ಕರ್ನಾಟಕ

karnataka

ETV Bharat / state

ಕೇಂದ್ರದಿಂದ ನೆರೆ ಪರಿಹಾರ ಬಂದಿರುವ ಬಗ್ಗೆಯೇ ಮಾಹಿತಿ ಇಲ್ಲ: ಸಚಿವ ಆರ್.ಅಶೋಕ್ ಹೇಳಿದ್ದೇನು?

ಕೇಂದ್ರದಿಂದ ನೆರೆ ಪರಿಹಾರ ಬಂದಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಈಗಾಗಲೇ 1200 ಕೋಟಿ ರೂ. ನೆರೆ ಪರಿಹಾರ ಬಂದಿದೆ. ಈಗ ಮತ್ತೆ ಎಷ್ಟು ಪರಿಹಾರ ಬಂದಿದೆ ಎಂಬುದು ಗೊತ್ತಿಲ್ಲ ಎಂದರು.

By

Published : Jan 7, 2020, 8:22 PM IST

Minister R. Ashok
ಸಚಿವ ಆರ್.ಅಶೋಕ್

ಬೆಂಗಳೂರು: ಕೇಂದ್ರದಿಂದ ನೆರೆ ಪರಿಹಾರ ಬಂದಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಸಚಿವ ಆರ್.ಅಶೋಕ್

ಎರಡನೇ ಕಂತಿನಲ್ಲಿ ರಾಜ್ಯಕ್ಕೆ‌ ಕೇಂದ್ರದಿಂದ ಎಷ್ಟು ನೆರೆ ಪರಿಹಾರ ಬಂದಿದೆ ಎಂಬ ಬಗ್ಗೆ‌ ಸಾಕಷ್ಟು ಗೊಂದಲ ಏರ್ಪಟ್ಟಿದೆ. ಈ ಮೊದಲು ಕೇಂದ್ರ ಸರ್ಕಾರ 1200 ಕೋಟಿ ರೂ. ನೆರೆ ಪರಿಹಾರ ನೀಡಿತ್ತು. ಎರಡನೇ ಕಂತಲ್ಲಿ 1869 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ ಎಂಬ ಮಾಹಿತಿ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ಎರಡನೇ ಕಂತಲ್ಲಿ ಕೇವಲ 669 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಸ್ಪಷ್ಟೀಕರಣ ನೀಡಲು ನಿರಾಕರಿಸಿದ ಕಂದಾಯ ಸಚಿವ ಆರ್.ಅಶೋಕ್, ತಮಗೆ ಕೇಂದ್ರದಿಂದ ಎರಡನೇ ಕಂತಲ್ಲಿ ನೆರೆ‌ ಪರಿಹಾರ ಬಿಡುಗಡೆಯಾಗಿರುವ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಈಗಾಗಲೇ 1200 ಕೋಟಿ ರೂ. ನೆರೆ ಪರಿಹಾರ ಬಂದಿದೆ. ಈಗ ಮತ್ತೆ ಎಷ್ಟು ಪರಿಹಾರ ಬಂದಿದೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ. ನಮ್ಮ ಇಲಾಖೆಗೆ ಈ ಬಗ್ಗೆ ಯಾವುದೇ ಮಾಹಿತಿ ‌ಇಲ್ಲ. ಇಲಾಖೆ ಪ್ರಧಾನ ಕಾರ್ಯದರ್ಶಿಗೂ ಕರೆ ಮಾಡಿ ಕೇಳಿದ್ದೇನೆ. ಈವರೆಗೆ ಕೇಂದ್ರದಿಂದ ಪರಿಹಾರ ಸಂಬಂಧ ಇಲಾಖೆಗೆ ಮಾಹಿತಿ ಬಂದಿಲ್ಲ ಎಂದು ತಿಳಿಸಿದರು.

