ಕರ್ನಾಟಕ

karnataka

ETV Bharat / state

ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆ : ಇಬ್ಬರ ಬಂಧನ 15 ಲಕ್ಷ ರೂ. ವಶ - ಬೆಂಗಳೂರಿನಲ್ಲಿ ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆ ಇಬ್ಬರ ಬಂಧನ

ಸಿಡಿಲು ಬಡಿದ ಒಂದು ಚೆಂಬು ತೋರಿಸಿ ಐಸೋಟೋಪ್ ರೇಡಿಯೇಷನ್ ಇದ್ದು, ಇದನ್ನು ಅಮೆರಿಕಾದ ನಾಸಾ, ಜಪಾನಿನ ಜಾಕ್ಸ್ ಕಂಪನಿಗೆ ಮಾರುತ್ತಿದ್ದೇವೆ. ಈ ದಂಧೆಯಲ್ಲಿ ಕೈಜೋಡಿಸಿ 1 ಕೋಟಿ ಹಣ ಹೂಡಿಕೆ ಮಾಡಿದರೆ ₹5 ಕೋಟಿ ನೀಡುತ್ತೇವೆ ಎಂದು ನಂಬಿಸಿದ್ದರು ಎಂದು ಪೂರ್ವ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ..

ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆ
ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆ

By

Published : Feb 5, 2022, 6:57 PM IST

ಬೆಂಗಳೂರು :ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಹಣ ಪಡೆದು ಮೋಸ ಮಾಡಿದ್ದ ಇಬ್ಬರು ವಂಚಕರನ್ನು ಪೂರ್ವ ವಿಭಾಗದ ಬ್ಯಾಟರಾಯನಪುರ ಠಾಣೆಯ ಪೊಲೀಸರು ಬಂಧಿಸಿ 15 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ನಾಗರಬಾವಿಯ ವಿಗ್ನೇಶ್ (37) ಮತ್ತು ಕೋಲಾರ ಜಿಲ್ಲೆ ಮೂಲದ ಮುಳಬಾಗಿಲಿನ ನಾಗರಾಜ್ (45) ಬಂಧಿತರು.

ಪ್ರಕರಣದ ಕುರಿತು ಪೂರ್ವ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿರುವುದು..

ನಗರದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್‌ ನಿಲ್ದಾಣದಲ್ಲಿ ನಿತಿನ್ ರಾಜ್ ಮತ್ತು ಸ್ನೇಹಿತ ಗೋಪಿ ಕಾರ್ತಿಕ್ ನಿಂತಿದ್ದಾಗ ಸುರೇಶ್ ಎಂದು ಹೇಳಿಕೊಂಡು ಇವರ ಬಳಿ ಬಂದ ವ್ಯಕ್ತಿ ರೈಸ್‌ಪುಲ್ಲಿಂಗ್ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದಾರೆ.

ಸಿಡಿಲು ಬಡಿದ ಒಂದು ಚೆಂಬು ತೋರಿಸಿ ಐಸೋಟೋಪ್ ರೇಡಿಯೇಷನ್ ಇದ್ದು, ಇದನ್ನು ಅಮೆರಿಕಾದ ನಾಸಾ, ಜಪಾನಿನ ಜಾಕ್ಸ್ ಕಂಪನಿಗೆ ಮಾರುತ್ತಿದ್ದೇವೆ. ಈ ದಂಧೆಯಲ್ಲಿ ಕೈಜೋಡಿಸಿ 1 ಕೋಟಿ ಹಣ ಹೂಡಿಕೆ ಮಾಡಿದರೆ ₹5 ಕೋಟಿ ನೀಡುತ್ತೇವೆ ಎಂದು ನಂಬಿಸಿದ್ದರು ಎಂದು ಪೂರ್ವ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ನಿತಿನ್ ರಾಜ್ ಮತ್ತು ಸ್ನೇಹಿತ ಗೋಪಿ ಕಾರ್ತಿಕ್‌ರಿಂದ ಒಟ್ಟು 48 ಲಕ್ಷ ರೂ. ಪಡೆದು ಮೋಸ ಮಾಡಿ ಪರಾರಿಯಾಗಿದ್ದರು. ಈ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಹಾಯಕ ಪೊಲೀಸ್ ಆಯುಕ್ತ ಕೋದಂಡರಾಮ್, ಇನ್​​ಸ್ಪೆಕ್ಟರ್ ಶಂಕರ್‌ನಾಯಕ್ ನೇತೃತ್ವದಲ್ಲಿ ಪಿಎಸ್‌ಐ ಸಂಜೀವ್, ಎಸ್‌ಐಗಳಾದ ರಮೇಶ್, ರಘು ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಆರೋಪಿಗಳ ಪತ್ತೆ ಕಾರ್ಯ ಕೈಗೊಂಡಿದ್ದರು ಎಂದಿದ್ದಾರೆ.

ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಅಮಾಯಕರನ್ನು ವಂಚಿಸುತ್ತಿದ್ದ ಆರೋಪಿಗಳ ಕುರಿತು ಸಮಗ್ರ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆ ನೆಡಸಿ ಇಬ್ಬರನ್ನು ಬಂಧಿಸಿದ್ದಾರೆ. 15 ಲಕ್ಷ ರೂ. ಹಣ ವಶಪಡಿಸಿಕೊಂಡು, ತಲೆ ಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details