ಕರ್ನಾಟಕ

karnataka

ಸ್ಯಾಂಡಲ್​​​ವುಡ್​ ಡ್ರಗ್ಸ್‌ ಲಿಂಕ್ ಕೇಸ್, ಜಾಮೀನು ಕೋರಿ ಆರೋಪಿಗಳಿಂದ ಅರ್ಜಿ

ಪ್ರಕರಣದಲ್ಲಿ ಈಗಾಗಲೇ ಬಂಧಿತ 11ನೇ ಆರೋಪಿ ಹಾಗೂ ನಟಿ ಸಂಜನಾ ಆಪ್ತ ರಾಹುಲ್ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾನೆ. ನಗರದ 33ನೇ ಸಿಸಿಹೆಚ್ ಕೋರ್ಟ್​ಗೆ ರಾಹುಲ್ ಪರ ವಕೀಲರು ಜಾಮೀನು ನೀಡುವಂತೆ ಕೋರಿದ್ದಾರೆ..

By

Published : Sep 9, 2020, 5:52 PM IST

Published : Sep 9, 2020, 5:52 PM IST

sandalwood-drug-accused-peddlers-seeking-bail
ಸ್ಯಾಂಡಲ್​​​ವುಡ್​ ಡ್ರಗ್​ ಲಿಂಕ್ ಕೇಸ್​​: ಜಾಮೀನು ಕೋರಿ ಆರೋಪಿಗಳಿಂದ ಅರ್ಜಿ

ಬೆಂಗಳೂರು:ಸ್ಯಾಂಡಲ್​​​ವುಡ್​​​​ ಡ್ರಗ್ ಜಾಲದ ಪ್ರಮುಖ ಆರೋಪಿಯಾಗಿರುವ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ನಟಿ ರಾಗಿಣಿ ಅವರ ಸ್ನೇಹಿತನೆಂದು ಹೇಳಲಾಗಿರುವ ಆರೋಪಿ ವಿರುದ್ಧ ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ಎನ್​​​ಡಿಪಿಎಸ್ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್​​​ಗಳಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಶಿಪಪ್ರಕಾಶ್ ಅಲಿಯಾಸ್ ಚಿಪ್ಪಿ ಪ್ರಕರಣದ ಎ1 ಆರೋಪಿಯಾಗಿದ್ದಾರೆ.

ಈ ಹಿನ್ನೆಲೆ ಬಂಧನ ಭೀತಿಗೆ ಒಳಗಾಗಿರುವ ಚಿಪ್ಪಿ ನಿರೀಕ್ಷಣಾ ಜಾಮೀನು ಕೋರಿ ನಗರದ 33ನೇ ಸಿಟಿ ಸಿವಿಲ್&ಸೆಷನ್ಸ್ ಕೋರ್ಟ್​​​ಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಪ್ರಕರಣ ದಾಖಲಾಗುತ್ತಿದ್ದಂತೆ ಶಿವಪ್ರಕಾಶ್ ತಲೆ ಮರೆಸಿಕೊಂಡಿದ್ದಾರೆ.

ಸಂಜನಾ ಆಪ್ತ ರಾಹುಲ್​​​​ನಿಂದ್ಲೂ ಜಾಮೀನು ಅರ್ಜಿ:ಪ್ರಕರಣದಲ್ಲಿ ಈಗಾಗಲೇ ಬಂಧಿತ 11ನೇ ಆರೋಪಿ ಹಾಗೂ ನಟಿ ಸಂಜನಾ ಆಪ್ತ ರಾಹುಲ್ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ನಗರದ 33ನೇ ಸಿಸಿಹೆಚ್ ಕೋರ್ಟ್​ಗೆ ರಾಹುಲ್ ಪರ ವಕೀಲರು ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ABOUT THE AUTHOR

...view details