ಕರ್ನಾಟಕ

karnataka

ETV Bharat / state

ದ್ವಿತೀಯ ಪಿಯು ಪಿಸಿಎಂಬಿ ಕನ್ನಡ ಮಾಧ್ಯಮದ ಪುಸ್ತಕ ಲಭ್ಯ: ಸಚಿವ ಸುರೇಶ್ ಕುಮಾರ್

ದ್ವಿತೀಯ ಪಿಯುಸಿಯ ಪಿಸಿಎಂಬಿಯ ಕನ್ನಡ ಭಾಷಾಂತರ ಮಾಡಿರುವ ಪುಸ್ತಕಗಳನ್ನು, ಶಿಕ್ಷಣ ಸಚಿವ ಸುರೇಶ್​​ ಕುಮಾರ್​ ಅವರು ಇಂದು ಬಿಡುಗಡೆ ಮಾಡಿದ್ರು.

ಪಿಸಿಎಂಬಿ ಕನ್ನಡ ಮಾಧ್ಯಮದ ಪುಠ್ಯಪುಸ್ತಕ ಬಿಡುಗಡೆ
ಪಿಸಿಎಂಬಿ ಕನ್ನಡ ಮಾಧ್ಯಮದ ಪುಠ್ಯಪುಸ್ತಕ ಬಿಡುಗಡೆ

By

Published : Aug 20, 2020, 6:36 PM IST

ಬೆಂಗಳೂರು: ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದೇ ಮೊದಲ ಬಾರಿಗೆ ದ್ವಿತೀಯ ಪಿಯುಸಿ ತರಗತಿಗಳ ಪಿಸಿಎಂಬಿ ಪುಸ್ತಕಗಳ ಕನ್ನಡ ಭಾಷಾಂತರವನ್ನು ಮಾಡಲಾಗಿದೆ. ಇಂದು ಸಚಿವ ಸುರೇಶ್ ಕುಮಾರ್, ಮಲ್ಲೇಶ್ವರಂನ ಪಿಯು ಬೋರ್ಡ್​ನಲ್ಲಿ ಪಠ್ಯಪುಸ್ತಕ ಬಿಡುಗಡೆ ಮಾಡಿದರು.‌

ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ, ಜೀವಶಾಸ್ತ್ರದ ಪಠ್ಯಪುಸ್ತಕಗಳು ಕನ್ನಡದಲ್ಲಿ ಲಭ್ಯವಾಗಲಿವೆ. ಪುಸ್ತಕ‌ ಬಿಡುಗಡೆ ಬಳಿಕ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್, ಪಿಯುಸಿಗೆ ಸಿಬಿಎಸ್​​ಸಿ ಪಠ್ಯ ಅಳವಡಿಕೆ ಮಾಡಲಾಗಿದೆ. JEE ಪರೀಕ್ಷೆ ಸೇರಿದಂತೆ ಅನೇಕ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ ಕೊಡಲಾಗುತ್ತಿದೆ. ಹೀಗಾಗಿ ನಮ್ಮ ಕನ್ನಡ ಶಾಲೆ ಮಕ್ಕಳಿಗೆ ಅನುಕೂಲವಾಗಲು ಕನ್ನಡ ಮಾಧ್ಯಮದಲ್ಲಿ ಪುಠ್ಯಪುಸ್ತಕ ಬಿಡುಗಡೆ ಮಾಡಿದ್ದೇವೆ. ಎಲ್ಲಾ ಸರ್ಕಾರಿ ಕಾಲೇಜಿನ ಗ್ರಂಥಾಲಯದಲ್ಲಿ ಒಂದು ಸೆಟ್​ ಉಚಿತವಾಗಿ ಇಡುತ್ತೇವೆ. ಕಡಿಮೆ ಕಾಪಿ ಈಗ ಪ್ರಿಂಟ್ ಹಾಕಲಾಗಿದ್ದು, ಅವಶ್ಯಕತೆ ಬಿದ್ದರೆ, ಮತ್ತಷ್ಟು ಕಾಪಿ ಪ್ರಿಂಟ್ ಹಾಕ್ತಿವಿ. ಕನ್ನಡ ಮಾಧ್ಯಮದಲ್ಲಿ ಪುಸ್ತಕ ಇರೋದ್ರಿಂದ ನಮ್ಮ ಮಕ್ಕಳಿಗೆ ಅನುಕೂಲವಾಗಲಿದೆ. ಪ್ರಥಮ ಪಿಯುಸಿ ಪುಸ್ತಕಗಳು ಶೀಘ್ರವೇ ಕನ್ನಡ ಮಾಧ್ಯಮದಲ್ಲಿ ಬಿಡುಗಡೆ ಮಾಡಲಾಗುವುದು ಅಂತ ತಿಳಿಸಿದರು.

ಪಿಸಿಎಂಬಿ ಕನ್ನಡ ಮಾಧ್ಯಮದ ಪುಠ್ಯಪುಸ್ತಕ ಬಿಡುಗಡೆ

ಕನ್ನಡ ಮಾಧ್ಯಮದಲ್ಲಿ 10ನೇ ತರಗತಿ ಉತ್ತೀರ್ಣರಾಗಿ ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ದಾಖಲಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕನ್ನಡ ಅವತರಣಿಕೆ ಆಗಿದೆ. ಕಲಾ ವಿಭಾಗದ ಅಭ್ಯರ್ಥಿಗಳು ಮಾತ್ರವೇ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುತ್ತಿದ್ದರುವುದು. ಆದರೆ ಪಿಸಿಎಂಬಿ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದ ಪುಸ್ತಕಗಳು ಇಲ್ಲದ ಕಾರಣ ಇಷ್ಟವಿಲ್ಲದಿದ್ದರೂ ಇಂಗ್ಲಿಷ್​ನಲ್ಲೇ ಬರೆಯಬೇಕಿತ್ತು. ಈಗ ಕನ್ನಡ ಪುಸ್ತಕವೇ ಇರೋದಿಂದ್ರ ಪಾಠ - ಪರೀಕ್ಷೆ ಎಲ್ಲದಕ್ಕೂ ಸಹಾಯವಾಗಲಿದೆ ಎಂದರು.

ABOUT THE AUTHOR

...view details