ಬೆಂಗಳೂರು:ಡಿಜೆಹಳ್ಳಿ ಗಲಭೆ ಪ್ರಕರಣದಲ್ಲಿ ಯಾರೇ ಅಪರಾಧಿಗಳು ಇರಲಿ ಶಿಕ್ಷೆ ಆಗಬೇಕು ಎಂದು ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ಸಂಪತ್ ರಾಜ್ರನ್ನು ಪಕ್ಷದಿಂದ ಉಚ್ಛಾಟಿಸಲು ಮನವಿ ಮಾಡುತ್ತೇನೆ : ಶಾಸಕ ಅಖಂಡ ಶ್ರೀನಿವಾಸಮೂರ್ತಿ ಶಾಸಕರ ಭವನದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಧ್ಯಮದ ಮೂಲಕ ಎಲ್ಲಾ ತಿಳಿಯಿತು. ಮಾಧ್ಯಮಗಳಿಗೆ ಧನ್ಯವಾದಗಳು. ನಾನು ಪಬ್ಲಿಕ್ ಸರ್ವೆಂಟ್ ಆಗಿ ಕೆಲಸ ಮಾಡಿದ್ದೇನೆ. ಸಂಪತ್ ರಾಜ್ ಗೆ ಏನು ದ್ವೇಷ ಎಂಬುದನ್ನು ಅವರನ್ನೇ ಕೇಳಿ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗುತ್ತಿದ್ದೆ ಎಂದರು.
ಚಾರ್ಜ್ ಶೀಟ್ನಲ್ಲಿ ಸಂಪತ್ ರಾಜ್ ಹೆಸರು ಉಲ್ಲೇಖಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೊತೆ ಮಾತನಾಡುತ್ತೇನೆ. ತಪ್ಪಿತಸ್ಥರಾಗಿದ್ದರೆ ಸಂಪತ್ ರಾಜ್ರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಮನವಿ ಮಾಡುತ್ತೇನೆ. ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.
ನಮ್ಮ ಪಕ್ಷದವರು ಸಂಪತ್ ರಾಜ್ ರನ್ನು ರಕ್ಷಣೆ ಮಾಡ್ತಿದ್ದಾರೆ ಎಂದು ನನಗೆ ಅನ್ನಿಸ್ತಿಲ್ಲ. ಈ ವಿಚಾರವಾಗಿ ಅಧ್ಯಕ್ಷರನ್ನ ಕೇಳಿ. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೆ ಸಂಪತ್ ರಾಜ್ ಗಲಾಟೆ ಮಾಡಿ, ಹೋರಾಟ ಮಾಡಿದ್ರು ನನ್ನನು ಪಕ್ಷಕ್ಕೆ ಸೇರಿಸಿಕೊಳ್ಳದಂತೆ ಹೋರಾಟ ಮಾಡಿದ್ರು ಎಂದರು. ನಾಳೆ ಈ ವಿಚಾರವಾಗಿ ಡಿ.ಕೆ ಶಿವಕುಮಾರ್ರನ್ನು ಭೇಟಿ ಮಾಡುವೆ. ಸಂಪತ್ ರಾಜ್ ಮೇಲೆ ಕ್ರಮಕ್ಕೆ ಆಗ್ರಹಿಸುವೆ. ಪಕ್ಷದ ಮುಖಂಡರು ಸಂಪತ್ ರಾಜ್ ಮೇಲೆ ಕ್ರಮ ಜರುಗಿಸುವ ವಿಶ್ವಾಸ ಇದೆ ಎಂದು ಹೇಳಿದರು.