ನೆಲಮಂಗಲ: ಟೌನ್ ಪೊಲೀಸ್ ಠಾಣೆಗೆ ಸಬ್ ಇನ್ಸ್ಪೆಕ್ಟರ್ ಸುರೇಶ್ ಬಂದ ಹಿನ್ನೆಲೆ ಟೌನ್ ವ್ಯಾಪ್ತಿಯ ರೌಡಿಗಳ ಪರೇಡ್ ಮಾಡಲಾಯಿತು.
ನೆಲಮಂಗಲ: ಟೌನ್ ಪೊಲೀಸರಿಂದ ರೌಡಿಗಳ ಪರೇಡ್...
ನೆಲಮಂಗಲ ಟೌನ್ ವ್ಯಾಪ್ತಿಯ ರೌಡಿಗಳ ಪರೇಡ್ ಮಾಡಲಾಯಿತು. ದರೋಡೆ, ಸುಲಿಗೆ, ಕಿಡ್ನ್ಯಾಪ್ ಕೇಸ್ಗಳಲ್ಲಿ ಭಾಗಿಯಾದರೆ ಗಡಿಪಾರು ಮಾಡುವ ಮತ್ತು ಗೂಂಡಾ ಕಾಯ್ದೆ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದ ಪಿಎಸ್ಐ.
ಮುಂದಿನ ದಿನಗಳಲ್ಲಿ ನಗರಸಭೆ, ಗ್ರಾಮ ಪಂಚಾಯತಿ ಚುನಾವಣೆಗಳು ನಡೆಯುವ ಹಿನ್ನೆಲೆ ಯಾವುದೇ ರೀತಿಯ ಅಪರಾಧ ಕೃತ್ಯ ನಡೆಯಬಾರದೆನ್ನುವ ಕಾರಣಕ್ಕೆ ರೌಡಿಗಳ ಪರೇಡ್ ಮಾಡಲಾಯಿತು. ಪರೇಡ್ನಲ್ಲಿ ಸುಮಾರು 24ಕ್ಕೂ ಅಧಿಕ ರೌಡಿ ಶೀಟರ್ಗಳು ಹಾಜರಿದ್ದರು. ಗಣೇಶನ ಗುಡಿ ರಂಗ, ಚೇಣಿ, ಶರವಣ, ರವಿ, ಶಶಿ ಮತ್ತಿತ್ತರ ರೌಡಿಶೀಟರ್ಗಳಿಗೆ ಪಿಎಸ್ಐ ಸುರೇಶ್ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್ ಕೊಟ್ಟರು.
ದರೋಡೆ, ಸುಲಿಗೆ, ಕಿಡ್ನ್ಯಾಪ್ ಕೇಸ್ಗಳಲ್ಲಿ ಭಾಗಿಯಾದರೆ ಗಡಿಪಾರು ಮಾಡುವ ಮತ್ತು ಗೂಂಡಾ ಕಾಯ್ದೆ ಕೇಸ್ ಹಾಕುವ ಎಚ್ಚರಿಕೆ ನೀಡಿದರು. ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಹೆಂಡತಿ ಮಕ್ಕಳ ಜೊತೆ ನೆಮ್ಮದಿ ಜೀವನ ಮಾಡಿ ಎಂದು ಬುದ್ಧಿವಾದ ಹೇಳಿದರು.