ಕರ್ನಾಟಕ

karnataka

ಪಿಜಿ-ಸಿಇಟಿ ಹಾಗೂ ಡಿ-ಸಿಇಟಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ..

2021ನೇ ಸಾಲಿನ 2ನೇ ವರ್ಷದ/ಮೂರನೇ ಸೆಮಿಸ್ಟರ್​ನ ಇಂಜಿನಿಯರಿಂಗ್/ತಂತ್ರಜ್ಞಾನ ಕೋರ್ಸ್​ಗಳ ಪ್ರವೇಶಕ್ಕಾಗಿ ಅಕ್ಟೋಬರ್ 23ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ ಮುಂದೂಡಲಾಗಿತ್ತು..

By

Published : Oct 17, 2021, 8:17 PM IST

Published : Oct 17, 2021, 8:17 PM IST

exam
ಪರೀಕ್ಷೆ

ಬೆಂಗಳೂರು :ಪಿಜಿ-ಸಿಇಟಿಯ 2021ನೇ ಸಾಲಿನ ಎಂಬಿಎ, ಎಂಸಿಎ, ಎಂಟೆಕ್ ಕೋರ್ಸ್​ಗಳ ಪ್ರವೇಶಾತಿಗೆ ಅಕ್ಟೋಬರ್ 22 ಮತ್ತು 25ರಂದು ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ನಂತರ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಪ್ರಸ್ತುತ ಪಿಜಿಸಿಇಟಿ-2021ರ ಪ್ರವೇಶ ಪರೀಕ್ಷೆಯನ್ನು ನವೆಂಬರ್ 13 ಮತ್ತು 14ರಂದು ವೇಳಾಪಟ್ಟಿಯಂತೆ ನಡೆಸಲಾಗುತ್ತಿದೆ.

ಪಿಜಿ-ಸಿಇಟಿ ಹಾಗೂ ಡಿ-ಸಿಇಟಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಪ್ರಾಧಿಕಾರದ ವೆಬ್‌ಸೈಟ್​ನಿಂದ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾದ ದಿನಾಂಕಗಳನ್ನು ಸದ್ಯದಲ್ಲಿಯೇ ತಿಳಿಸಲಾಗುತ್ತೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್​ನಲ್ಲಿ ಪಡೆಯಬಹುದಾಗಿದೆ ಎಂದು ಕೆಇಎ ಪ್ರಕಟಣೆ ಹೊರಡಿಸಿದೆ.

ಡಿಪ್ಲೊಮಾ–2021– ಪರಿಷ್ಕೃತ ವೇಳಾಪಟ್ಟಿ

2021ನೇ ಸಾಲಿನ 2ನೇ ವರ್ಷದ/ಮೂರನೇ ಸೆಮಿಸ್ಟರ್​ನ ಇಂಜಿನಿಯರಿಂಗ್/ತಂತ್ರಜ್ಞಾನ ಕೋರ್ಸ್​ಗಳ ಪ್ರವೇಶಕ್ಕಾಗಿ ಅಕ್ಟೋಬರ್ 23ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ ಮುಂದೂಡಲಾಗಿತ್ತು.

ಪ್ರಸ್ತುತ 2021ರ ಪರೀಕ್ಷೆಯನ್ನು ನವೆಂಬರ್ 14ರಂದು ನಡೆಸಲಾಗುತ್ತಿದೆ. ಪ್ರಾಧಿಕಾರದ ವೆಬ್‌ಸೈಟ್​ನಿಂದ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾದ ದಿನಾಂಕಗಳನ್ನು ಸದ್ಯದಲ್ಲಿಯೇ ತಿಳಿಸಲಾಗುತ್ತೆ ಎಂದಿದೆ.

ಓದಿ:ಈಶ್ವರಪ್ಪ ಅವರ ಹಿಂದೆ RSS ಎಂಬ ದೊಡ್ಡ ಶಕ್ತಿಯಿದೆ: ವಿನಯ್ ಗುರೂಜಿ

ABOUT THE AUTHOR

...view details