ಕರ್ನಾಟಕ

karnataka

ETV Bharat / state

ವಿಶ್ವ ವಿಖ್ಯಾತ ಐತಿಹಾಸಿಕ ಕರಗ ಮಹೋತ್ಸವ ನಡೆಸಲು ಅವಕಾಶ ಕೊಡಿ- ಶಾಸಕ ಪಿ. ಆರ್. ರಮೇಶ್ ಮನವಿ

ಬೆಂಗಳೂರಿನ ಐತಿಹಾಸಿಕ ವಿಶ್ವ ವಿಖ್ಯಾತ ಕರಗ ಮಹೋತ್ಸವಕ್ಕೆ ಈ ವರ್ಷ ಅವಕಾಶ ಮಾಡಿಕೊಡುವಂತೆ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಜಾತ್ರೆಗಳಿಗೆ ಸಾರ್ವಜನಿಕರಿಗೆ ಅವಕಾಶ ಮಾಡುವಂತೆ ಸರ್ಕಾರಕ್ಕೆ ಶಾಸಕ ಪಿ. ಆರ್​. ರಮೇಶ್​ ಮನವಿ ಸಲ್ಲಿಸಿದ್ದಾರೆ.

By

Published : Feb 10, 2022, 2:58 PM IST

ವಿಶ್ವ ವಿಖ್ಯಾತ ಐತಿಹಾಸಿಕ ಕರಗ ಮಹೋತ್ಸವ ನಡೆಸಲು ಅವಕಾಶ ಕೊಡಿ- ಶಾಸಕ ಪಿ. ಆರ್. ರಮೇಶ್ ಮನವಿ
ಚೈತ್ರ ಹುಣ್ಣಿಮೆಯ ದಿನದ ಹೂವಿನ ಪೂಜೆಯ ಅಲಂಕಾರ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೆಮ್ಮೆಯ ವಿಶ್ವ ವಿಖ್ಯಾತ ಐತಿಹಾಸಿಕ‌ ಕರಗ ಮಹೋತ್ಸವ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಸರಳವಾಗಿ ದೇವಸ್ಥಾನದೊಳಗೆ ಎಲ್ಲ ಕಾರ್ಯಗಳು ನಡೆದಿದೆ. ಅದ್ಧೂರಿಯಾಗಿ ಇಡೀ ತಿಗಳರ ಸಮುದಾಯ ಭಾಗಿಯಾಗಿ ಜಾತ್ರೆಯಂತೆ ಆಚರಿಸುತ್ತಿದ್ದ ಸಂಭ್ರಮಕ್ಕೆ ಕೊರೊನಾ ಬ್ರೇಕ್ ಹಾಕಿತ್ತು.

ಸದ್ಯ ಮೂರನೇ ಅಲೆಯಲ್ಲಿ ಕೊರೊನಾ‌ ತೀವ್ರತೆ ಕಡಿಮೆ ಆಗುತ್ತಿರುವ ದೃಷ್ಟಿಯಿಂದ ಬೆಂಗಳೂರು ಕರಗ ಮಹೋತ್ಸವವನ್ನ ಸಾರ್ವಜನಿಕವಾಗಿ ನಡೆಸಲು ಅನುಮತಿ ಕೊಡುವಂತೆ ಮನವಿ ಮಾಡಲಾಗಿದೆ.

ಶಾಸಕ ಪಿ. ಆರ್. ರಮೇಶ್, ಸರ್ಕಾರಕ್ಕೆ ಪತ್ರವನ್ನ ಬರೆದಿದ್ದು, ರಾಜ್ಯದಲ್ಲಿ ಕೊರೊನಾ ರೋಗ ಉಲ್ಬಣ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಹಿಂದಿನ ನೂರಾರು ವರ್ಷಗಳಿಂದ ಲೋಕಕಲ್ಯಾಣಕ್ಕಾಗಿ ಆಚರಿಸಿಕೊಂಡು ಬಂದಂತಹ ಹಲವು ದೈವ ಜಾತ್ರೆಗಳನ್ನು ನಿರ್ಬಂಧಿಸಿ ಸರ್ಕಾರವೂ ಆದೇಶಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹಲವು ದೇವತಾಕಾರ್ಯಗಳು ಕಳೆದೆರಡು ವರ್ಷಗಳಿಂದ ಸ್ತಬ್ಧವಾಗಿವೆ.‌

