ಕರ್ನಾಟಕ

karnataka

ETV Bharat / state

ಸಮಾಜಸೇವಕ ಮಂಜುನಾಥ್‌ ಬಳಗೆರೆ ಆಮ್‌ ಆದ್ಮಿ ಪಾರ್ಟಿ ಸೇರ್ಪಡೆ

ಸಮಾಜಸೇವಕ ಮಂಜುನಾಥ್‌ ಬಳಗೆರೆ ಅವರು ಇಂದು ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

Social worker Manjunath Joins Aam Aadmi Party
ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡ ಸಮಾಜಸೇವಕ ಮಂಜುನಾಥ್‌ ಬಳಗೆರೆ

By

Published : Jun 9, 2022, 7:42 PM IST

ಬೆಂಗಳೂರು: ಸಮಾಜಸೇವಕ ಹಾಗೂ ಯುವಭಾರತ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷ ಮಂಜುನಾಥ್‌ ಬಳಗೆರೆ ಅವರು ಇಂದು ಆಮ್‌ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಂಜುನಾಥ್‌ ಬಳಗೆರೆಯವರನ್ನು ಪಕ್ಷಕ್ಕೆ ಬರಮಾಡಿಕೊಂಡ ಕೋಲಾರ ಜಿಲ್ಲಾ ಉಸ್ತುವಾರಿ ರವಿಶಂಕರ್ ಮಾತನಾಡಿ, ಇಂಜಿನಿಯರ್‌ ಪದವೀಧರರಾದ ಮಂಜುನಾಥ್‌ ಬಳಗೆರೆ ಅವರು ಹಲವು ವರ್ಷಗಳಿಂದ ತಮ್ಮನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತ ಸ್ವಾಭಿಮಾನ ಸಂಘಟನೆಯ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳ ವೀಕ್ಷಕರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ ಎಂದರು.

ಬಳಗೆರೆ ಅವರು ರಾಜೀವ್‌ ದೀಕ್ಷಿತ್‌ ನೇತೃತ್ವದ ಸ್ವದೇಶಿ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಯುವಭಾರತ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಯುವಜನತೆಯನ್ನು ಜಾಗೃತಗೊಳಿಸುವುದರಲ್ಲಿ ತೊಡಗಿಸಿಕೊಂಡಿದ್ದರು. ಭಾರತೀಯ ರೈತ ಒಕ್ಕೂಟದ ರಾಜ್ಯ ಕಾರ್ಯದರ್ಶಿಯಾಗಿಯೂ ರೈತರ ಪರ ಕಾಳಜಿ ತೋರಿದ ಅನುಭವ ಹೊಂದಿದ್ದಾರೆ ಎಂದು ಹೇಳಿದರು.

ಮಂಜುನಾಥ್‌ ಬಳಗೆರೆ ಮಾತನಾಡಿ, ದೇಶದ ರಾಜಕೀಯದಲ್ಲಿ ಆಮ್‌ ಆದ್ಮಿ ಪಾರ್ಟಿಯು ಹೊಸ ಶಕೆ ಆರಂಭಿಸಿದೆ. ರಾಜಕಾರಣಿಗಳೆಂದರೆ ಭ್ರಷ್ಟರು, ಸ್ವಾರ್ಥಿಗಳು ಹಾಗೂ ಸೋಂಬೇರಿಗಳು ಎಂಬ ಭಾವನೆ ಜನರಲ್ಲಿತ್ತು. ಆದರೆ ದೆಹಲಿಯ ಅರವಿಂದ್‌ ಕೇಜ್ರಿವಾಲ್‌ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ತಂದ ಕ್ರಾಂತಿಕಾರಿ ಬದಲಾವಣೆ, ಜನರಲ್ಲಿ ರಾಜಕೀಯದ ಬಗ್ಗೆ ಆಶಾಭಾವನೆ ಮೂಡಿಸಿದೆ. ವಿಶೇಷವಾಗಿ ಯುವಜನತೆಯು ರಾಜಕೀಯದತ್ತ ಮುಖ ಮಾಡಿ, ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗಲು ಆಮ್‌ ಆದ್ಮಿ ಪಾರ್ಟಿಯು ಅತ್ಯುತ್ತಮ ವೇದಿಕೆ ಕಲ್ಪಿಸಿದೆ ಎಂದರು.

ಇದನ್ನೂ ಓದಿ:ಯುವತಿಗೆ ಲಿವರ್ ಆಪರೇಷನ್​​: ಝೀರೋ ಟ್ರಾಫಿಕ್​​ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ರವಾನೆ

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಹಾಗೂ ಮಾಜಿ ಸಂಸದ ಡಾ. ವೆಂಕಟೇಶ್ ಮಾತನಾಡಿ, ಸಮಾಜಮುಖಿ ಜವಾಬ್ದಾರಿಗಳನ್ನು ನಿಭಾಯಿಸಿ ಅನುಭವ ಹೊಂದಿರುವ ಮಂಜುನಾಥ್‌ ಬಳಗೆರೆಯವರು ಪಕ್ಷ ಸೇರಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಇಂತಹ ಇನ್ನೂ ಅನೇಕ ನಾಯಕರು ಪಕ್ಷ ಸೇರಲಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟಿಸಿ ಮುಂದಿನ ಬಿಬಿಎಂಪಿ, ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ. ರಾಜ್ಯವನ್ನು ಲೂಟಿ ಮಾಡುತ್ತಿರುವ ಜೆಸಿಬಿ ಪಕ್ಷಗಳಾದ ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿಯ ಭ್ರಷ್ಟ ಆಡಳಿತವನ್ನು ಆಮ್‌ ಆದ್ಮಿ ಪಾರ್ಟಿಯು ಶಾಶ್ವತವಾಗಿ ಕೊನೆಗೊಳಿಸಲಿದೆ ಎಂದು ಹೇಳಿದರು.

ABOUT THE AUTHOR

...view details