ಬೆಂಗಳೂರು: ಏಪ್ರಿಲ್ 20ರ ಬಳಿಕ ಜನರು ಓಡಾಡುವುದಕ್ಕೆ ಪಾಸ್ಗಳ ಅವಶ್ಯಕತೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಏಪ್ರಿಲ್ 20 ರ ಬಳಿಕ ಜನರ ಓಡಾಟಕ್ಕೆ ಪಾಸ್ ಬೇಕಿಲ್ಲ: ಡಿ.ಸಿ.ಎಂ ಅಶ್ವಥ್ ನಾರಾಯಣ್ - ಬೆಂಗಳೂರಿನಲ್ಲಿ ಕೊರೊನಾ ಎಫೆಕ್ಟ್
ಏಪ್ರಿಲ್ 20 ರ ಬಳಿಕ ಐ.ಟಿ.ಬಿ.ಟಿ ಕ್ಷೇತ್ರಗಳು ಭಾಗಶಃ ಕಾರ್ಯನಿರ್ವಹಿಸುವುದಕ್ಕೆ ಸಜ್ಜಾಗುತ್ತಿವೆ. ಈ ಕುರಿತಂತೆ ಪ್ರಮುಖರು ಡಿ.ಸಿ.ಎಂ ಡಾ.ಅಶ್ವಥ್ ನಾರಾಯಣ್ ಜೊತೆ ಚರ್ಚೆ ನಡೆಸಿದರು.

ಐ.ಟಿ, ಬಿಟಿ ಕ್ಷೇತ್ರದ ಪ್ರಮುಖರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ನಂತರ ಮಾತನಾಡಿದ ಅವರು, ಲಾಕ್ಡೌನ್ ಯಥಾ ಪ್ರಕಾರ ಇರುತ್ತದೆ , ಐಟಿ ನೌಕರರ ಓಡಾಟಕ್ಕೆ ಪಾಸ್ ಬೇಕಾಗಿಲ್ಲ. 50% ಐ.ಟಿ ನೌಕರರು ಕೆಲಸಕ್ಕೆ ಹಾಜರಾಗಲು ಅನುಮತಿ ನೀಡಲಾಗಿದೆ. ಕಂಪನಿಗಳಲ್ಲಿ ಥರ್ಮಲ್ ಟೆಸ್ಟಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು, ಬಿ.ಎಂ.ಟಿ.ಸಿ ಬಸ್ ಕಾಂಟ್ರ್ಯಾಕ್ಟ್ ಪಡೆದು ಸ್ಯಾನಿಟೈಸ್ ಮಾಡಿದ ಬಸ್ ಐ.ಟಿ ಕಂಪನಿಗೆ ನೀಡುತ್ತೇವೆ. ಸಂಸ್ಥೆಗಳಲ್ಲಿ ಮತ್ತೆ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದರೆ ಆ ವ್ಯಕ್ತಿಯನ್ನು ಕ್ವಾರಂಟೈನ್ ಮಾಡಬೇಕು ಎಂದರು.
ಮುಖ್ಯವಾಗಿ ಲಸಿಕೆ ಸಿಗುವವರೆಗೂ ಈ ಮಹಾಮಾರಿ ಜೊತೆಗೆ ಬದುಕಲು ಪ್ರಾರಂಭಿಸಬೇಕು. ಲಾಕ್ಡೌನ್ ಜನರಿಗೆ ಮಹಾಮಾರಿಯ ಬಗ್ಗೆ ಅರಿವು ಮೂಡಿದೆ. ಲಾಕ್ಡೌನ್ ಉದ್ದೇಶ ಒಮ್ಮೆಯೇ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದರೆ ರೋಗಿಗಳ ಚಿಕಿತ್ಸೆಗೆ ಮೂಲಭೂತ ಸೌಕರ್ಯಗಳು ಒದಗಿಸಲು ಕಷ್ಟವಾಗುತ್ತದೆ. ಇನ್ನು ಮುಂದೆ ಕನಿಷ್ಠ ಪ್ರಕರಣಗಳು ದಾಖಲಾದರೆ ಸೂಕ್ತ ಚಿಕಿತ್ಸೆ ನೀಡಲು ಮೂಲ ಸೌಕರ್ಯಗಳು ಇವೆ ಎಂದು ಡಿ.ಸಿ.ಎಂ ಹೇಳಿದರು.