ಕರ್ನಾಟಕ

karnataka

ETV Bharat / state

ಪ್ಲಾಸ್ಟಿಕ್​​ ಗನ್​​ ​​ತೋರಿಸಿ ಮಾಂಗಲ್ಯ ಸರ ಕಳ್ಳತನ: ಖದೀಮ ಕ್ಯಾಬ್​​ ಚಾಲಕ ಅಂದರ್​​ - ಬೆಂಗಳೂರು ಕ್ರೈಮ್​ ನ್ಯೂಸ್

ಪ್ಲಾಸ್ಟಿಕ್​​ ಗನ್​​ ಹಿಡಿದು ಒಂಟಿ ಮಹಿಳೆ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನದ ಸರವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸದು ಬಂಧಿಸಿದ್ದಾರೆ.

Police arrested thief at Bangalore
ಪ್ಲಾಸ್ಟಿಕ್​​ ಗನ್​​ ​​ತೋರಿಸಿ ಮಾಂಗಲ್ಯ ಸರ ಕಳವು ಮಾಡಿದ್ದ ಅರೋಪಿ ಅಂದರ್​

By

Published : Dec 16, 2021, 3:40 PM IST

ಬೆಂಗಳೂರು: ಪ್ಲಾಸ್ಟಿಕ್​​ ಗನ್​​ ಹಿಡಿದು ಒಂಟಿ ಮಹಿಳೆ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನದ ಸರ ಕಳ್ಳತನ ಮಾಡಿದ್ದ ಖದೀಮನನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿದ್ದಾರೆ.

ಸಿಂಗಾಪುರ ನಿವಾಸಿ ನಿಂಗಪ್ಪ ಬಂಧಿತ ಆರೋಪಿ. ಈತ ವೃತ್ತಿಯಲ್ಲಿ ಚಾಲಕನಾಗಿದ್ದು, ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ರೂಗಳಷ್ಟು ಸಾಲ ಮಾಡಿಕೊಂಡಿದ್ದನು. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ನಿಂಗಪ್ಪ, ಸಾಲ ತೀರಿಸಲು ಒದ್ದಾಡುತ್ತಿದ್ದನು.

ಆರೋಪಿಯಿಂದ ವಶಕ್ಕೆ ಪಡೆದಿರುವ ವಸ್ತುಗಳು

ಕಳೆದೆರಡು ವರ್ಷಗಳ ಹಿಂದೆ ಅಬ್ಬಿಗೆರೆಯ ಎನ್​​ಎಚ್ಆರ್ ಲೇಔಟ್​​​​​ನಲ್ಲಿ ವಾಸವಾಗಿದ್ದ ದೂರುದಾರರ ಮಹಿಳೆಯ ಮಾವ ಆರೋಪಿಗೆ ಕ್ಯಾಬ್ ಅನ್ನು​ ಬಾಡಿಗೆಗೆ ನೀಡಿದ್ದರು. ಅಲ್ಲೆ ಕೆಲಸ ಮಾಡುತ್ತ ಮನೆಯಲ್ಲಿ ಯಾರ್ಯಾರು ಇದ್ದಾರೆ ಎಂಬುದರ ಕುರಿತಂತೆ ಖದೀಮ ನಿಗಾ ಇಟ್ಟಿದ್ದರು. ನಿನ್ನೆ ಮಧ್ಯಾಹ್ನ ಮನೆಯಲ್ಲಿ ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿ ಮನೆಗೆ ನುಗ್ಗಿ ಪ್ಲಾಸ್ಟಿಕ್ ಗನ್​​ ತೋರಿಸಿ ಆಕೆಯ ಮಾಂಗಲ್ಯ ಸರವನ್ನು ಎಗರಿಸಿ ಪರಾರಿಯಾಗಿದ್ದ.

ಈ ಸಂಬಂಧ ಮಹಿಳೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ 13 ಗಂಟೆಯಲ್ಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 16 ಗ್ರಾಂ. ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ‌.

ಇದನ್ನೂ ಓದಿ: ಪ್ರೇಯಸಿಗೆ ಗಿಫ್ಟ್​​ ನೀಡಲು ಚಿನ್ನದ ಉಂಗುರ ಕದ್ದ ಪ್ರೇಮಿ.. ಸಿಸಿಟಿವಿಯಲ್ಲಿ ಭಾವಿ ವೈದ್ಯನ ಕೈಚಳಕ ಸೆರೆ

ABOUT THE AUTHOR

...view details