ಸುಮಾರು 15 ರಿಂದ 16 ಜಿಲ್ಲೆಯಲ್ಲಿ 140 ಕ್ಕೂ ಹೆಚ್ಚು ಧರ್ಮರಾಯ ಸ್ವಾಮಿ, ದ್ರೌಪದಮ್ಮ ದೇವಿಯ ಕರಗ ಉತ್ಸವಗಳು ನಡೆದುಕೊಂಡು ಬಂದಿದೆ. ಕೋವಿಡ್ ಕಾರಣಕ್ಕೆ ಸರ್ಕಾರ ನಿರ್ಬಂಧಿಸಿದ ಹಿನ್ನಲೆಯಲ್ಲಿ ಯಾವುದೇ ಜಾತ್ರೆ ,ಕರಗಗಳು ಸಾರ್ವಜನಿಕವಾಗಿ ನಡೆಯುತ್ತಿಲ್ಲ. ಅದರಲ್ಲೂ ಬೆಂಗಳೂರು ನಗರದಲ್ಲಿ ನೂರಾರು ವರ್ಷಗಳಿಂದ ವಿಶ್ವವಿಖ್ಯಾತ ಐತಿಹಾಸಿಕ ಕರಗ ಉತ್ಸವ ಆಚರಿಸುತ್ತಾ ಬರಲಾಗಿದೆ. ನಗರದ ಕಲ್ಯಾಣ ಹಾಗೂ ಜನಜೀವನ ಸಮೃದ್ಧಿಯಾಗಿ ಇರಲು ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆ ದಿನದಂದು ಕರಗ ಉತ್ಸವ ನಡೆಯಲಿದೆ.

ಬೆಂಗಳೂರು ಮಧ್ಯ ಭಾಗದಲ್ಲಿರುವ ತಿಗಳರ ಪೇಟೆಯ ಧರ್ಮರಾಯ ದೇವಸ್ಥಾನದಲ್ಲಿ ದ್ರೌಪದಿ ಕರಗ ಉತ್ಸವವು ವಿಜೃಂಭಣೆಯಿಂದ ನಡೆದು ಬಂದಿದೆ. ಆದರೆ ಕಳೆದೆರಡು ವರ್ಷಗಳಿಂದ ಕೋವಿಡ್-19ರ ಬಿಕ್ಕಟ್ಟಿನಿಂದ ಉತ್ಸವ ನಡೆಯದಿದ್ದರೂ, ಸೀಮಿತ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳಿಗೆ ಒಳಗೊಂಡಂತೆ ದೇವಸ್ಥಾನಗಳ ಅಂಗಳದಲ್ಲಿ 9 ದಿನಗಳ ಕಾರ್ಯಕ್ರಮಗಳೊಂದಿಗೆ ಕರಗದ ಕಾರ್ಯಕ್ರಮ ನೆರವೇರಿದೆ.‌

ಪ್ರಸ್ತುತ ರಾಜ್ಯದಲ್ಲಿ ಕೊರೊನಾ ವೈರಾಣು ಹತೋಟಿಗೆ ಬಂದಿದ್ದು, ಈಗಾಗಲೇ ಚಿತ್ರಮಂದಿರಗಳಿಗೆ, ಜಿಮ್‌ಗಳಿಗೆ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಜನರ ಒಗ್ಗೂಡಿವಿಕೆಗೆ ಶೇ. 100 ರ ವಿನಾಯಿತಿ ನೀಡಿಲಾಗಿದೆ.‌ ಹೀಗಾಗಿ ಬೆಂಗಳೂರು ನಗರದ ಐತಿಹಾಸಿಕ ಕರಗ ಉತ್ಸವದ ಆಚರಣೆಯನ್ನು ವಿಜೃಂಭಣೆಯಿಂದ ನಡೆಸಲು ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದಾರೆ. ‌

ಏಳನೇ ಬಾರಿ ಕರಗ ಹೊರಲಿರುವ ಜ್ಞಾನೇಂದ್ರ:9 ದಿನಗಳಕಾಲ ನಡೆಯುವ ಕರಗದಲ್ಲಿ ಏಪ್ರಿಲ್​ 16 ರ ಚೈತ್ರ ಹುಣ್ಣಿಮೆಯ ದಿನದ ಹೂವಿನ ಕರಗ ಜನಪ್ರಿಯವಾಗಿದ್ದು, ಏಳನೇ ಬಾರಿ ಜ್ಞಾನೇಂದ್ರ ಕರಗವನ್ನು ಹೊರಲಿದ್ದಾರೆ. ಕರಗ ಸಮಿತಿಗೆ ಬಿಬಿಎಂಪಿ ಮೌಖಿಕ ಅನುಮತಿ ನೀಡಿದ್ದು, ರಾಜ್ಯ ಸರ್ಕಾರದಿಂದ ಅನುಮತಿ ದೊರೆಯ ಬೇಕಿದೆ.

ಓದಿ:ಹಿಜಾಬ್ -ಕೇಸರಿ ಶಾಲು ವಿವಾದ: ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂಕೋರ್ಟ್

ABOUT THE AUTHOR

...view details