ಕರ್ನಾಟಕ

karnataka

ETV Bharat / state

ಎಸ್.ಎಂ.ಕೃಷ್ಣ ಭೇಟಿಯಾದ ಸುಮಲತಾ: ಬಿಎಸ್​ವೈ, ಆರ್.ಅಶೋಕ್ ಸಾಥ್ - ಸುಮಲತಾ ಅಂಬರೀಶ್

ಚುನಾವಣೆಯಲ್ಲಿ ಬೆಂಬಲ ‌‌ನೀಡಿದ್ದ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಅವರಿಗೆ ಧನ್ಯವಾದ ಹೇಳಲು ಬಂದಿದ್ದೇನೆ. ನನ್ನ ಗೆಲುವಿಗೆ ಪರೋಕ್ಷವಾಗಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಕಾಂಗ್ರೆಸ್, ರೈತ ಸಂಘದ ಮುಖಂಡರು‌ ನನ್ನ ಗೆಲುವಿಗೆ ಶ್ರಮಿಸಿದ್ದಾರೆ ಎಂದು ನಿಯೋಜಿತ ಸಂಸದೆ ಸುಮಲತಾ ತಿಳಿಸಿದರು.

ಎಸ್.ಎಂ.ಕೃಷ್ಣ ಭೇಟಿಯಾದ ಸಂಸದೆ ಸುಮಲತಾ

By

Published : May 26, 2019, 5:57 PM IST

ಬೆಂಗಳೂರು:ಮಂಡ್ಯ ನಿಯೋಜಿತ ಸಂಸದೆ ಸುಮಲತಾ ಅಂಬರೀಶ್ ಎಸ್.ಎಂ.ಕೃಷ್ಣರನ್ನು ಭೇಟಿಯಾಗಿ ಚುನಾವಣೆಯಲ್ಲಿ ಬೆಂಬಲ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಸ್.ಯಡಿಯೂರಪ್ಪರನ್ನು ಡಾಲರ್ಸ್ ಕಾಲೋನಿಯಲ್ಲಿ ನಮ್ಮ ನಿವಾಸದಲ್ಲಿ ಭೇಟಿಯಾದ ಬಳಿಕ ಸುಮಲತಾ, ಬಿಎಸ್​ವೈ ಜೊತೆಗೂಡಿ ಎಸ್.ಎಂ.ಕೃಷ್ಣ ನಿವಾಸಕ್ಕೆ ಆಗಮಿಸಿದರು. ಚುನಾವಣೆಯಲ್ಲಿ ಬೆಂಬಲ ನೀಡಿದ್ದಕ್ಕೆ ಎಸ್.ಎಂ.ಕೃಷ್ಣಗೆ ಕೃತಜ್ಞತೆ ಸಲ್ಲಿಸಿದರು.

ಎಸ್.ಎಂ.ಕೃಷ್ಣ ಭೇಟಿಯಾದ ಸಂಸದೆ ಸುಮಲತಾ

ಬಳಿಕ ಮಾತನಾಡಿದ ಅವರು, ತಮಗೆ ಬೆಂಬಲ ‌‌ನೀಡಿದ್ದ ಹಿರಿಯ ಮುಖಂಡ ಎಸ್.ಎಂ.ಕೃಷ್ಣಗೆ ಧನ್ಯವಾದ ಹೇಳಲು ಬಂದಿದ್ದೇನೆ. ನನ್ನ ಗೆಲುವಿಗೆ ಪರೋಕ್ಷವಾಗಿ ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ಕಾಂಗ್ರೆಸ್, ರೈತ ಸಂಘದ ಮುಖಂಡರು‌ ನನ್ನ ಗೆಲುವಿಗೆ ಶ್ರಮಿಸಿದ್ದಾರೆ ಎಂದರು.

ಕಾಲುವೆಗೆ ನೀರು ಕುರಿತ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸುಮಲತಾ, ನನ್ನ ಕ್ಷೇತ್ರದ ಜನರ ಕೆಲಸ ಮಾಡೋದು ನನಗೆ ಗೊತ್ತಿದೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಜಿಲ್ಲೆಯ ಅಭಿವೃದ್ಧಿಗೆ ನನ್ನದೇ ವಿಷನ್ ಇದೆ. ಯಾರೋ ಏನೋ ಹೇಳಿದ್ರು ಅಂತ ನಾನು ಕೆಲಸ ಮಾಡಲ್ಲ. ಕೆಲಸ ಮಾಡೋದು ನನಗೆ‌ ಗೊತ್ತಿದೆ. ನಾನು ಕೆಲಸ ಮಾಡಿ ತೋರಿಸ್ತೀನಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ABOUT THE AUTHOR

...view details