ಬೆಂಗಳೂರು: ಪ್ರಸ್ತುತ ಬಿಬಿಎಂಪಿ ಸದಸ್ಯರ ಅವಧಿ ಕೊನೆಗೊಳ್ಳುವುದರಿಂದ ನಾಡಪ್ರಭು ಕೇಂಪೇಗೌಡ ದಿನಾಚರಣೆ ನಡೆಸಲು ಮುಹೂರ್ತ ನಿಗದಿಯಾಗಿದೆ.
ನಾಳೆ ನಾಡಪ್ರಭು ಕೆಂಪೇಗೌಡ ದಿನಾಚರಣೆಯ ಸರಳ ಆಚರಣೆ - BBMP latest news
ಕೊರೊನಾ ವಾರಿಯರ್ಸ್ಗೆ ಕೆಂಪೇಗೌಡ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದ್ದು, ಇಪ್ಪತ್ತು ಮಂದಿಯಿಂದ ಮೂವತ್ತು ಮಂದಿಗೆ ಏರಿಕೆಯಾಗಿದೆ. ಆದ್ರೆ ಪುರಸ್ಕೃತರ ಪಟ್ಟಿ ಇನ್ನೂ ಅಂತಿಮವಾಗಿಲ್ಲ.
ಈ ಬಾರಿ ಕೊರೊನಾ ವಾರಿಯರ್ಸ್ಗೆ ಕೆಂಪೇಗೌಡ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದ್ದು, ಇಪ್ಪತ್ತು ಮಂದಿಯಿಂದ ಮೂವತ್ತು ಮಂದಿಗೆ ಏರಿಕೆಯಾಗಿದೆ. ಆದ್ರೆ ಪುರಸ್ಕೃತರ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ವೈದ್ಯರು, ಸ್ಮಶಾನದ ನೌಕರರು, ಡಿಜೆಹಳ್ಳಿ ಗಲಭೆ ಪ್ರಕರಣದಲ್ಲಿ ಧೈರ್ಯ ಮೆರೆದ ಮಹಿಳಾ ಎಸ್ ಐ ಸೇರಿದಂತೆ ಹಲವರನ್ನು ಆಯ್ಕೆ ಮಾಡಲಾಗಿದೆ ಎಂದು ಮೇಯರ್ ತಿಳಿಸಿದರು.
ಕೆಂಪೇಗೌಡ ದಿನಾಚರಣೆ ಬಗ್ಗೆ ಪಾಲಿಕೆ ಸದಸ್ಯರಿಗೇ ಮಾಹಿತಿ ಕೊಟ್ಟಿಲ್ಲ. ಪ್ರಶಸ್ತಿ ಬಗ್ಗೆಯೂ ನಮಗೆ ವಿಚಾರ ತಿಳಿಸಿಲ್ಲ ಎಂದು ಕೆಲ ಪಾಲಿಕೆ ಸದಸ್ಯರು ಅಸಮಾಧಾನ ಹೊರಹಾಕಿದರು. ಇನ್ನು ಕೆಂಪೇಗೌಡ ದಿನಾಚರಣೆ ಜೊತೆಗೆ ಅಂಬೇಡ್ಕರ್ ದಿನಾಚರಣೆಯನ್ನೂ ನಡೆಸಲು ಕೆಲ ಪಾಲಿಕೆ ಸದಸ್ಯರು ಮನವಿ ಮಾಡಿದ್ದಾರೆ.