ಕರ್ನಾಟಕ

karnataka

ETV Bharat / state

ಒಮಿಕ್ರಾನ್ ಭೀತಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಸುತ್ತೋಲೆ ಹೊರಡಿಸಿದ ಸರ್ಕಾರ

ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸರ್ಕಾರವು ನೂತನ ಸುತ್ತೋಲೆ ಹೊರಡಿಸಿದೆ. ಹೈ ರಿಸ್ಕ್ ದೇಶಗಳಿಂದ ಬಂದವರು ವಿಮಾನ ನಿಲ್ದಾಣದಲ್ಲೇ ಕೋವಿಡ್-19 (RT-PCR) ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

By

Published : Dec 8, 2021, 10:56 PM IST

covid guidelines
ಒಮಿಕ್ರಾನ್ ಮಾರ್ಗಸೂಚಿ

ಬೆಂಗಳೂರು:ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮತ್ತೊಂದು ಹೊಸ ಸುತ್ತೋಲೆ ಹೊರಡಿಸಲಾಗಿದೆ. ಹೈ ರಿಸ್ಕ್ ದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರು ಆಗಮಿಸಿದಾಗ ವಿಮಾನ ನಿಲ್ದಾಣದಲ್ಲೇ ಕೋವಿಡ್-19 (RT-PCR) ಪರೀಕ್ಷೆಗೆ ಮಾಡಿಸಿಕೊಳ್ಳುವುದು ಕಡ್ಡಾಯ ಅಂತ ಆರೋಗ್ಯ ಇಲಾಖೆ ಆದೇಶಿಸಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿರುವ ಎರಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಆರ್​ಟಿಪಿಸಿಆರ್​ (RTPCR) ಪರೀಕ್ಷಾ ಸೌಲಭ್ಯಗಳಿವೆ.

ಒಂದು ವೇಳೆ ಕೋವಿಡ್-19 ಟೆಸ್ಟ್ ಪಾಸಿಟಿವ್ ಬಂದರೆ ಶಿಷ್ಟಾಚಾರದಂತೆ ಹೆಚ್ಚಿನ ಚಿಕಿತ್ಸೆ ಮತ್ತು ನಿರ್ವಹಣೆಗಾಗಿ ಗುರುತಿಸಲಾದ ಆರೋಗ್ಯ ರಕ್ಷಣಾ ಸೌಲಭ್ಯಕ್ಕೆ ವರ್ಗಾಯಿಸಲಾಗುತ್ತದೆ. ಆದ್ದರಿಂದ, ವಿಮಾನ ನಿಲ್ದಾಣದಲ್ಲಿ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಅನಗತ್ಯ ವಿಳಂಬವಿಲ್ಲದೆ ಅಂತಹ ಪಾಸಿಟಿವ್​​ ಬಂದವರನ್ನು ತಕ್ಷಣವೇ ಸ್ಥಳಾಂತರಿಸಲು ಅಗತ್ಯ ಸೌಲಭ್ಯಗಳು ಸುಲಭವಾಗಿ ಲಭ್ಯವಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಈ ಸಂದರ್ಭದಲ್ಲಿ, ಕೋವಿಡ್​​ ಪ್ರಕರಣಗಳ ಸಾಂಸ್ಥಿಕ ಪ್ರತ್ಯೇಕತೆ (ಕ್ವಾರಂಟೈನ್), ಚಿಕಿತ್ಸೆ ಮತ್ತು ನಿರ್ವಹಣೆಗಾಗಿ ಸರ್ಕಾರಿ ಆರೋಗ್ಯ ರಕ್ಷಣಾ ಸೌಲಭ್ಯಗಳನ್ನು ಗುರುತಿಸಿ ಪ್ರಕಟಿಸಿದೆ. ಹೈ ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರು ಪಾಸಿಟಿವ್ ಆದಲ್ಲಿ ಬೆಂಗಳೂರಿನ ಬೌರಿಂಗ್, ಲೇಡಿ ಕರ್ಜನ್ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು.

ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ:

  • ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾದರೆ, ಆಸ್ಪತ್ರೆಯಲ್ಲಿ ಸಾಕಷ್ಟು ಸಂಖ್ಯೆಯ ಹಾಸಿಗೆಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿರುವ ಪ್ರತ್ಯೇಕ ಬ್ಲಾಕ್ ಚಿಕಿತ್ಸೆ ಮತ್ತು ನಿರ್ವಹಣೆ ಸರಿ ಇದೆಯಾ ಎಂದು ಗಮನಹರಿಸಬೇಕು.
  • ಸರ್ಕಾರವು ಸೂಚಿಸಿದಂತೆ ಚಿಕಿತ್ಸೆಯ ಶಿಷ್ಟಾಚಾರ ಅನುಸರಿಸಬೇಕು.
  • ಒಂದು ವೇಳೆ ಒಮಿಕ್ರಾನ್ ಸೋಂಕು ದೃಢಪಟ್ಟರೆ, ಅಂತಹ ಸೋಂಕಿತರನ್ನು ಪ್ರತ್ಯೇಕವಾಗಿ ಐಸೋಲೇಷನ್ ಮಾಡಿ, ಬೇರೆ ವಾರ್ಡ್‌ಗೆ ವರ್ಗಾಯಿಸಬೇಕು.

ಇದನ್ನೂ ಓದಿ:6 ವರ್ಷದ ಹಿಂದೆ ಕಾಪ್ಟರ್‌ ಪತನವಾದ್ರೂ ರಾವತ್‌ 'ಮೃತ್ಯುಂಜಯ'.. ಈಗ ವಿಧಿಗೇ ಗೆಲುವಾಯ್ತು..

ABOUT THE AUTHOR

...view details