ಬೆಂಗಳೂರು: ಉಪ ಚುನಾವಣಾ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ನೂತನ ಗಣಿ ನೀತಿಯನ್ನು ಬಿಡುಗಡೆ ಮಾಡಲಾಗುತ್ತದೆ. ನೂತನ ಮರಳು ನೀತಿಯನ್ನೂ ಜಾರಿಗೆ ತರಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹೊಸ ಗಣಿ ನೀತಿ ಅಂತಿಮ ಹಂತದಲ್ಲಿದೆ. ಉಪ ಚುನಾವಣೆಯ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಲಾಂಚ್ ಮಾಡಲಾಗುತ್ತದೆ, ಇಡೀ ದೇಶವೇ ಕರ್ನಾಟಕದಕಡೆ ತಿರುಗಿ ನೋಡುವಂತೆ ನೂತನ ಗಣಿ ನೀತಿ ಇರಲಿದೆ ಎಂದರು.
ಏಪ್ರಿಲ್ ತಿಂಗಳಿನಿಂದ ರಾಜ್ಯದ ಐದು ಕಡೆ ಮೈನಿಂಗ್ ಅದಾಲತ್ ಮಾಡಲಾಗುತ್ತದೆ, ಕಾನೂನು ಮೂಲಕ ಪರಿಹಾರ ಆಗದ ಸಮಸ್ಯೆಗಳನ್ನು ಪರಿಹಾರ ಪರಿಹರಿಸಲಾಗುತ್ತದೆ. ಜೊತೆಗೆ ಗಣಿ ಪರವಾನಗಿ ಪಡೆಯಲು ಅಲೆದಾಟವನ್ನು ತಪ್ಪಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಈಗಾಗಲೇ ಕರಡು ಕೂಡ ಸಿದ್ದವಾಗಿದೆ. ಗಣಿಗಾರಿಗೆ ಪರವಾನಗಿ ನೀಡಬೇಕಾದ ವೇಳೆ ಪರಿಸರ ಇಲಾಖೆ, ಗೃಹ ಇಲಾಖೆ, ಮಾಲಿನ್ಯ ಇಲಾಖೆ ಸೇರಿದಂತೆ ಸಂಬಂಧಪಡುವ ಎಲ್ಲ ಇಲಾಖೆಗಳ ಸಚಿವರ ಜೊತ ಮಾತುಕತೆ ನಡೆಸಲಾಗಿದೆ. ಅವರ ಕಡೆಯಿಂದಲೂ ಒಪ್ಪಿಗೆ ಪಡೆಯಲಾಗುತ್ತದೆ. ನಂತರ ಏಕಗವಾಕ್ಷಿ ಮೂಲಕ ಗಣಿ ಪರವಾನಗಿ ಸರಳೀಕರಣಗೊಳಿಸಲಾಗುತ್ತದೆ ಎಂದರು.
ನೀತಿ ಸಂಹಿತೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ನೂತನ ಗಣಿ ನೀತಿ, ಮರಳು ನೀತಿ ಜಾರಿ; ನಿರಾಣಿ
ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹೊಸ ಗಣಿ ನೀತಿ ಅಂತಿಮ ಹಂತದಲ್ಲಿದೆ. ಉಪ ಚುನಾವಣೆಯ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಲಾಂಚ್ ಮಾಡಲಾಗುತ್ತದೆ, ಇಡೀ ದೇಶವೇ ಕರ್ನಾಟಕದಕಡೆ ತಿರುಗಿ ನೋಡುವಂತೆ ನೂತನ ಗಣಿ ನೀತಿ ಇರಲಿದೆ ಎಂದರು.
