ಕರ್ನಾಟಕ

karnataka

ETV Bharat / state

ಬೆಂಗಳೂರು: ಜ. 31ರೊಳಗೆ ಬಸ್​​ ಪಾಸ್​​ಗಳನ್ನು ಪಡೆಯುಂತೆ ಸೂಚನೆ - bangalore latest news

ವಿದ್ಯಾರ್ಥಿಗಳು 31-01-2021 ರೊಳಗಾಗಿ ಬಸ್​​ ಪಾಸ್​​ಗಳನ್ನು ಪಡೆಯುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

notice by bangalore transportation as get students pas before January 31st
ಬೆಂಗಳೂರು: ಜ. 31ರೊಳಗೆ ಬಸ್​​ ಪಾಸ್​​ಗಳನ್ನು ಪಡೆಯುಂತೆ ಸೂಚನೆ

By

Published : Jan 21, 2021, 7:14 AM IST

ಬೆಂಗಳೂರು: 2020-21ನೇ ಸಾಲಿನ ವಿದ್ಯಾರ್ಥಿ ಬಸ್​​​ ಪಾಸ್​​​ಗಾಗಿ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ, ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಪಾಸ್​​ ಪಡೆಯಲು ದಿನಾಂಕ 21-12-2020 ರಿಂದ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ವಿದ್ಯಾರ್ಥಿಗಳು 31-01-2021 ರೊಳಗಾಗಿ ಬಸ್​​ ಪಾಸ್​​ಗಳನ್ನು ಪಡೆಯುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ:ಶುಲ್ಕ ರಸೀದಿ ತೋರಿಸಿದರೆ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅವಕಾಶ ಕಲ್ಪಿಸುತ್ತಿದೆ ಬಿಎಂಟಿಸಿ

ಕೋವಿಡ್‌-19 ಸಾಂಕ್ರಾಮಿಕ ರೋಗದ ಹಿನ್ನೆಲೆ, 2020-21ನೇ ಶೈಕ್ಷಣಿಕ ಸಾಲಿನ ಶಾಲಾ ಕಾಲೇಜುಗಳನ್ನುಇತ್ತೀಚಿನ ದಿನಗಳಲ್ಲಿ ಪ್ರಾರಂಭಿಸಲಾಗಿದೆ. ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ತೊಂದರೆಯಾಗಬಾರದೆಂಬ ಉದ್ದೇಶದಿಂದ, 2019-20ನೇ ಸಾಲಿನಲ್ಲಿ ವಿತರಣೆ ಮಾಡಿರುವ ಸ್ಮಾರ್ಟ್‌ಕಾರ್ಡ್ ‌ವಿದ್ಯಾರ್ಥಿ ಪಾಸ್ ಅಥವಾ ಪ್ರಸ್ತುತ ಸಾಲಿನಲ್ಲಿ ಶಾಲಾ/ಕಾಲೇಜಿಗೆ ದಾಖಲಾಗಿರುವ ಶುಲ್ಕ ರಸೀದಿ ಅಥವಾ ಗುರುತಿನ ಚೀಟಿಯೊಂದಿಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಮುಂದುವರಿಸಿದೆ. ಇದೀಗ 31-01-2021 ರೊಳಗಾಗಿ ಬಸ್​​ ಪಾಸ್​​ಗಳನ್ನು ಪಡೆಯುವಂತೆ ಸೂಚಿಸಿದೆ.

ABOUT THE AUTHOR

...view details