ಕರ್ನಾಟಕ

karnataka

ETV Bharat / state

ನಮ್ಮ ಅಮಾನತಿಗಿಂತಲೂ ಐಎಎಸ್ ಅಧಿಕಾರಿಗಳ ದುರ್ಬಳಕೆ ವಿರುದ್ಧ ಹೋರಾಟ: ಯಶಪಾಲ್ ಸುವರ್ಣ

ಸರ್ಕಾರ ತನ್ನ ವ್ಯಾಪ್ತಿಯನ್ನ ಮರೆತು ಐಎಎಸ್ ಅಧಿಕಾರಿಗಳ ದುರ್ಬಳಕೆ ಮಾಡಿಕೊಳ್ಳುವ ಕೆಲಸ ಮಾಡಿದೆ ಎಂದು ಶಾಸಕ ಯಶಪಾಲ್ ಸುವರ್ಣ ಆರೋಪಿಸಿದ್ದಾರೆ.

By

Published : Jul 19, 2023, 10:57 PM IST

Updated : Jul 20, 2023, 7:30 AM IST

MLA Yashpal Suvarna reaction on congress government
ನಮ್ಮ ಅಮಾನತ್ತಿಗಿಂತಲೂ ಐಎಎಸ್ ಅಧಿಕಾರಿಗಳ ದುರ್ಬಳಕೆ ವಿರುದ್ಧ ಹೋರಾಟ: ಯಶಪಾಲ್ ಸುವರ್ಣ

ಶಾಸಕ ಯಶಪಾಲ್ ಸುವರ್ಣ

ಬೆಂಗಳೂರು:ಬೇಲ್ ಮೇಲಿರುವ ನಾಯಕರನ್ನು ಸ್ವಾಗತಿಸಲು ಐಎಎಸ್ ಅಧಿಕಾರಿಗಳನ್ನು ಪ್ರೋಟೋಕಾಲ್ ಅಧಿಕಾರಿಗಳಾಗಿ ಜವಾಬ್ದಾರಿ ವಹಿಸಿದ್ದು ಖಂಡನೀಯವಾಗಿದ್ದು, ನಮ್ಮ ಅಮಾನತಿಗಿಂತಲೂ ಐಎಎಸ್ ಅಧಿಕಾರಿಗಳ ದುರ್ಬಳಕೆ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಪ್ರಸ್ತುತ ಅಧಿವೇಶನದ ಉಳಿದ ಕಲಾಪದಿಂದ ಅಮಾನತಿಗೊಳಗಾಗಿರುವ ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳನ್ನು ದೇಶದ ಮೂಲೆ ಮೂಲೆಯಿಂದ ಬಂದ ಕಾಂಗ್ರೆಸ್ ನಾಯಕರ ಸಭೆಗೆ ಕಳುಹಿಸಿದ್ದಾರೆ. ಬೇಲ್ ಮೇಲೆ ಇರುವ ರಾಹುಲ್ ಗಾಂಧಿ ಸೇರಿ ಇತರ ನಾಯಕರನ್ನ ಸ್ವಾಗತಿಸಲು ಪ್ರೋಟೋಕಾಲ್ ಅಧಿಕಾರಿಯಾಗಿ ಜವಾಬ್ದಾರಿಯನ್ನು ವಹಿಸಿದ್ದರು. ಸರ್ಕಾರ ತನ್ನ ವ್ಯಾಪ್ತಿಯನ್ನ ಮರೆತು ಐಎಎಸ್ ಅಧಿಕಾರಿಗಳ ದುರ್ಬಳಕೆ ಮಾಡಿಕೊಳ್ಳುವ ಕೆಲಸ ಮಾಡಿದೆ. ಅವರವರ ಇಲಾಖೆಗಳಲ್ಲಿ ಮಾಡಬೇಕಾದ ಕೆಲಸ ಬೇಕಾದಷ್ಟಿದೆ ಅದಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಬಿಟ್ಟು ಈ ರೀತಿ ಜಾಮೀನಿನ ಮೇಲೆ ಹೊರಗಿರುವ ನಾಯಕರುಗಳಿಗೆ ಪ್ರೋಟಾಕಾಲ್ ಅಧಿಕಾರಿಗಳಾಗಿ ನೇಮಕ ಮಾಡಿದ್ದಾರೆ ಎಂದು ಟೀಕಿಸಿದರು.

