ಕರ್ನಾಟಕ

karnataka

ETV Bharat / state

77 ಲಕ್ಷ ಮೌಲ್ಯದ ಮರ್ಸಿಡಿಸ್-ಬೆಂಜ್​​​​​​​ ಕಾರು: ಕೇವಲ 15 ಲಕ್ಷಕ್ಕೆ ಹರಾಜು

ಮರ್ಸಿಡಿಸ್ - ಬೆನ್ಜ್ ಕಾರು ನಕಲಿ ನಂಬರ್ ಫ್ಲೇಟ್ ಅಳವಡಿಸಿಕೊಂಡು 7 ವರ್ಷಗಳಿಂದ ಬೆಂಗಳೂರು ನಗರದಲ್ಲಿ ಓಡಾಟ‌ ನಡೆಸುತ್ತಿತ್ತು‌. ಯಶವಂತಪುರದ ಆರ್​ಟಿಒ ಇನ್​ಸ್ಪೆಕ್ಟರ್​​ ರಾಜಣ್ಣ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಕಾರನ್ನು ಜಪ್ತಿ ಮಾಡಿದ್ದಾರೆ.

By

Published : May 20, 2020, 7:03 PM IST

Updated : May 20, 2020, 10:20 PM IST

ಐಷಾರಾಮಿ ಮರ್ಸಿಡಿಸ್aಬೆನ್ಜ್  ಕಾರು
ಐಷಾರಾಮಿ ಮರ್ಸಿಡಿಸ್aಬೆನ್ಜ್ ಕಾರುಐಷಾರಾಮಿ ಮರ್ಸಿಡಿಸ್aಬೆನ್ಜ್ ಕಾರು

ಬೆಂಗಳೂರು: ಯಶವಂತಪುರದ ಆರ್​​ಟಿಓ ಅಧಿಕಾರಿಗಳು ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ಅಕ್ರಮವಾಗಿ ಓಡಾಡುತ್ತಿದ್ದ, ಐಷಾರಾಮಿ ಮರ್ಸಿಡಿಸ್-ಬೆಂಜ್​​​ ಕಾರನ್ನ ಜಪ್ತಿ ಮಾಡಿದ್ದಾರೆ.

ಆದ್ರೆ 77 ಲಕ್ಷ ರೂ.ನ ಈ ಕಾರು ಕೇವಲ 15 ಲಕ್ಷದ 75 ಸಾವಿರ ರೂ.ಗೆ ಹರಾಜಾಗಿದ್ದು, ಬಿಲ್ಡರ್ ಅರ್ಜುನ್ ಎನ್ನುವವರು ಇದನ್ನು ಬಿಡ್ ಮೂಲಕ‌ ಖರೀದಿ ಮಾಡಿದ್ದಾರೆ.

ಐಷಾರಾಮಿ ಮರ್ಸಿಡಿಸ್aಬೆನ್ಜ್ ಕಾರು

ಮರ್ಸಿಡಿಸ್-ಬೆನ್ಜ್ ಕಾರು ನಕಲಿ ನಂಬರ್ ಫ್ಲೇಟ್ ಅಳವಡಿಸಿಕೊಂಡು 7 ವರ್ಷಗಳಿಂದ ನಗರದಲ್ಲಿ ಓಡಾಟ‌ ನಡೆಸುತ್ತಿತ್ತು‌. ಈ ಬಗ್ಗೆ ಯಶವಂತಪುರ ಆರ್​​ಟಿಓ ಕಚೇರಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಯಶವಂತಪುರದ ಆರ್​ಟಿಓ ಇನ್​ಸ್ಪೆಕ್ಟರ್​​ ರಾಜಣ್ಣ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ.

ಮಂಡ್ಯ ಮೂಲದ ರಾಜುಗೌಡ ಎಂಬಾತ ತನ್ನ ಬೆಂಜ್ ಕಾರಿಗೆ ನಕಲಿ ನಂಬರ್ ಅಳವಡಿಸಿ, ಆರ್​ಟಿಒ ತೆರಿಗೆ ಪಾವತಿಸದೇ ಮೋಸ‌ ಕೂಡ ಮಾಡುತ್ತಿದ್ದರು. ಮಂಡ್ಯ ನಗರದ ಬಿ.ಕೆ. ರೇಖಾ ಎಂಬುವವರ ಹೆಸರಿನಲ್ಲಿ ಕಾರು ರಿಜಿಸ್ಟ್ರಾರ್ ಆಗಿದ್ದು, ಇವರು ಉಪಯೋಗಿಸುತ್ತಿದ್ದರು. ಹೀಗಾಗಿ ರಾಜುಗೌಡ ಮೇಲೆ ಆರ್​ಟಿಒ ಪೊಲೀಸರು ಪ್ರಕರಣ ದಾಖಲಿಸಿ, ದಾಖಲೆ ನೀಡುವಂತೆ ಸೂಚನೆ ನೀಡಿದ್ರು. ಆದರೆ ತಿಂಗಳುಗಳು ಕಳೆದರೂ ಸರಿಯಾದ ದಾಖಲೆಗಳನ್ನ ನೀಡದೇ ಇರುವ ಕಾರಣ. ಕೇವಲ 15 ಲಕ್ಷಕ್ಕೆ ಬೆಂಜ್​​​​​ ಕಾರು ಹರಾಜು ಮಾಡಲಾಗಿದೆ.

Last Updated : May 20, 2020, 10:20 PM IST

ABOUT THE AUTHOR

...view details