ಕರ್ನಾಟಕ

karnataka

ಸದನದಲ್ಲಿ ಸಿಡಿ 'ಪ್ಲೇ' ಆಗದೇ ಸ್ಟ್ರಕ್ ಆಗ್ಹೋಯ್ತು.. ಕಾರಣ ಇಷ್ಟೇ..

ರಮೇಶ್ ಜಾರಕಿಹೊಳಿ ವಿಚಾರ ಪ್ರಸ್ತಾಪ ಮಾಡದಿರಲು ಒಂದು ಕಾರಣವಿದೆ. ಸಿದ್ದರಾಮಯ್ಯ ಅವರ ಆಪ್ತ ಮತ್ತು ರಮೇಶ್ ಜಾರಕಿಹೊಳಿ ಅವರ ಸಹೋದರ ಸತೀಶ್​ ಜಾರಕಿಹೊಳಿ ಇತ್ತೀಚೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದಾರೆ..

By

Published : Mar 15, 2021, 6:59 PM IST

Published : Mar 15, 2021, 6:59 PM IST

Updated : Mar 15, 2021, 7:19 PM IST

ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಂಗಳೂರು :ಶಿವರಾತ್ರಿ ಹಬ್ಬದ ಪ್ರಯುಕ್ತ ನಾಲ್ಕು ದಿನಗಳಿಂದ ರಜೆ ಇದ್ದ ಕಾರಣ, ವಿಧಾನಮಂಡಲ ಬಜೆಟ್ ಅಧಿವೇಶನ ಇಂದು ಆರಂಭವಾಯಿತು. ಅಧಿವೇಶನದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸದನದಲ್ಲಿ ಸದ್ದು ಮಾಡಬಹುದು ಎಂದು ಸರ್ಕಾರ ನಿರೀಕ್ಷಿಸಿತ್ತು. ಆದ್ರೆ, ಆ ಕುಟುಂಬ ಸದಸ್ಯರ ಮನವಿಗೆ ಸ್ಪಂದಿಸಿದ ಪ್ರತಿಪಕ್ಷದ ನಾಯಕರು ಸಿಡಿ ಪ್ರಕರಣವನ್ನು ಪ್ರಸ್ತಾಪದಿಂದ ಕೈಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ರಮೇಶ್ ಜಾರಕಿಹೊಳಿ ಸಿಡಿ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳದಂತೆ ಜಾರಕಿಹೊಳಿ ಕುಟುಂಬದ ಹಿರಿಯ ಸದಸ್ಯ, ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿವೆ. ಹಾಗಾಗಿ, ಈ ವಿಚಾರ ಸದನದಲ್ಲಿ ಚರ್ಚೆಗೆ ಬಂದಿಲ್ಲ.

ಸಿಡಿ ವಿಚಾರದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ರಮೇಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿರುವುದರಿಂದ ಜೆಡಿಎಸ್‍ ಸದಸ್ಯರು ಸಹ ಸಿಡಿ ವಿಚಾರದಿಂದ ದೂರ ಉಳಿದಿದ್ದರು.

ಆಡಳಿತ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವುದನ್ನು ಯಾವತ್ತೂ ಕಳೆದುಕೊಳ್ಳದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರಮೇಶ್​ ಜಾರಕಿಹೊಳಿ ಅವರ ಸಿಡಿ ವಿಚಾರದಲ್ಲಿ ಮಾತ್ರ ಬೇರೆಯೇ ಲೆಕ್ಕ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ರಮೇಶ್ ಜಾರಕಿಹೊಳಿ ವಿಚಾರ ಪ್ರಸ್ತಾಪ ಮಾಡದಿರಲು ಒಂದು ಕಾರಣವಿದೆ. ಸಿದ್ದರಾಮಯ್ಯ ಅವರ ಆಪ್ತ ಮತ್ತು ರಮೇಶ್ ಜಾರಕಿಹೊಳಿ ಅವರ ಸಹೋದರ ಸತೀಶ್​ ಜಾರಕಿಹೊಳಿ ಇತ್ತೀಚೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದಾರೆ.

ದಯವಿಟ್ಟು ಹೇಗಾದರೂ ಮಾಡಿ ಈ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಬೇಡಿ, ಇದರಿಂದ ಇಡೀ ಜಾರಕಿಹೊಳಿ ಕುಟುಂಬಕ್ಕೆ ತುಂಬಾ ಮುಜುಗರವುಂಟಾಗುತ್ತದೆ ಎಂದು ಮನವಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಓದಿ:ಶಂಕಿತ ಆರೋಪಿಯ ವಾಯ್ಸ್ ಸ್ಯಾಂಪಲ್ ಪಡೆದು ಎಫ್ಎಸ್ಎಲ್​ಗೆ ರವಾನೆ: ಇಂದು ವರದಿ ಸಾಧ್ಯತೆ

ಸತೀಶ್ ಜಾರಕಿಹೊಳಿ ಮಾಡಿದ ಮನವಿಗೆ ಸಿದ್ದರಾಮಯ್ಯ ಮನಸ್ಸು ಬದಲಿಸಿದರೆ ಎಂಬ ಪ್ರಶ್ನೆ ಮೂಡಿದೆ. ಒಟ್ಟಾರೆ, ಇಂದು ಸದನ ಸರಾಗವಾಗಿ ನಡೆಯುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ, ಬೆಳಗ್ಗೆಯಿಂದ ವಿಧಾನಸಭೆ ಕಲಾಪ ಸುಗಮವಾಗಿ ನಡೆದಿದ್ದು, ಸರ್ಕಾರ ಹಾಗೂ ಆಡಳಿತ ಪಕ್ಷಕ್ಕೆ ಒಂದು ರೀತಿಯ ಸಮಾಧಾನ ತಂದಿದೆ.

ಆಡಳಿತ ಪಕ್ಷ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಂಚಮಸಾಲಿ ಹೋರಾಟದ ಬಗ್ಗೆ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಆದರೆ, ಅದು ಸಹ ಇಂದು ಇತ್ಯರ್ಥವಾಗಿದ್ದು, ಮುಖ್ಯಮಂತ್ರಿಗಳು ನೀಡಿದ ಆಶ್ವಾಸನೆಗೆ ಸಮಾಧಾನಗೊಂಡ ಯತ್ನಾಳ್ ಹಾಗೂ ಸಮಾಜದ ಸ್ವಾಮೀಜಿಗಳು ಧರಣಿಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದರು. ಸರ್ಕಾರಕ್ಕೆ ಇದು ಒಂದು ಸಮಾಧಾನದ ಸಂಗತಿಯಾಗಿದೆ.

Last Updated : Mar 15, 2021, 7:19 PM IST

ABOUT THE AUTHOR

...view details