ಕರ್ನಾಟಕ

karnataka

ETV Bharat / state

ಸ್ಯಾಂಡಲ್​ವುಡ್​ ಡ್ರಗ್ ಮಾಫಿಯಾ ಪ್ರಕರಣ: ತಡರಾತ್ರಿವರೆಗೆ ಆರೋಪಿಗಳ ವಿಚಾರಣೆ - Sandalwood Drug Mafia Case

ಸ್ಯಾಂಡಲ್ ವುಡ್​ನಲ್ಲಿ ಇದೆ ಎನ್ನಲಾದ ಡ್ರಗ್ಸ್​ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಪ್ರಶಾಂತ್ ರಂಕಾ, ರಾಹುಲ್, ಲೂಮ್ ಪೆಪ್ಪರ್ ಹಾಗೂ ರವಿಶಂಕರನನ್ನು ವಿಚಾರಣೆ ನಡೆಸಿದ್ದು, ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

inquiry of the accused
ಡ್ರಗ್ ಮಾಫಿಯಾ ಪ್ರಕರಣ: ತಡರಾತ್ರಿವರೆಗೆ ಆರೋಪಿಗಳ ವಿಚಾರಣೆ

By

Published : Sep 7, 2020, 11:05 AM IST

ಬೆಂಗಳೂರು:ಸ್ಯಾಂಡಲ್​ವುಡ್​ನಲ್ಲಿ ಇದೆ ಎನ್ನಲಾದ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರಿಯಿಡಿ ಸಿಸಿಬಿ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.

ಡ್ರಗ್ ಮಾಫಿಯಾ ಪ್ರಕರಣ: ತಡರಾತ್ರಿವರೆಗೆ ಆರೋಪಿಗಳ ವಿಚಾರಣೆ

ಪ್ರಶಾಂತ್ ರಂಕಾ, ರಾಹುಲ್, ಲೂಮ್ ಪೆಪ್ಪರ್ ಹಾಗೂ ರವಿಶಂಕರನನ್ನು ವಿಚಾರಣೆ ನಡೆಸಿದ್ದು, ಹಲವಾರು ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿಗಳು ತೆರಳುತ್ತಿದ್ದ ಪಾರ್ಟಿಗಳ ಬಗ್ಗೆ ಹಾಗೂ ಪಾರ್ಟಿಗಳಲ್ಲಿ ಭಾಗಿಯಾದವರು ಯಾರು?, ಪಾರ್ಟಿಗಳಿಗೆ ಅತಿ ಹೆಚ್ಚು ಬರ್ತಿದ್ದವರು ಯಾರು? ಡ್ರಗ್ಸ್ ಸಪ್ಲೈ ಮಾಡ್ತಿದ್ದವರು ಯಾರು? ಪಾರ್ಟಿಗಳಲ್ಲಿ ಡ್ರಗ್ಸ್ ಗಳ ಬಳಕೆಯ ಬಗ್ಗೆಯೂ ಆರೋಪಿಗಳಿಂದ ಮಾಹಿತಿಯನ್ನು ಬಾಯ್ಬಿಡಿಸಿದ್ದಾರೆ.

ಡ್ರಗ್ ಮಾಫಿಯಾ ಪ್ರಕರಣ: ತಡರಾತ್ರಿವರೆಗೆ ಆರೋಪಿಗಳ ವಿಚಾರಣೆ

ಇನ್ನು ಆರೋಪಿಗಳು ಡ್ರಗ್ ಪೆಡ್ಲರ್​ಗಳ ಜೊತೆ ಚಾಟಿಂಗ್, ಹಾಗೆ ಪೇಜ್ 3 ಪಾರ್ಟಿ ಆಯೋಜನೆ ಮಾಡುತ್ತಿದ್ದವರ ಕೆಲ ಆಯೋಜಕರ ಜೊತೆಗೆ ಚಾಟ್ ಮಾಡಿರೋದು ಪತ್ತೆಯಾಗಿದೆ ಎನ್ನಲಾಗ್ತಿದೆ. ಆ ಸಂದೇಶದ ಮಾಹಿತಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ‌. ಮತ್ತೊಂದೆಡೆ ಆಫ್ರಿಕನ್ ಭಾಷೆ ಬರುತ್ತೆ, ಇಂಗ್ಲಿಷ್ ಬರೋದಿಲ್ಲ ಎಂದು ಲೂಮ್ ಪೆಪ್ಪರ್ ಡ್ರಾಮಾ ಮಾಡುತ್ತಿದ್ದಾನೆ. ಆದರೆ ತನಿಖಾಧಿಕಾರಿಗಳು ರವಿಶಂಕರ್ ಮೊಬೈಲ್​ಗೆ ಇಂಗ್ಲಿಷ್​ನಲ್ಲಿ ವಾಟ್ಸ್ ಆ್ಯಪ್ ಸಂದೇಶ ಕಳಿಸಿದ್ದನ್ನು ಮುಂದಿಟ್ಟು ಲೂಮ್ ಪೆಪ್ಪರ್ ವಿಚಾರಣೆ ‌ನಡೆಸಿದ್ದಾರೆ.

ಡ್ರಗ್ ಮಾಫಿಯಾ ಪ್ರಕರಣ: ತಡರಾತ್ರಿವರೆಗೆ ಆರೋಪಿಗಳ ವಿಚಾರಣೆ

ಈ ವೇಳೆ ಆರೋಪಿ ಹೈಫೈ ಪಾರ್ಟಿ ಆಯೋಜಕನಷ್ಟೇ ಅಲ್ಲದೆ, ಪ್ರತಿಷ್ಠಿತ ಕಾಲೇಜಿನ ಕೆಲ ವಿದ್ಯಾರ್ಥಿಗಳೊಂದಿಗೂ ಸಂಪರ್ಕ, ಮಹದೇವಪುರ ವಲಯದ ಕೆಲ ಟೆಕ್ಕಿಗಳೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿರೋ ವಿಚಾರ‌ ಬಯಲಾಗಿದೆ. ಹಾಗೆ ಸಿಸಿಬಿ ವಶದಲ್ಲಿರುವ ರಾಗಿಣಿ, ರವಿಶಂಕರ್, ವೀರೇನ್ ಖನ್ನಾನನ್ನು ನ್ಯಾಯಾಧೀಶರ ಮುಂದೆ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಇಂದು ನ್ಯಾಯಾಧೀಶರ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಸಿಬಿ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ. ರವಿಶಂಕರ್ ಹೊರತುಪಡಿಸಿ ರಾಗಿಣಿ, ವೀರೇನ್ ಖನ್ನಾನನ್ನು ಕಸ್ಟಡಿಗೆ ವಹಿಸುವಂತೆ ಸಿಸಿಬಿ ಕೇಳುವ ಸಾಧ್ಯತೆಯಿದೆ.

ABOUT THE AUTHOR

...view details