ಕರ್ನಾಟಕ

karnataka

ETV Bharat / state

ಒಂದೇ ‌ಮನೆಯಲ್ಲಿ ನಡೆಯಿತು ಜೋಡಿ ಕೊಲೆ: ಪೊಲೀಸರಿಗೆ ಕನ್‌ಫ್ಯೂಸ್‌ ಮಾಡಿದ ಕಿರಾತಕರು

ಸಿಲಿಕಾನ್​ ಸಿಟಿಯಲ್ಲಿ ಹಾಡಹಗಲೇ ಎರಡು ಶವಗಳು ಉರುಳಿಬಿದ್ದಿವೆ. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರೇ ಕನ್ಫೂಸ್ ಆಗಿದ್ದು, ಯಾರೊಬ್ಬರು ಊಹಿಸದ ಸ್ಫೋಟಕ ತಿರುವು ತೆಗೆದುಕೊಂಡಿದೆ.

Murder in the same house
ಒಂದೇ ‌ಮನೆಯಲ್ಲಿ ನಡೆಯಿತು ಬರ್ಬರ ಹತ್ಯೆ

By

Published : Feb 11, 2020, 8:02 PM IST

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಹಾಡಹಗಲೇ ಎರಡು ಶವಗಳು ಉರುಳಿಬಿದ್ದಿವೆ. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರೇ ಕನ್ಫೂಸ್ ಆಗಿದ್ದು, ಯಾರೊಬ್ಬರು ಊಹಿಸದ ಸ್ಫೋಟಕ ತಿರುವು ತೆಗೆದುಕೊಂಡಿದೆ.

ಹೌದು, ಬೆಂಗಳೂರಿನ ಹೆಗ್ಗನಹಳ್ಳಿಯ ಮನೆಯಲ್ಲಿ ಒಂದು ಜೋಡಿ ಹೆಣಗಳು ಉರುಳಿ ಬಿಟ್ಟಿದ್ವು. ಕೊಲೆಯಾದವರು ಲಕ್ಷ್ಮೀ ಹಾಗೂ ರಂಗಧಾಮಯ್ಯ . ಮನೆ ಮಾಲೀಕ ಶಿವರಾಜ್ ಅನ್ನೋರ ಪತ್ನಿಯೇ ಲಕ್ಷ್ಮೀ. ಈಕೆಗೆ 14 ವರ್ಷದ ಮಗಳು ಚೈತ್ರಾ ಕೂಡ ಇದ್ದಳು. ಶಿವರಾಜ್​ಗೆ ಸ್ಟ್ರೋಕ್ ಆಗಿದ್ದರಿಂದ ಮನೆ ಜವಾಬ್ದಾರಿಯನ್ನೆಲ್ಲಾ ಪತ್ನಿ ಲಕ್ಷ್ಮೀ ನೋಡಿಕೊಳ್ತಿದ್ಳು.

ಒಂದೇ ‌ಮನೆಯಲ್ಲಿ ನಡೆಯಿತು ಬರ್ಬರ ಹತ್ಯೆ

ಇವರ ಮನೆಯಲ್ಲಿ ರಂಗಧಾಮಯ್ಯ ಅನ್ನೋ ವ್ಯಕ್ತಿ ಮೊದಲನೇ ಮಹಡಿಯಲ್ಲಿ ಬಾಡಿಗೆಗಿದ್ದ. ಒಂದು ವರ್ಷದ ಹಿಂದೆ ರಂಗಧಾಮಯ್ಯ ಪತ್ನಿ ತೀರಿ ಹೋಗಿದ್ಳು. ಹೀಗಾಗಿ ಲಕ್ಷ್ಮೀ, ಬಾಡಿಗೆಗಿದ್ದ ರಂಗಧಾಮಯ್ಯ ಮನೆಗೆ ಹೋಗಿ, ಅಡುಗೆ ಮಾಡಿ ಕೊಡ್ತಿದ್ಳು. ಕೆಲವೊಮ್ಮೆ ಬಟ್ಟೆ ಒಗೆಯಲೂ ಸಹಾಯ ಮಾಡ್ತಿದ್ಳು. ರಂಗಧಾಮಯ್ಯ ಕೂಡ ಲಕ್ಷ್ಮೀ ಅವರ ಮನೆಗೆ ಬಂದು ಸಲುಗೆಯಿಂದಲೇ ಇರ್ತಿದ್ದ. ಎಂದಿನಂತೆ ಇಂದು ಮನೆಯೊಳಕ್ಕೆ ಹೋಗಿದ್ದ ರಂಗಧಾಮಯ್ಯ ನೋಡನೋಡುತ್ತಲೇ ರಕ್ತದೋಕುಳಿ ಹರಿಸಿದ್ದಾನೆ.

ಚಿನ್ನಾಭರಣ ವಾಪಸ್​​ ಕೊಡುವ ವಿಚಾರಕ್ಕೆ ಅಥವಾ ಮನೆ ಖಾಲಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ರಂಗಧಾಮಯ್ಯ ಮತ್ತು ಲಕ್ಷ್ಮೀ ನಡುವೆ ಗಲಾಟೆಯಾಗಿರುವ ಸಾಧ್ಯತೆಯಿದೆ. ಅದು ವಿಕೋಪಕ್ಕೆ ತಿರುಗಿ ರಂಗಧಾಮಯ್ಯ ಲಕ್ಷ್ಮೀ ಮೇಲೆ ಹಲ್ಲೆಗೆ ಯತ್ನಿಸಿದ್ದ. ಆಗ ಆಕೆಯೂ ಆತನಿಗೆ ಕಪಾಳಮೋಕ್ಷ ಮಾಡಿ, ಚಾಕುವಿನಿಂದ ಇರಿದು ಆತನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ಳು. ಕೆರಳಿ ಕೆಂಡವಾಗಿದ್ದ ರಂಗಧಾಮಯ್ಯ, ಲಕ್ಷ್ಮೀ ಕತ್ತನ್ನು ಹಿಡಿದು ಗೋಡೆಗೆ ತಳ್ಳಿ ಹತ್ಯೆಗೈದಿದ್ದಾನೆ. ಬಳಿಕ ಎದುರಿಗೆ ಬಂದ ಲಕ್ಷ್ಮೀ ಮಗಳು ಚೈತ್ರಾ ಮೇಲೆ ಹಲ್ಲೆ ನಡೆಸಿದ್ದಾನೆ. ಏನಾಯ್ತು ಅಂತ ಓಡಿ ಬಂದ ಲಕ್ಷ್ಮೀ ಪತಿ ಶಿವರಾಜ್ ಮೇಲೆಯೂ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಕೊನೆಗೆ ಪೊಲೀಸರು ತನ್ನನ್ನ ಜೈಲಿಗಟ್ತಾರೆ ಅನ್ನೋ ಭಯದಲ್ಲಿ ಮನೆಗೆ ಹೋಗಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಪೊಲೀಸರು ಅಂದಾಜಿಸಿದ್ದಾರೆ.

ಘಟನೆ ಸಂಬಂಧ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಮತ್ತೊಂದು ಕಡೆ ಅಪ್ಪ ಶಿವರಾಜ್ ಹಾಗೂ ಮಗಳು ಚೈತ್ರಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು ಸದ್ಯ ತನಿಖೆ ಮುಂದುವರಿದಿದೆ.

ABOUT THE AUTHOR

...view details