ಕರ್ನಾಟಕ

karnataka

ETV Bharat / state

ಜನ್​ಧನ್​ ಖಾತೆಗೆ ವರ್ಗಾವಣೆಯಾಗದ ಹಣ... ಖಾತೆದಾರರ ಅಲೆದಾಟ - ಆರ್ಥಿಕ ತಜ್ಞ ನಿತ್ಯಾನಂದ

ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜನ್​​ಧನ್​ ಖಾತೆ ಮೂಲಕ ಜನರ ಸಂಕಷ್ಟಕ್ಕೆ ನೆರವಾಗುವ ಕಾರ್ಯ ಮಾಡಿತ್ತು, ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಜನರ ಕೈಗೆ ಹಣ ಸರಿಯಾದ ಸಮಯಕ್ಕೆ ಸಿಗದೇ ಪ್ರತಿನಿತ್ಯ ಬ್ಯಾಂಕ್​ ಮುಂದೆ ಜನರ ಸಾಲು ಮುಂದುವರಿಯುತ್ತಲೇ ಇದೆ.

Money is not transferred to Jan Dhan's account..people struggle to get money
ಜನ್​ಧನ್​ ಖಾತೆಗೆ ವರ್ಗಾವಣೆಯಾಗದ ಹಣ...ತಪ್ಪದ ಖಾತೆದಾರರ ಅಲೆದಾಟ

By

Published : Jul 18, 2020, 4:43 PM IST

ಬೆಂಗಳೂರು: ಕೊರೊನಾ ಸೋಂಕಿನ ಸಂಕಷ್ಟದಿಂದ 3 ತಿಂಗಳು ಜನ್ ಧನ್ ಖಾತೆಗೆ ಕೇಂದ್ರ ಸರ್ಕಾರ ತಿಂಗಳಿಗೆ 500 ರೂಪಾಯಿ ಜಮಾ ಮಾಡುವುದಾಗಿ ತಿಳಿಸಿದೆ. ಆದರೆ ವಿವಿಧ ಕಾರಣಗಳಿಂದ ದೇಶದ ಶೇ.11ರಷ್ಟು ಖಾತೆದಾರರಿಗೆ ಹಣ ತಲುಪಿಲ್ಲ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆಧಾರ್​ಕಾರ್ಡ್ ಜೊತೆ ಲಿಂಕ್ ಆಗದೆ ಇರುವ ಖಾತೆಗಳಿಗೆ ಇನ್ನೂ 500 ರೂಪಾಯಿ ಬಂದಿಲ್ಲ, ಇದರಿಂದ ಕೆಲವರಿಗೆ ಮಾತ್ರ ಬಂದಿದ್ದು ಬರಬೇಕಾದ ಹಣಕ್ಕೆ ಬಡ ಜನ, ಅದರಲ್ಲಿ ಹೆಚ್ಚಿನ ಮಹಿಳೆಯರು ಕಾದು ಕುಳಿತಿದ್ದಾರೆ.

ಸದ್ಯಕ್ಕೆ ಯಾವುದೇ ಕೆಲಸವಿಲ್ಲದ ಈ ವರ್ಗದ ಜನ, ಮನೆಗೆಲಸ, ಕಟ್ಟಡ ನಿರ್ಮಾಣ ಹಾಗೂ ಇನ್ನಿತರೆ ಕೆಲಸಗಳು ನಿಂತಿರುವ ಕಾರಣ ಹಣವಿಲ್ಲದೆ ಸ್ವಂತ ಉರಿಗೂ ತೆರಳಲಾಗದೆ ಸಂಕಷ್ಟದ ಸ್ಥಿತಿಯಲ್ಲಿ ಇದ್ದಾರೆ.

ಆರ್ಥಿಕ ತಜ್ಞ ನಿತ್ಯಾನಂದ

ಇನ್ನು ಈ ಬಗ್ಗೆ ಮಾತನಾಡಿದ ಆರ್ಥಿಕ ತಜ್ಞ ನಿತ್ಯಾನಂದ, ನಮ್ಮ ದೇಶದಲ್ಲಿ ಉತ್ತಮ ಯೋಜನೆಗಳು ಘೋಷಣೆಯಾಗುತ್ತದೆ. ಹಣವನ್ನೂ ಬಿಡುಗಡೆ ಮಾಡಲಾಗುತ್ತದೆ. ಆದರೆ ಆ ಹಣ ಫಲಾನುಭವಿಗಳಿಗೆ ಸೇರುವಲ್ಲಿ ಅಡತಡೆಗಳು ಹೆಚ್ಚಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈಗ ಕೊರೊನಾ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಹೆಣ್ಣು ಮಕ್ಕಳಿಗೆ ತಿಂಗಳಿಗೆ 500 ರೂಪಾಯಿ ನೀಡುವುದಾಗಿ ಹೇಳಿದ್ದರು. ಆದರೆ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಈ ಹಣ ತಲುಪಿಲ್ಲ ಎಂದಿದ್ದಾರೆ.

ಹೆಚ್ಚಿನ ಜನ ಅನಕ್ಷರಸ್ಥರು, ಅವರಿಗೆ ಎಲ್ಲಿ ಹೋಗಿ ಹಣ ಪಡೆಯಬೇಕು ಹಾಗೂ ಹೇಗೆ ಪಡೆಯಬೇಕು ಎಂದು ತಿಳಿದಿಲ್ಲ. ಸದ್ಯದ ಮಾಹಿತಿ ಪ್ರಕಾರ ಉತ್ತರ ಕರ್ನಾಟಕದ ಹೆಚ್ಚು ಜನರಿಗೆ ಈ ಹಣ ಸೇರಿಲ್ಲ ಎನ್ನಲಾಗಿದೆ. ಮುಖ್ಯವಾಗಿ ಬಹುಪಾಲು ಖಾತೆಗಳು ಆಧಾರ್ ಜೊತೆ ಜೋಡಣೆ ಆಗದೆ ಇಎರುವುದು ಸಮಸ್ಯೆಯಾಗಿದೆ. ಅದಕ್ಕೆ ಸೂಕ್ತ ಮಾಹಿತಿ ನೀಡಿ ಆಧಾರ್​​ಕಾರ್ಡ್ ಜೊತೆ ಜೋಡಣೆ ಮಾಡಬೇಕು ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details