ನೂತನ ಮರಳು ನೀತಿ:
ರಾಜ್ಯದಲ್ಲಿ ನೂತನ ಮರಳು ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದ್ದು, ಮರಳು ಗಣಿಗಾರಿಕೆ ನಡೆಯುವ ಸ್ಥಳಸಲ್ಲಿ ರಾಜಧನ ಸಂಗ್ರಹಿಸುವ ಬದಲು ಮರಳು ಬಳಕೆಯಾಗುವ ನಿರ್ಮಾಣ ಸ್ಥಳದಲ್ಲಿ ಸಂಗ್ರಹಿಸಲಾಗುತ್ತದೆ. ಇದರಿಂದ ರಾಜಧನ ವಂಚನೆ ತಡೆಯಬಹುದಾಗಿದೆ ಎಂದು ಸಚಿವ ನಿರಾಣಿ ತಿಳಿಸಿದರು.
10 ಲಕ್ಷಕ್ಕಿಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಳ್ಳುವ, ದುರಸ್ತಿಪಡಿಸುವ ಆಶ್ರಯ ಮನೆ, ಸರ್ಕಾರದ ವಸತಿ ಯೋಜನೆಯಡಿ ಮನೆಗಳು, ರೈತರು ಸ್ವಂತವಾಗಿ ಜಮೀನಿನಲ್ಲಿ ಕಟ್ಟುವ ಮನೆ ಸೇರಿದಂತೆ ಎಲ್ಲ ಮನೆಗಳಿಗೂ ಮರಳು ಪೂರೈಕೆ ಮೇಲಿನ ರಾಜಧನಕ್ಕೆ ವಿನಾಯಿತಿ ನೀಡಲಾಗುತ್ತದೆ. ಅವರೆಲ್ಲ ಮರಳು ಖರೀದಿಸಿದರೆ ಸಾಕು ರಾಯಲ್ಟಿ ಪಾವತಿಸಬೇಕಿಲ್ಲ. ಆದರೆ 10 ಲಕ್ಷಕ್ಕಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸುವ ಮನೆಗಳಿಗೆ ಪೂರೈಕೆಯಾಗುವ ಮರಳಿಗೆ ಸರ್ಕಾರ ನಿಗದಿಪಡಿಸುವ ರಾಜಧನ ಪಡೆಯಲಾಗುತ್ತದೆ ಎಂದರು.
ಸರ್ಕಾರವೇ ಮರಳು ಗಣಿಗಾರಿಕೆಗೆ ಬ್ಲಾಕ್ ಗಳನ್ನು ಹಂಚಿಕೆ ಮಾಡಲಿದೆ, ಅಲ್ಲಿ ಮಾತ್ರವೇ ಮರಳು ಗಣಿಗಾರಿಕೆ ಮಾಡಬೇಕು, ಯಾರು ಯಾವ ಬ್ಲಾಕ್ ನಿಂದ ಬೇಕಾದರೂ ಮರಳು ಪಡೆದುಕೊಳ್ಳಬಹುದು. ಆದರೆ ರಾಜಧನವನ್ನು ಸರ್ಕಾರಕ್ಕೆ ಪಾವತಿಸಬೇಕು, ಕಟ್ಟಡ ನಿರ್ಮಾಣಕ್ಕೆ ಬಳಕೆಯಾದ ಮರಳಿನ ಆಧಾರದಲ್ಲಿ ರಾಜಧನ ಸಂಗ್ರಹ ಮಾಡಲಾಗುತ್ತದೆ ಇದರಿಂದ ಮರಳು ಮಾಫಿಯಾ, ರಾಜಧನ ಪಾವತಿ ವಂಚನೆ ತಡೆಯಬಹುದಾಗಿದೆ. ಅಲ್ಲದೆ ರಾಜಧನ ಸಂಗ್ರಹದಲ್ಲಿ ಹೆಚ್ಚಳವಾಗುತ್ತದೆ, ಸಧ್ಯ 154 ಕೋಟಿ ರಾಜಧನ ಸಂಗ್ರಹವಾಗುತ್ತಿದೆ. ಈಗ ನೂತನ ನೀತಿಯಂತೆ 10 ಲಕ್ಷಕ್ಕಿಂತ ಕಡಿಮೆ ವೆಚ್ಚದ ಕಟ್ಟಡಗಳಿಗೆ ರಾಜಧನ ವಿನಾಯಿತಿ ನೀಡಿದರೂ ನಮಗೆ ಮೂರುಪಟ್ಟು ಹೆಚ್ಚು ರಾಜಧನ ಸಂಗ್ರಹವಾಗಲಿದೆ ಎಂದರು.
