ಕರ್ನಾಟಕ

karnataka

ಗುಡ್​ ನ್ಯೂಸ್​: ಕರ್ನಾಟಕದಿಂದ ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್ ಸೇವೆ

ಕರ್ನಾಟಕದ ಕೆಲವೊಂದು ಜಿಲ್ಲೆಗಳಲ್ಲಿ ಅನ್​ಲಾಕ್​ ಶುರುಗೊಳ್ಳುತ್ತಿದ್ದಂತೆ ಅಂತಾರಾಜ್ಯ ಬಸ್ ಸೇವೆ ಪುನಾರಂಭಗೊಳ್ಳುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಹೊರಹಾಕಿದೆ.

By

Published : Jun 21, 2021, 3:17 PM IST

Published : Jun 21, 2021, 3:17 PM IST

KSRTC
KSRTC

ಬೆಂಗಳೂರು:ಕರ್ನಾಟಕದ ಕೆಲವೊಂದು ಜಿಲ್ಲೆಗಳು ಈಗಾಗಲೇ ಅನ್​ಲಾಕ್​ ಆಗಿದ್ದು, ಜನಜೀವನ ಈ ಹಿಂದಿನಂತೆ ಪುನಾರಂಭಗೊಳ್ಳುತ್ತಿದೆ. ಇದರ ಮಧ್ಯೆ ಕರ್ನಾಟಕ ಸರ್ಕಾರ ಅಂತಾರಾಜ್ಯ ಸಾರಿಗೆ ಮತ್ತೆ ಪುನಾರಂಭ ಮಾಡಲು ಮುಂದಾಗಿದ್ದು, ಅದರ ಪ್ರಥಮ ಹೆಜ್ಜೆಯಾಗಿ ಪಕ್ಕದ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶಕ್ಕೆ ಬಸ್​ ಸೇವೆ ಮರು ಆರಂಭ ಮಾಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ಈ ಮಹತ್ವದ ನಿರ್ಧಾರ ಹೊರಡಿಸಿದ್ದು, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಕೋವಿಡ್ ಮಾರ್ಗಸೂಚಿ ನಿಯಮದೊಂದಿಗೆ ಬಸ್​ ಸೇವೆ ನಾಳೆಯಿಂದ ಆರಂಭಗೊಳ್ಳಿಸುತ್ತಿದೆ. ಬಸ್​ನಲ್ಲಿ ಶೇ 50ರಷ್ಟು ಆಸನ ಭರ್ತಿಗೆ ಸೂಚನೆ ನೀಡಲಾಗಿದೆ. ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಮಾತ್ರ ಸೇವೆ ಲಭ್ಯವಿರಲಿದೆ. ಬಸ್​ನಲ್ಲಿ ಪ್ರಯಾಣ ಮಾಡುವವರು ಕೋವಿಡ್​ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ.

ಇದನ್ನೂ ಓದಿರಿ: Telangana Unlock​​: ಕರ್ನಾಟಕ, ಆಂಧ್ರಪ್ರದೇಶಕ್ಕೆ ಬಸ್ ಸೇವೆ ಪುನಾರಂಭ

ತೆಲಂಗಾಣದಲ್ಲಿ ಈಗಾಗಲೇ ಕೋವಿಡ್ ಲಾಕ್​ಡೌನ್ ಸಂಪೂರ್ಣವಾಗಿ ತೆರವು ಮಾಡಲಾಗಿದ್ದು, ಎಲ್ಲಾ ಸೇವೆಗಳು ಆರಂಭಗೊಂಡಿವೆ. ಜತೆಗೆ ಅಂತಾರಾಜ್ಯ ಬಸ್​ ಸೇವೆಗೂ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಇಂದಿನಿಂದ ಸಂಚಾರ ಸೇವೆ ಪುನಾರಂಭವಾಗಿದೆ. ತೆಲಂಗಾಣದಿಂದ ಆಂಧ್ರಕ್ಕೆ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಸ್ ಸೇವೆ ಇರಲಿದೆ. ಇತ್ತ ಕರ್ನಾಟಕಕ್ಕೂ ಬಸ್​​ ಸೇವೆ ಆರಂಭಗೊಂಡಿದ್ದು, ಕರ್ನಾಟಕ ಕೋವಿಡ್ ನಿಯಮದ ಅನುಸಾರವಾಗಿ ಬೆಂಗಳೂರು ನಗರ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಇಂದಿನಿಂದಲೇ ಟಿಎಸ್​ಆರ್​ಟಿಸಿ ಬಸ್ ಸಂಚಾರ ಪುನಾರಂಭವಾಗಿದೆ. ಬೆಳಗ್ಗೆ 5 ಗಂಟೆಯಿಂದ ಸಂಜೆ 7ರ ವರೆಗೆ ಬಸ್​ಗಳು ಸಂಚರಿಸಲಿವೆ.

ABOUT THE AUTHOR

...view details