ಕರ್ನಾಟಕ

karnataka

ETV Bharat / state

290 ಕೋಟಿ ರೂ ಪವರ್ ಬ್ಯಾಂಕ್ ಹಗರಣ: ಕೇರಳ ಮೂಲದ ಪ್ರಮುಖ ಆರೋಪಿ ಅರೆಸ್ಟ್

ದಿನ ಹಾಗೂ ವಾರದ ಲೆಕ್ಕದಲ್ಲಿ ಹಣ ಹೂಡಿಕೆ ಮಾಡಿದರೆ ಬಡ್ಡಿ ಸಮೇತ ದುಪ್ಪಟ್ಟು ಹಣ ನೀಡುವುದಾಗಿ ಹೇಳಿ 290 ಕೋಟಿ ರೂ.ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

By

Published : Jul 7, 2021, 10:17 PM IST

Bangalore
ಅನಸ್ ಅಹಮ್ಮದ್, ಬಂಧಿತ ಆರೋಪಿ

ಬೆಂಗಳೂರು: ಪವರ್ ಬ್ಯಾಂಕ್ ಹಾಗೂ ಸನ್ ಫ್ಯಾಕ್ಟರಿ ಹೆಸರಿನ ಆನ್‌ಲೈನ್ ಮೊಬೈಲ್‌ ಅಪ್ಲಿಕೇಷನ್​​ಗಳ ಮೂಲಕ ಕೋಟ್ಯಂತರ ರೂ. ಹೂಡಿಕೆ ಮಾಡಿಕೊಂಡು ವಂಚಿಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ತುಮಕೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಅನಸ್ ಅಹಮ್ಮದ್ ಬಂಧಿತ ಆರೋಪಿ. ನಾಗೇಶ್ ಎಂಬುವರಿಗೆ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ನೀಡುವುದಾಗಿ ಹೇಳಿ 44 ಸಾವಿರ ರೂ. ಪಾವತಿಸಿಕೊಂಡು ಕೆಲ ದಿನಗಳ ಬಳಿಕ ಗೂಗಲ್‌ ಪ್ಲೇ ಸ್ಟೋರ್​ನಲ್ಲಿ ಪವರ್ ಬ್ಯಾಂಕ್ ಆ್ಯಪ್ ಡಿಲಿಟ್ ಮಾಡಿ ಅಸಲು ಹಣ ನೀಡದೆ ವಂಚಿಸಿದ ಆರೋಪದಡಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಜತೆಗೆ ಈತನ ಪತ್ನಿ ಚೀನಾ ಪ್ರಜೆ ಹೂ ಕ್ಸಿಯೊಲಿನ್ ವಶಕ್ಕೆ‌‌ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ದಿನ ಹಾಗೂ ವಾರದ ಲೆಕ್ಕದಲ್ಲಿ ಹಣ ಹೂಡಿಕೆ ಮಾಡಿದರೆ ಬಡ್ಡಿ ಸಮೇತ ದುಪ್ಪಟ್ಟು ಹಣ ನೀಡುವುದಾಗಿ ಹೇಳಿ ಸಾವಿರಾರು ಜನರಿಂದ ಸುಮಾರು 290 ಕೋಟಿ‌ ರೂ. ಹೂಡಿಕೆ ಮಾಡಿಸಿ ವಂಚಿಸಿದ ಪ್ರಕರಣವಿದು. ‘ಕೇರಳ‌ ಮೂಲದ‌ ಅನಸ್, ಪವರ್ ಬ್ಯಾಂಕ್ ಸೇರಿ ವಿವಿಧ ಆನ್ ಲೈನ್ ಮೊಬೈಲ್ ಅಪ್ಲಿಕೇಷನ್​​ಗಳಿಂದ ಹೂಡಿಕೆ ಮಾಡಿಕೊಂಡ ಹಣವನ್ನು ಅಕ್ರಮವಾಗಿ ಹಣ ವರ್ಗಾವಣೆ ಹಾಗೂ ಹವಾಲಾ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ.

ಚೀನಾದ ಹವಾಲಾ ದಂಧೆಕೋರರ ಸಂಪರ್ಕದಲ್ಲಿದ್ದು, ಅಕ್ರಮ ಹಣ ವರ್ಗಾವಣೆಗಾಗಿ ಬುಲ್‌ಫಿನ್ಚ್ ಸಾಫ್ಟ್‌ವೇರ್, ಹೆಚ್ ಆ್ಯಂಡ್ ಎಸ್ ವೆಂಚರ್ಸ್, ಕ್ಲಿಪ್ಪೊರ್ಡ್ ವೆಂಚರ್ಸ್ ಹಾಗೂ ಬಯೋಸಾಫ್ಟ್ ವೆಂಚರ್ಸ್ ಕಂಪನಿ ತೆರೆದಿದ್ದ. ಈತನಿಗೆ ಪತ್ನಿ ಹೂ ಕ್ಸಿಯೊಲಿನ್ ಸಾಥ್ ನೀಡಿದ್ದಳು.

11 ಮಂದಿ ಆರೋಪಿಗಳ ಬಂಧನ:

ಕಳೆದ ತಿಂಗಳು ರೇಜರ್ ಪೇ ಸಾಫ್ಟ್‌ವೇರ್ ನೀಡಿದ ದೂರಿನ ಮೇರೆಗೆ ಚೀನಾ ಹಾಗೂ ಟಿಬೇಟಿಯನ್ ಪ್ರಜೆ ಸೇರಿದಂತೆ 11 ಮಂದಿ ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಪ್ರಕರಣ ತನಿಖೆ ಹೈಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿಯನ್ನು ಸಿಐಡಿ ಬಾಡಿ ವಾರೆಂಟ್ ಪಡೆದು ವಿಚಾರಣೆ ನಡೆಸಲು ಅಸಾಧ್ಯವಾಗಿದೆ. ಇನ್ನೊಂದೆಡೆ ತಡೆಯಾಜ್ಞೆ ತೆರವುಗೊಳಿಸಲು ಸಿಐಡಿ ಪೊಲೀಸರು ಕಾನೂನು ಹೋರಾಟ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಏಜೆನ್ಸಿಗಳಿಂದ ತನಿಖೆ:

ದೇಶದಲ್ಲಿ ಒಟ್ಟಾರೆ 250 ಪ್ರಕರಣಗಳು ದಾಖಲಾಗಿದ್ದು, 20ಕ್ಕಿಂತ ಜನರನ್ನು ಬಂಧಿಸಲಾಗಿದೆ. ಈ ಪ್ರಕರಣವು ವಿದೇಶಿ ಪ್ರಜೆಗಳು ಮತ್ತು ಕಂಪೆನಿಗಳನ್ನು ಒಳಗೊಂಡಿರುವುದರಿಂದ, ರಾಷ್ಟ್ರೀಯ ಏಜೆನ್ಸಿಗಳಾದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), ಇಂಟಲಿಜೆನ್ಸ್ ಬ್ಯೂರೋ (ಐಬಿ), ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ.

ಇದನ್ನೂ ಓದಿ:Fake App: ಚೀನಾದಿಂದ ಭಾರತೀಯರಿಗೆ ₹ 360 ಕೋಟಿ ದೋಖಾ.. ವಂಚನೆ ಜಾಲದಲ್ಲಿ ಬೆಂಗಳೂರು ದಂಪತಿ!

ABOUT THE AUTHOR

...view details