಜಿಸಲಾಗಿದೆ.