ಕರ್ನಾಟಕ

karnataka

ಮಾದಕ​ ಜಾಲದೊಂದಿಗೆ 50 ಕ್ಕೂ ಹೆಚ್ಚು ಜನರಿಗೆ ನಂಟು: ಖ್ಯಾತ ನಟನ ಮಕ್ಕಳಿಗೆ ನೋಟಿಸ್​ ಸಾಧ್ಯತೆ

ಸ್ಯಾಂಡಲ್​ವುಡ್​ಗೆ​ ಡ್ರಗ್ಸ್​​ ಜಾಲ ನಂಟು ಆರೋಪ ಪ್ರಕರಣದ ಆಳಕ್ಕೆ ಇಳಿಯುತ್ತಿದ್ದಂತೆ ದಿನಕ್ಕೊಬ್ಬರ ಹೆಸರು ಪ್ರಸ್ತಾಪ ಆಗುತ್ತಿದೆ. ಮಾದಕ ಜಗತ್ತಿನ ಜೊತೆ ನಂಟು ಹೊಂದಿರುವ ಹಲವಾರು ಜನರ ಹೆಸರುಗಳನ್ನು ಪಟ್ಟಿ ಮಾಡಿರುವ ಸಿಸಿಬಿ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದರಲ್ಲಿ ಖ್ಯಾತ ನಟನ ಇಬ್ಬರು ಮಕ್ಕಳು ಸಹ ಇದ್ದಾರೆ ಎಂಬ ಮಾತು ಕೇಳಿಬಂದಿದೆ.

By

Published : Sep 21, 2020, 10:41 AM IST

Published : Sep 21, 2020, 10:41 AM IST

Sandalwood Drug link case Update
ಸ್ಯಾಂಡಲ್​ವುಡ್​ ಡ್ರಗ್​ ಜಾಲ ನಂಟು ಆರೋಪ

ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್​ ಜಾಲ ನಂಟು ಆರೋಪ ಪ್ರಕರಣದಲ್ಲಿ ಈಗಾಗಲೇ 15ಕ್ಕೂ ಹೆಚ್ಚು ಆರೋಪಿಗಳನ್ನ ಬಂಧಿಸಿಲಾಗಿದ್ದು, ಈಗ ಮತ್ತಷ್ಟು ರೋಚಕ ಮಾಹಿತಿಗಳು ಹೊರಬಂದಿವೆ.

ಬಂಧಿತ ಆರೋಪಿಗಳು ಈವರೆಗೆ ಡ್ರಗ್ ಮಾಫಿಯಾದಲ್ಲಿ ಭಾಗಿಯಾದ 50 ಕ್ಕೂ ಹೆಚ್ಚು ಜನರ ಹೆಸರುಗಳನ್ನ ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ. ಈ ಎಲ್ಲಾ ವಿಚಾರಗಳನ್ನ ಪಟ್ಟಿ ಮಾಡಿರುವ ಸಿಸಿಬಿ ಅಧಿಕಾರಿಗಳು, ಮಾದಕ ಜಾಲದ ನಂಟು ಹೊಂದಿರುವ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ಮಾಡಬೇಕಾ ಅಥವಾ ನೋಟಿಸ್ ಕೊಡಬೇಕಾ ಎಂಬ ನಿರ್ಧಾರ ಮಾಡಲಿದ್ದಾರೆ. ಹೀಗಾಗಿ, ಸಾಕ್ಷ್ಯ ಕಲೆ ಹಾಕುವಲ್ಲಿ ಸಿಸಿಬಿ ಅಧಿಕಾರಿಗಳು ನಿರತರಾಗಿದ್ದಾರೆ.

ಬಂಧಿತ ಆರೋಪಿಗಳು ಬಾಯ್ಬಿಟ್ಟಿರುವ ಹೆಸರಿನ ವ್ಯಕ್ತಿಗಳ ಚಲನವಲನಗಳ ಮೇಲೆ ಅಧಿಕಾರಿಗಳು ಈಗಾಗಲೇ ನಿಗಾ ಇಟ್ಟಿದ್ದಾರೆ. ಸೂಕ್ತ ಸಾಕ್ಷ್ಯ ಸಿಕ್ಕರೆ ದಾಳಿ ನಡೆಸಲಿದ್ದಾರೆ. ನಟ- ನಟಿಯರು, ರಾಜಕೀಯ ನಾಯಕರ ಮಕ್ಕಳು, ಉದ್ಯಮಿಗಳು ಮತ್ತು ಮಾಡೆಲ್​ಗಳ ಹೆಸರು ಪಟ್ಟಿ ಸಿಸಿಬಿ ಅಧಿಕಾರಿಗಳ ಕೈಯಲ್ಲಿದೆ ಎಂದು ಹೇಳಲಾಗ್ತಿದೆ.

ಖ್ಯಾತ ನಟರ ಮಕ್ಕಳಿಗೆ ನೋಟಿಸ್ ನೀಡಲು ಚಿಂತನೆ:

ಡ್ರಗ್ಸ್​ ಜಾಲ ನಂಟು ಪ್ರಕರಣದ ಆಳಕ್ಕೆ ಇಳಿಯುತ್ತಿದ್ದಂತೆ ಸ್ಟಾರ್ ಫ್ಯಾಮಿಲಿಯ ಇಬ್ಬರು ಮಕ್ಕಳ ಹೆಸರುಗಳು ಬೆಳಕಿಗೆ ಬಂದಿವೆ. ಈ ಇಬ್ಬರ ಚಲನವಲಗಳನ್ನ ಕಳೆದ ಒಂದು ವಾರದಿಂದ ಸಿಸಿಬಿ ಗಮನಿಸುತ್ತಿದೆ. ಇವರು ಬಂಧಿತ ಆರೋಪಿಗಳ ಜೊತೆ ಯಾವ ರೀತಿ ಸಂಪರ್ಕ ಹೊಂದಿದ್ದರು, ಎಲ್ಲೆಲ್ಲಿ ಪಾರ್ಟಿಗಳಲ್ಲಿ ಭಾಗಿಯಾಗಿದ್ರು, ಪಾರ್ಟಿಗಳಲ್ಲಿ ಡ್ರಗ್ಸ್​ ಸೇವನೆ ಮಾಡಿದ್ರಾ ಎಂಬ ಬಗ್ಗೆ ‌ಮಾಹಿತಿ ಕಲೆ ಹಾಕಿ ಸದ್ಯದಲ್ಲಿ ನೋಟಿಸ್ ನೀಡುವ ಸಾಧ್ಯತೆ ಇದೆ.‌

ABOUT THE AUTHOR

...view details