ಬೆಂಗಳೂರು: ರಾಜ್ಯಾದ್ಯಂತ ಎಲ್ಲ ಸ್ವತ್ತುಗಳ ಮಾರಾಟ ಮತ್ತು ಖರೀದಿ ಮಾಡುವವರಿಗೆ ಕಂದಾಯ ಇಲಾಖೆ ಮಾರ್ಗಸೂಚಿ ಬೆಲೆಯಲ್ಲಿ ಶೇ. 10ರಷ್ಟು ರಿಯಾಯಿತಿ ನೀಡಿ 2022 ಜನವರಿ 1ರಿಂದ ಮಾರ್ಚ್ 31ರ ವರೆಗೆ ಘೋಷಣೆ ಮಾಡಿತ್ತು. ಇದೀಗ ಜನರ ಬೇಡಿಕೆ ಮೇರೆಗೆ ಈ ರಿಯಾಯಿತಿಯನ್ನು 2022 ಏಪ್ರಿಲ್ 25 ರಿಂದ ಜುಲೈ 24ರವರೆಗೆ ವಿಸ್ತರಿಸಿದೆ.
ನೋಂದಣಿ ಹಾಗೂ ಮುದ್ರಾಂಕ ಶುಲ್ಕ ರಿಯಾಯಿತಿ ಮುಂದುವರಿಕೆಯಾಗಿದ್ದು, ಶೇ. 10 ರಷ್ಟು ರಿಯಾಯಿತಿ ಮುಂದುವರೆಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜನವರಿ 1, 2022 ರಿಂದ ಮಾರ್ಚ್ 31, 2022 ರವರೆಗೆ ಶೇ. 10ರಷ್ಟು ರಿಯಾಯಿತಿ ನೀಡಲಾಗಿತ್ತು. ಕೋವಿಡ್ ಸಂಕಷ್ಟದ ಸಮಯದಲ್ಲಿ ಸ್ಟಾಂಪ್ ರಿಜಿಸ್ಟ್ರೇಷನ್ ದರ ಕಡಿಮೆ ಮಾಡಿದ್ದೆವು. ಶೇ. 10 ರಷ್ಟು ಕಡಿಮೆ ಮಾಡಿದ ಕಾರಣ ಹೆಚ್ಚಿನ ನೋಂದಣಿಗಳಾಗಿವೆ. ಸರ್ಕಾರಕ್ಕೂ ಆದಾಯ ಬಂದಿದೆ. ಜನರಿಗೂ ಅನುಕೂಲವಾಗಿದೆ.