ಬೆಂಗಳೂರು: ಇತ್ತೀಚೆಗಂತೂ ತಿಂಗಳಿಗೆ 2-3 ಸಲ ಭಾರತ್ ಬಂದ್, ಕರ್ನಾಟಕ ಬಂದ್ ,ಬೆಂಗಳೂರು ಬಂದ್ ಎಂದು ಮಾಡುವುದು ಮಾಮೂಲಿಯಾಗಿಬಿಟ್ಟಿದೆ.
ಆದರೆ ಮುಷ್ಕರ, ಬಂದ್, ಪ್ರತಿಭಟನೆಗಳೇ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಯಾಕೆಂದರೆ ತಿಂಗಳಿಗೊಂದು ನಡೆಯುವ ಪ್ರತಿಭಟನೆಗಳಿಂದ ಸಾರ್ವಜನಿಕರ ಆಸ್ತಿಗೆ ಪೆಟ್ಟು ಬೀಳುತ್ತಿದೆ. ಇದಕ್ಕೆ ಕೆಎಸ್ಆರ್ಟಿಸಿ ಬಸ್ ಡಿಪೋ ತಾಜಾ ಉದಾಹರಣೆಯಾಗಿದೆ.
ಕೆಎಸ್ಆರ್ಟಿಸಿ ನಿಗಮಕ್ಕೆ ಆಗಿರುವ ನಷ್ಟದ ವಿವರ ಪ್ರತಿಭಟನೆಗಳಿಗೆ ಬೇಗನೆ ಬಲಿಯಾಗುವುದು ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳು. ಇವುಗಳನ್ನು ಸಾರ್ವಜನಿಕ ಆಸ್ತಿ ಎಂದು ಪರಿಗಣಿಸದ ಕಿಡಿಗೇಡಿಗಳು ಅವುಗಳನ್ನು ಧ್ವಂಸ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇದರ ಪರಿಣಾಮ, ಕೆ ಎಸ್ ಆರ್ ಟಿ ಸಿಗೆ ಮೂರು ವರ್ಷದಲ್ಲಿ 78,01,874 ನಷ್ಟು ನಷ್ಟವಾಗಿದೆ. ಅಷ್ಟೇ ಅಲ್ಲದೇ 244 ಬಸ್ ಗಳು ಜಖಂ ಆಗಿದ್ದರೆ, 5 ಬಸ್ಸುಗಳು ಸುಟ್ಟು ಭಸ್ಮವಾಗಿವೆ.
2016 - 17 ರಲ್ಲಿ 171 ಬಸ್ ಜಖಂ ಆಗಿದ್ದು 19,53,612 ರೂ ನಷ್ಟ ಉಂಟಾಗಿದೆ. 4 ಸುಟ್ಟ ಬಸ್ಸುಗಳಿಂದ 37,50,000 ರೂ ನಷ್ಟವಾಗಿದೆ. 2017 - 18 ರಲ್ಲಿ 16 ಬಸ್ಸುಗಳು ಇದರಿಂದ 1,25,206 ರೂ ನಷ್ಟ,, 2018 - 19 ರಲ್ಲಿ 34 ಬಸ್ಸುಗಳು ಜಖಂ, ಇದರಿಂದ 5,40,556 ರೂ ನಷ್ಟ ಉಂಟಾಗಿದೆ. ಏಪ್ರಿಲ್ ನಿಂದ ಈವರೆಗೂ 23 ಬಸ್ಸುಗಳು ಜಖಂಗೊಂಡಿದ್ದು 2,32,500 ರೂ ಹಾಗೂ ಒಂದು ಬಸ್ಸು ಸುಟ್ಟು ಭಸ್ಮವಾಗಿದ್ದು 12,00,000 ರೂ ಗಳಷ್ಟು ನಷ್ಟವಾಗಿದೆ. ಒಟ್ಟು ಈ ಮೂರು ವರ್ಷದಲ್ಲಿ ಇದುವರೆಗೆ 7,801,874 ರೂಪಾಯಿಗಳಷ್ಟು ನಷ್ಟವಾಗಿರುವ ಕುರಿತು ಕೆಎಸ್ ಆರ್‌ಟಿಸಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.