ಐಎಎಸ್ ಅಧಿಕಾರಿಗಳ ಅಧಿಕಾರ ಮೊಟಕುಗೊಳಿಸಿ ಈ ರೀತಿ ಮಾಡಿದ್ದಾರೆ ಮುಂದೆ ಇನ್ನಷ್ಟು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನ ಕಾಂಗ್ರೆಸ್​​​ನವರು ಮಾಡುತ್ತಾರೆ. ಆಗ ಕಾಂಗ್ರೆಸ್ ನಾಯಕರ ಕಾಯಲು ಜಿಲ್ಲೆಗಳಲ್ಲಿರುವ ಅಧಿಕಾರಿಗಳ ಬಳಕೆ ಮಾಡುವ ಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಐಎಎಸ್ ಅಧಿಕಾರಿಗಳು ದೇಶದಲ್ಲಿ ಉನ್ನತ ಪದವಿ ಪಡೆದ ಅಧಿಕಾರಿಗಳು ಸರ್ಕಾರ ನಡೆಸಲು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಂವಿಧಾನಬದ್ಧವಾಗಿ ಸರ್ಕಾರವನ್ನು ನಡೆಸಬೇಕು ಲಾಲು ಪ್ರಸಾದ್ ಯಾದವ್ ಅವರ ವ್ಯಕ್ತಿತ್ವಕ್ಕೆ ನಮ್ಮ ಐಎಎಸ್ ಅಧಿಕಾರಿ ಸ್ವಾಗತ ಮಾಡಿ ಕರೆದುಕೊಂಡು ಬರತ್ತಾರೆ ಎಂದರೆ ದೇಶದ ಜನತೆಗೆ ರಾಜ್ಯ ಸರ್ಕಾರ ಯಾವ ರೀತಿಯ ಸಂದೇಶ ಕೊಡುತ್ತದೆ. ಜನಸಾಮಾನ್ಯರು ಕೂಡ ಹಣಬಲದಿಂದ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡುವ ಮಟ್ಟದ ಆಲೋಚನೆ ಮಾಡುತ್ತಾರೆ. ಬಿಹಾರ ಇತ್ಯಾದಿಯಲ್ಲಿ ಐಎಎಸ್ ಅಧಿಕಾರಿಗಳನ್ನು ಕೀಳು ಮಟ್ಟದಲ್ಲಿ ನೋಡುತ್ತಿದ್ದಾರೆ ಅದೇ ರೀತಿ ಸಿದ್ದರಾಮಯ್ಯ ಅಧಿಕಾರಿಗಳ ದುರ್ಬಳಕೆ ಮಾಡಿದರೆ, ರಾಜ್ಯದ ಜನತೆಗೆ ದ್ರೋಹ ಮಾಡಿದಂತೆ ಎಂದು ವಾಗ್ದಾಳಿ ನಡೆಸಿದರು.

ನಾವು ಜನರಿಂದ ಆಯ್ಕೆಯಾಗಿ ಬಂದಿದ್ದೇವೆ ಜನರಿಗೆ ನ್ಯಾಯ ಕೊಡಬೇಕು ರಾಜ್ಯದಲ್ಲಿ ಮಳೆಯ ಅಭಾವ ಇದೆ ಬರಪೀಡಿತ ಪ್ರದೇಶಗಳು ತುಂಬಾ ಇವೆ, ನೀರಿನ ಸಮಸ್ಯೆ ಇದೆ ಕೆಲವು ಕಡೆ ನೀರು ಹೆಚ್ಚಾಗಿ ಹಾನಿಯೂ ಆಗಿದೆ. ಆದರೆ, ಆ ಭಾಗಕ್ಕೆ ಭೇಟಿ ಕೊಡದೇ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡದೇ ದಾರಿ ತಪ್ಪಿಸುವ ರೀತಿಯಲ್ಲಿ ನನ್ನನ್ನು ಸೇರಿ 10 ಶಾಸಕರನ್ನ ಅಮಾನತು ಮಾಡಿದ್ದಾರೆ ಎಂದು ಟೀಕಿಸಿದರು.

ನಿನ್ನೆಯ ದಿನ ಇಡೀ ಆಡಳಿತ ವ್ಯವಸ್ಥೆ, ಪೊಲೀಸ್ ವ್ಯವಸ್ಥೆಯನ್ನು ಇವರ ಕೆಲಸ ಕಾರ್ಯಗಳಿಗೆ ಬಳಸಿಕೊಂಡಿದ್ದಾರೆ ಹಾಗಾಗಿ ಭಯೋತ್ಪಾದಕ ಚಟುವಟಿಕೆ ಯತ್ನದ ಕೃತ್ಯ ಕಂಡು ಬಂದಿದೆ ಕಾಂಗ್ರೆಸಿನ ಚಿಲ್ಲರೆ ನಾಯಕರು ರಾಜ್ಯಕ್ಕೆ ಬಂದಿದ್ದಾರೆ ಅವರಿಗೆ ರಕ್ಷಣೆ ಕೊಡುವುದನ್ನು ಬಿಟ್ಟು ರಾಜ್ಯದ ಆರು ಕೋಟಿ ಜನರ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲದ ಕಾಂಗ್ರೆಸ್, ಸಾಂವಿಧಾನಿಕ ಮೌಲ್ಯಗಳನ್ನು ಕಸಕ್ಕೆ ಸಮ ಎನ್ನುವಂತೆ ವರ್ತಿಸಿದೆ : ಹೆಚ್​ಡಿಕೆ ಟೀಕೆ

Last Updated : Jul 20, 2023, 7:30 AM IST

ABOUT THE AUTHOR

...view details