ಕರ್ನಾಟಕ

karnataka

ETV Bharat / state

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ: ಹೈರಾಣದ ವಾಹನ ಸವಾರರು

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ತಿವ್ರ ವಿರೋಧ ವ್ಯಕ್ತವಾಗಿದ್ದು, ಬೆಂಗಳೂರಿನ ಟೌನ್​ ಹಾಲ್​ ಮುಂದೆ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ವಾಹನ ಸವಾರರು ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿ ಹೈರಾಣಾಗಿದ್ದಾರೆ.

By

Published : Dec 19, 2019, 5:25 PM IST

Motorists were struggled in traffic
ಟೌನ್​ ಹಾಲ್​ ಬಳಿ ಟ್ರಾಫಿಕ್​ ಜಾಮ್​​ನಲ್ಲಿ ಸಿಲುಕಿಕೊಂಡ ವಾಹನ ಸವಾರರು

ಬೆಂಗಳೂರು: ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಟೌನ್ ಹಾಲ್ ಬಳಿ ನಡೆಯುತ್ತಿರುವ ಪ್ರತಿಭಟನೆ ಕಾವೇರಿದೆ. ಟೌನ್ ಹಾಲ್​ನ ಮುಖ್ಯರಸ್ತೆಯಲ್ಲೇ‌ ಜನರು ಹೋರಾಟಕ್ಕೆ ಇಳಿದಿದ್ದರಿಂದ ಕಿಲೋ‌‌ಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಹೈರಾಣಾಗಿದ್ದಾರೆ.

ಮೂರು ದಿನಗಳ ಕಾಲ ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಸಹ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿವೆ. ಇದರಿಂದ ರಸ್ತೆಯಲ್ಲೇ ವಾಹನಗಳು ನಿಲ್ಲುವಂತಾಗಿದೆ.

ಟೌನ್​ ಹಾಲ್​ ಬಳಿ ಟ್ರಾಫಿಕ್​ ಜಾಮ್​​ನಲ್ಲಿ ಸಿಲುಕಿಕೊಂಡ ವಾಹನ ಸವಾರರು

ಇನ್ನೊಂದೆಡೆ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ಚದುರಿಸಲು ಪೊಲೀಸರು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.‌ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಉಮೇಶ್ ಕುಮಾರ್, ಎಸ್.ಮುರುಗನ್, ಸಂಚಾರಿ ವಿಭಾಗದ ಆಯುಕ್ತ ರವಿಕಾಂತೇಗೌಡ, ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ABOUT THE AUTHOR

...view details