ಕರ್ನಾಟಕ

karnataka

By

Published : Dec 26, 2019, 10:10 PM IST

ETV Bharat / state

ಪ್ರತಿಭಟನೆ ಮಾಡ್ತೀವಿ, ತಾಕತ್ತಿದ್ದರೆ ಗೋಲಿಬಾರ್​ ಮಾಡಿ: ಸರ್ಕಾರಕ್ಕೆ ಮಹಿಳಾ ಪ್ರತಿಭಟನಕಾರರ ಚಾಲೆಂಜ್​

ಮಂಗಳೂರಿನಲ್ಲಿ ಗೋಲಿಬಾರ್ ಮಾಡಿದ ಪೊಲೀಸರನ್ನು ಈ ಕೂಡಲೇ ಸರ್ಕಾರ ವಜಾ ಮಾಡದಿದ್ದರೆ ನಾವು ಅಲ್ಲಿಗೆ ತೆರಳಿ ಪ್ರತಿಭಟನೆ ಮಾಡುತ್ತೇವೆ. ಸರ್ಕಾರಕ್ಕಾಗಲಿ, ಪೊಲೀಸರಿಗಾಗಲಿ ತಾಕತ್ತಿದ್ದರೆ ನಮ್ಮ ಮೇಲೆ ಲಾಠಿಚಾರ್ಜ್​, ಗೋಲಿಬಾರ್ ಮಾಡಲಿ ಎಂದು ಟೌನ್​ಹಾಲ್​ ಪ್ರತಿಭಟನಾ ನಿರತ ಮಹಿಳೆಯರು ಸರ್ಕಾರಕ್ಕೆ ಸವಾಲು ಹಾಕಿದರು.

qerw3de
ಪ್ರತಿಭಟನೆ ಮಾಡ್ತೀವಿ,ತಾಕತ್ತಿದ್ದರೆ ಗೋಲಿಬಾರ್​ ಮಾಡಿ:ಸರ್ಕಾರಕ್ಕೆ ಮಹಿಳಾ ಪ್ರತಿಭಟನಕಾರರ ಚಾಲೆಂಜ್​

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ವಿರೋಧಿಸಿ ನಗರದ ಟೌನ್​ ಹಾಲ್ ಬಳಿ ವಿವಿಧ ಸಂಘಟನೆಗಳ ಮಹಿಳೆಯರು ಪ್ರತಿಭಟನೆ ನಡೆಸಿದರು.

ಗ್ರಹಣ ಕಳೆದ ನಂತರ ಟೌನ್ ಹಾಲ್ ಬಳಿ‌ ಸೇರಿದ ಸಾವಿರಾರು ಮಹಿಳೆಯರು ಹಾಗೂ ಮಕ್ಕಳು ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕಕ್ತಪಡಿಸಿದರು. ಅಲ್ಲದೇ ಪ್ರತಿಭಟನೆಯಲ್ಲಿ ಮಂಗಳೂರಿನ ಗೋಲಿಬಾರ್ ಖಂಡಿಸಿದ ಮಹಿಳೆಯರು, ನಮ್ಮ ಹೋರಾಟ ಇಂದಿಗೆ ಕೊನೆಯಾಗುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುವವರೆಗೂ ಹೋರಾಟ ಮಾಡುತ್ತೇವೆ ಎಂದರು.

ಪ್ರತಿಭಟನೆ ಮಾಡ್ತೀವಿ,ತಾಕತ್ತಿದ್ದರೆ ಗೋಲಿಬಾರ್​ ಮಾಡಿ:ಸರ್ಕಾರಕ್ಕೆ ಮಹಿಳಾ ಪ್ರತಿಭಟನಕಾರರ ಚಾಲೆಂಜ್​

ಅಲ್ಲದೇ ಪ್ರತಿಭಟನೆಗೆ ಮಹಿಳೆಯರು ಅವಕಾಶ ಪಡೆದಿದ್ದ ಕಾರಣ ಪುರುಷರು ಭಾಗವಹಿಸದಂತೆ ಪೊಲೀಸರು ತಡೆದು ,ಪುರುಷರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದರು. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್​​ ಮಾಡಲಾಗಿತ್ತು.

ABOUT THE AUTHOR

...view details