ಕಥೆ ಹೇಳುವುದು ಸಿದ್ದರಾಮಯ್ಯ ಸ್ಟೈಲ್:ಕಥೆ ಹೇಳಿಕೊಂಡು ತಿರುಗಾಡುವುದು ಸಿದ್ದರಾಮಯ್ಯರ ಸ್ಟೈಲ್ ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದರು. ಭಾಷಣಗಳಲ್ಲಿ ಕಥೆ ಹೇಳುವುದು ಅವರ ಸ್ಟೈಲ್. ನನಗಾಗಲಿ, ಸಿಎಂ ಯಡಿಯೂರಪ್ಪರಿಗಾಗಲಿ ಕಥೆ ಹೇಳಲು ಬರುವುದಿಲ್ಲ. ಸಿದ್ದರಾಮಯ್ಯ ಕಥೆ ಹೇಳುತ್ತಾರೆ. ನಾವು ಕೆಲಸ‌ ಮಾಡುತ್ತೇವೆ. ನಮ್ಮ ಸರ್ಕಾರ ನೆರೆ ಪರಿಹಾರ ಸಂಬಂಧ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಈ ಸಂಬಂಧ ಹಣವನ್ನು ಬಿಡುಗಡೆ ‌ಮಾಡುತ್ತಿದ್ದೇವೆ. ಯಾವುದೇ ಹಣದ ಕೊರತೆ ಇಲ್ಲ. ಮನೆ ಕಟ್ಟುವುದಕ್ಕೆ ಯಾವುದೇ ಹಣದ ಕೊರತೆ ಮಾಡಿಲ್ಲ. ಪಿಡಿಒ ಖಾತೆಗೆ ನಾವೇ ಹಣವನ್ನು ನೇರವಾಗಿ ಜಮೆ‌ ಮಾಡುತ್ತೇವೆ ಎಂದು ತಿಳಿಸಿದರು.

ನೆರೆ ಪೀಡಿತರಿಗೆ ನಾವು ಏನು ಭರವಸೆ ನೀಡಿದ್ದೇವೆ ಅದನ್ನು ನಾವು ಉಳಿಸಿಕೊಳ್ಳುತ್ತೇವೆ. ಎನ್ ಡಿಆರ್ ಎಫ್ ನಿಯಮದ ಪ್ರಕಾರ ನಮಗೆ 3000 ಕೋಟಿ ಬರಬೇಕು. ಈಗ 1200 ಕೋಟಿ ಬಂದಿದೆ. ಈ ನಿಯಮ ಮಾಡಿದ್ದು ಮನಮೋಹನ್ ಸಿಂಗ್. ಎನ್ ಡಿಆರ್ ಎಫ್ ಮಿತಿಗಿಂತ ಹೆಚ್ಚಿಗೆ ಹಣ ಪಡೆಯಲು ಸಾಧ್ಯವಿಲ್ಲ. ಎನ್ ಡಿಆರ್ ಎಫ್ ಹಣ ಕೇಳುವ ಅಧಿಕಾರ‌ ನಮಗಿದೆ.‌ ಅದನ್ನು ನಾವು ಪಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ಭವಿಷ್ಯ ಹೇಳುವುದಕ್ಕೆ ನಾನು ಜ್ಯೋತಿಷಿ ಅಲ್ಲ. ಸಿದ್ದರಾಮಯ್ಯ ಜ್ಯೋತಿಷ್ಯಾಲಯ ಇಟ್ಟುಕೊಂಡಿದ್ದರು. ಉಪಚುನಾವಣೆ ಆದ ಬಳಿಕ ಅವರೂ ಜ್ಯೋತಿಷ್ಯಾಲಯ ಮುಚ್ಚಿದ್ದಾರೆ. ನಾನು ಯಾವುದೇ ಜ್ಯೋತಿಷ್ಯಾಲಯ ಇಟ್ಟಿಲ್ಲ ಎಂದು ಇದೇ ವೇಳೆ ಸಂಪುಟ ವಿಸ್ತರಣೆ ಬಳಿಕ ಅತೃಪ್ತ ಶಾಸಕರು ಪಕ್ಷ ಬಿಡುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸುತ್ತಾ ತಿಳಿಸಿದರು.

ABOUT THE AUTHOR

...view details