ಕೃಷ್ಣಗಿರಿ/ಆನೇಕಲ್: ತಮ್ಮ ಪ್ರೀತಿಗೆ ಮನೆಯವರು ಒಪ್ಪಲಿಲ್ಲವೆಂದು ಮನನೊಂದ ಪ್ರೇಮಿಗಳು ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾದ ಘಟನೆ ಕರ್ನಾಟಕ-ತಮಿಳುನಾಡು ಗಡಿಭಾಗದಲ್ಲಿರುವ ಬೈರಮಂಗಲದಲ್ಲಿ ನೆಡೆದಿದೆ.
ಪ್ರೀತಿಗೆ ಒಪ್ಪದ ಫ್ಯಾಮಿಲಿ... ರೈಲ್ವೆ ಹಳಿಯಲ್ಲಿ ಹೆಣವಾದ ಪ್ರೇಮಿಗಳು - Anekal Lovers suicide
ತಮಿಳುನಾಡಿನ ಗಡಿಭಾಗದಲ್ಲಿ ದುರಂತವೊಂದು ನಡೆದಿದೆ. ತಮ್ಮ ಪ್ರೀತಿಗೆ ಪೋಷಕರು ಒಪ್ಪಲಿಲ್ಲವೆಂದು ಜೋಡಿಯೊಂದು ಪ್ರೇಮಿಗಳಿಬ್ಬರು ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಭಗ್ನ ಪ್ರೇಮಿಗಳು ಸಾವಿಗೆ ಶರಣು
ತಮಿಳುನಾಡು ಮೂಲದ ರಾಮಸಂದ್ರ ಗ್ರಾಮದ ನಿವಾಸಿಗಳಾದ ಜ್ಯೋತಿ (25) ಮತ್ತು ಯಲ್ಲೇಶ್ (24) ಆತ್ಮಹತ್ಯೆ ಮಾಡಿಕೊಂಡವರು. ಬೈರಮಂಗಲದ ಹತ್ತಿರದ ರೈಲ್ವೆ ಹಳಿಗೆ ಭಗ್ನ ಪ್ರೇಮಿಗಳು ಸಿಲುಕಿ ಸಾವನ್ನಪ್ಪಿದ್ದಾರೆ.
ಅಕ್ಕಪಕ್ಕದ ಮನೆಯಲ್ಲಿದ್ದ ಇವರು, ಸಂಬಂಧಿಗಳಾಗಿದ್ದರು. ಕಳೆದ ತಿಂಗಳು ಜ್ಯೋತಿಗೆ ಬೇರೆ ಹುಡುಗನೊಂದಿಗೆ ನಿಶ್ಚಿತಾರ್ಥವಾಗಿತ್ತು. ಇದರಿಂದ ಮನನೊಂದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
Last Updated : Jul 23, 2019, 2:13 PM IST