ಸ್ಕೂಲ್ ಆಫ್ ಮೈನಿಂಗ್ ಕೋರ್ಸ್ ಆರಂಭ:
ಶಿವಮೊಗ್ಗ, ಚಿಕ್ಕಬಳ್ಳಾಪುರ ಗಣಿ ಸ್ಪೋಟ ಘಟನೆ ನಂತರ ಜಲ್ಲಿ ಕ್ರಷರ್ ನಿಂತಿವೆ. ಇದರಿಂದ ನಿರ್ಮಾಣ ಕೆಲಸಕ್ಕೆ ತೊಂದರೆಯಾಗುತ್ತಿದೆ, ಆದಾಯಕ್ಕೆ ಕತ್ತರಿ ಬಿದ್ದಿದೆ ಹಾಗಾಗಿ ಎರಡು ಮೂರು ತಿಂಗಳಿನಲ್ಲಿ ಸ್ಪೋಟಕಗಳ ಬಳಕೆಗೆ ಅನುಮತಿ ಪಡೆಯುವ, ಇಲ್ಲ ಪರವಾನಗಿ ಇರುವವರ ಕಡೆ ಒಪ್ಪಂದ ಮಾಡಿಕೊಳ್ಳುವ ಷರತ್ತಿನೊಂದಿಗೆ ಕ್ರಷರ್ ಆರಂಭಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ನಿರಾಣಿ ತಿಳಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ಪೋಟಕ ಬಳಕೆ ಹೇಗೆ ಎಂದು ಡಿಜಿಎಂಎಸ್ ಕಡೆಯಿಂದ ತರಬೇತಿ ಕೊಡಿಸುವ ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಬೆಳಗಾವಿಯಲ್ಲಿ 300 ಕ್ರಷರ್ ಇವೆ, ಅಂತಹ ಕಡೆ ಅಲ್ಲಿಗೇ ತರಬೇತುದಾರರನ್ನು ಕಳಿಸಿಕೊಡಲಾಗುತ್ತದೆ. ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು ಮೈನಿಂಗ್ ಮಾಡುವಾಗ ಆದ ಘಟನೆ ಅಲ್ಲ, ಸಾಗಾಣಿಕೆ ವೇಳೆ ಆಗಿದೆ ಹಾಗಾಗಿ ಸ್ಪೋಟಕ ಬಳಕೆ,ಸಂಗ್ರಹ,ಸಾಗಾಣಿಕೆ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಗಣಿಗಳಲ್ಲಿ ಸ್ಪೋಟಕ ಬಳಸುವವರಿಗೆ ತರಬೇತಿ ನಿರಂತರ ಅಗತ್ಯವಿದೆ ಹಾಗಾಗಿ ರಾಜ್ಯದಲ್ಲಿ ಸ್ಕೂಲ್ ಆಫ್ ಮೈನಿಂಗ್ ಶುರು ಮಾಡುತ್ತಿದ್ದೇವೆ. ಸ್ಟೇಜ್ ವೈಸ್ ಅದನ್ನು ವಿವಿವರೆಗೂ ವಿಸ್ತರಣೆ ಮಾಡಲಾಗುತ್ತದೆ. 371ಜೆ ಅಡಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸ್ಪೋಟಕ ಬಳಕೆ ಬಗ್ಗೆ ಸ್ಕೂಲ್ ಆಫ್ ಮೈನಿಂಗ್ ಆರಂಭಿಸಲಾಗುತ್ತದೆ ಎಂದರು.