ಕರ್ನಾಟಕ

karnataka

ETV Bharat / state

ಬೆಂಗಳೂರಿಗೆ ಆಗಮಿಸಲಿರುವ ರಾಷ್ಟ್ರಪತಿ, ಪ್ರಧಾನಿ; ಐಎಸ್​ಡಿ, ಐಬಿ ಕಟ್ಟೆಚ್ಚರ - ಭದ್ರತಾ ದೃಷ್ಟಿಯಿಂದ ಮಫ್ತಿಯಲ್ಲಿ ಪೊಲೀಸರ ರೌಂಡ್​

ಜೂನ್​ ತಿಂಗಳಿನಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಮತ್ತು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ.

President, Prime Minister visits Bengaluru
ರಾಷ್ಟ್ರಪತಿ, ಪ್ರಧಾನಿ ಬೆಂಗಳೂರಿಗೆ‌ ಆಗಮನ

By

Published : Jun 9, 2022, 3:28 PM IST

ಬೆಂಗಳೂರು: ಇದೇ ತಿಂಗಳು ವಿಶೇಷ ಕಾರ್ಯಕ್ರಮಗಳ ಸಲುವಾಗಿ ರಾಜ್ಯ ರಾಜಧಾನಿ ಬೆಂಗಳೂರಿಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಹಾಗೂ‌ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಐಬಿ ಹಾಗೂ ಐಎಸ್​ಡಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಜೂ.14ರಂದು ಬೆಂಗಳೂರಿಗೆ ರಾಮನಾಥ್ ಕೋವಿಂದ್ ಹಾಗೂ 21ರಂದು ಯೋಗ ದಿನಾಚರಣೆಗೆ ಮೋದಿ ಆಗಮಿಸುವರು.‌

ವಿಮಾನ ನಿಲ್ದಾಣ, ರೈಲು, ಬಸ್ ನಿಲ್ದಾಣಗಳಿಂದ ರಾಜಧಾನಿಗೆ ಬಂದು ಹೋಗುವ ಪ್ರಯಾಣಿಕರ ಬಗ್ಗೆ ನಿಗಾ ವಹಿಸಲಾಗುತ್ತಿದೆ‌. ರಾಜ್ಯ ಆಂತರಿಕಾ ಭದ್ರತಾ ಪಡೆ (ಐಎಸ್​ಡಿ), ರಾಜ್ಯ ಗುಪ್ತಚರ ಇಲಾಖೆ ಸೇರಿದಂತೆ ಸ್ಥಳೀಯ ಪೊಲೀಸರು ಮಫ್ತಿಯಲ್ಲಿ ಭದ್ರತೆ ನೋಡಿಕೊಳ್ಳುತ್ತಿದ್ದಾರೆ. ಹೊರದೇಶದಿಂದ ಬಂದಿರುವ ಪ್ರಯಾಣಿಕರ ಚಲನವಲನದ ಮೇಲೂ ನಿಗಾ ವಹಿಸಲಾಗುತ್ತಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಿರಿಯ‌ ಪೊಲೀಸ್ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ್ದಾರೆ.

ಇದನ್ನೂ ಓದಿ:'ನಾನು ಬಜೆಪಿ ನಾಯಕರನ್ನು ಟೀಕಿಸಿದರೆ ನಮ್ಮ ಪಕ್ಷದವರೇ ನನ್ನನ್ನು ಸಮರ್ಥಿಸಿಕೊಳ್ಳುವುದಿಲ್ಲ'

For All Latest Updates

TAGGED:

ABOUT THE AUTHOR

...view details