ಕರ್ನಾಟಕ

karnataka

ETV Bharat / state

ರಾಜ್ಯದ ಕುಡಿಯುವ ನೀರಿನ ಯೋಜನೆಗಳಿಗೆ ವಿಶ್ವಬ್ಯಾಂಕ್‌ನಿಂದ ₹51.7 ಕೋಟಿ ಡಾಲರ್ ಸಾಲ - ಈಟಿವಿ ಭಾರತ ಕರ್ನಾಟಕ

ಮುಖ್ಯಮಂತ್ರಿಗಳ ಗೃಹ ಕಚೇರಿಗೆ ವಿಶ್ವಬ್ಯಾಂಕ್​ನ ಭಾರತದ ಕಂಟ್ರಿ ಡೈರೆಕ್ಟರ್ ಆಗಸ್ಟೆ ಟ್ಯಾನೊ ಕೊಮೆ ನೇತೃತ್ವದ ನಿಯೋಗ ಭೇಟಿ ನೀಡಿ ಸಿಎಂ ಬೊಮ್ಮಾಯಿ ಜೊತೆ ಮಾತುಕತೆ ನಡೆಸಿತು.

KN_BNG
ವಿಶ್ವಬ್ಯಾಂಕ್​ನ ಭಾರತದ ಕಂಟ್ರಿ ಡೈರೆಕ್ಟರ್ ಜೊತೆ ಸಿಎಂ ಚರ್ಚೆ

By

Published : Dec 6, 2022, 10:06 PM IST

Updated : Dec 7, 2022, 7:19 PM IST

ಬೆಂಗಳೂರು: ರಾಜ್ಯದ ಕುಡಿಯುವ ನೀರಿನ ಯೋಜನೆಗಳಿಗೆ 51.7 ಕೋಟಿ ಡಾಲರ್ ಸಾಲವನ್ನು ಅನುಮೋದಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿಶ್ವಬ್ಯಾಂಕ್​ನ ಭಾರತದ ಕಂಟ್ರಿ ಡೈರೆಕ್ಟರ್ ಆಗಸ್ಟೆ ಟ್ಯಾನೊ ಕೊಮೆ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಹಿತಿ ನೀಡಿದೆ.

ಕರ್ನಾಟಕ ನಗರ ನೀರು ಸರಬರಾಜು ನಿರ್ವಹಣಾ ಯೋಜನೆಗೆ ಹೆಚ್ಚುವರಿಯಾಗಿ 15 ಕೋಟಿ ಡಾಲರ್ ಮತ್ತು ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ಹೆಚ್ಚಿಸಲು ಕರ್ನಾಟಕ ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ 36.7 ಕೋಟಿ ಡಾಲರ್​ ಗಳ ಸಾಲವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ವಿಶ್ವಬ್ಯಾಂಕ್ ಇದೆ ಎನ್ನುವ ಮಾಹಿತಿಯನ್ನು ಕೊಮೆ ಹಂಚಿಕೊಂಡರು ಎನ್ನಲಾಗಿದೆ.

ವಿಶ್ವಬ್ಯಾಂಕ್ ಸಾಲದೊಂದಿಗೆ ಜಾರಿಗೊಳಿಸಲಿರುವ ಕುಡಿಯುವ ನೀರಿನ ಯೋಜನೆಗಳಲ್ಲಿ ನಗರ ಯೋಜನೆಗಳು ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಅನುಷ್ಠಾನಗೊಳ್ಳಲಿದ್ದು, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಳು ರಾಜ್ಯಾದ್ಯಂತ ಜಾರಿಗೊಳ್ಳಲಿವೆ. ಈ ಎರಡೂ ವ್ಯಾಪ್ತಿಯ ಯೋಜನೆಗಳು ಮುಂದಿನ 5 ರಿಂದ 8 ವರ್ಷದ ಅವಧಿಯಲ್ಲಿ ಅನುಷ್ಠಾನಗೊಳ್ಳಲಿವೆ. ಅಂತಾರಾಷ್ಟ್ರೀಯ ಪುನರ್‌ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್ ಮೂಲಕ ಸಾಲದ ಹಣವನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ:ಗ್ರಾಮ ಲೆಕ್ಕಿಗರು ಇನ್ಮುಂದೆ 'ಗ್ರಾಮ ಆಡಳಿತ ಅಧಿಕಾರಿ': ಸರ್ಕಾರ ಆದೇಶ

Last Updated : Dec 7, 2022, 7:19 PM IST

ABOUT THE AUTHOR

...view details