ಕರ್ನಾಟಕ

karnataka

ETV Bharat / state

ಕೋವಿಡ್‌ ಸಂಕಷ್ಟ ಕಾಲದಲ್ಲಿ ಉತ್ತಮ ಸೇವೆ: ಕೆಎಸ್ಆರ್​ಟಿಸಿಗೆ ವಿಶೇಷ ಪ್ರಶಸ್ತಿ

ಕೋವಿಡ್​ ಸಮಯದಲ್ಲಿ ಉತ್ತಮ ಸೇವೆ ನಿರ್ವಹಿಸಿದ ಕೆಎಸ್ಆರ್​ಟಿಸಿಗೆ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದೆ.

KSRTC
ಕೆಎಸ್ಆರ್​ಟಿಸಿ

By

Published : Sep 22, 2021, 4:42 PM IST

ಬೆಂಗಳೂರು:ಕೆಎಸ್ಆರ್​ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ತಮ ಸೇವೆಯನ್ನು ಗುರುತಿಸಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (ಪಿಆರ್​ಸಿಐ) 5 ವರ್ಗಗಳಲ್ಲಿ ಪ್ರಶಸ್ತಿ ನೀಡಿದೆ.

1. ಸಾರಿಗೆ ಸಂಪರ್ಕದ ಚಿನ್ನದ ಪದಕ (ಕೋವಿಡ್-19 ಸಮಯದಲ್ಲಿ ನೂತನ ಗ್ರಾಹಕಸ್ನೇಹಿ ಉಪಕ್ರಮದ ಚಿನ್ನದ ಪದಕ).

2. ಸಾರ್ವಜನಿಕ ವಲಯದಲ್ಲಿ ಕೋವಿಡ್ ನಿರ್ವಹಣೆಗೆ ಬೆಳ್ಳಿ ಪದಕ.

3.ಅತ್ಯುತ್ತಮ ಸಾರ್ವಜನಿಕ ಉದ್ದಿಮೆಯಾಗಿ ಸಾಮಾಜಿಕ ಹೊಣೆಗಾರಿಕೆಯಡಿ ಕೈಗೊಂಡ ಉಪಕ್ರಮಗಳ ಅನುಷ್ಠಾನಕ್ಕೆ ಕಂಚಿನ ಪದಕ.

4. ಆರೋಗ್ಯ ರಕ್ಷಣೆ ಸಂವಹನ ಸಾಕ್ಷ್ಯ ಚಿತ್ರಗಳಿಗೆ ಎರಡು ಕಂಚಿನ ಪದಕಗಳಿಗೆ ಕೆಎಸ್ಆರ್​ಟಿಸಿ ಪಾತ್ರವಾಗಿದೆ.

ಪಿಆರ್​​ಸಿಐ ಹಾಗೂ ವಿಶ್ವ ಸಂವಹನ ಮಂಡಳಿಯು ಇತ್ತೀಚೆಗೆ ಗೋವಾದಲ್ಲಿ 15ನೇ ವಿಶ್ವ ಸಾರ್ವಜನಿಕ ಸಂಪರ್ಕ ಮಂಡಳಿಯ ಸಮ್ಮೇಳನ ಆಯೋಜಿಸಿತ್ತು. ಈ ವೇಳೆ ಗೋವಾದ ಕಲೆ ಮತ್ತು ಸಂಸ್ಕೃತಿ ಬುಡಕಟ್ಟ ಕಲ್ಯಾಣ ಸಚಿವ ಗೋವಿಂದ ಗೌಡ ಕೆಎಸ್ಆರ್​ಟಿಸಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದರು.

ಕೆಎಸ್ಆರ್​ಟಿ ವ್ಯವಸ್ಥಾಪಕ ನಿರ್ದೇಶಕರ ಮೆಚ್ಚುಗೆ:

'ಕೋವಿಡ್ ಅವಧಿಯಲ್ಲಿ ನಿಗಮ ಕೈಗೊಂಡ ಸಾರ್ವಜನಿಕಸ್ನೇಹಿ ಕಾರ್ಯಗಳು ಹಾಗೂ ಈ ನಿಟ್ಟಿನಲ್ಲಿ ನಿಗಮದ ಸಿಬ್ಬಂದಿ ಪರಿಶ್ರಮ ಶ್ಲಾಘನೀಯ.'

- ಸಿ.ಶಿವಯೋಗಿ ಕಳಸ, ಕೆಎಸ್ಆರ್​ಟಿ ವ್ಯವಸ್ಥಾಪಕ ನಿರ್ದೇಶಕ

ಇದನ್ನೂ ಓದಿ: ರಾಯಚೂರಲ್ಲಿ ಅನಾರೋಗ್ಯದಿಂದ ಅಣ್ಣ ಮೃತ; ಸಹೋದರನ ಸಾವಿನ ಸುದ್ದಿ ಬೆನ್ನಲ್ಲೇ ತಂಗಿ ನಿಧನ

ABOUT THE AUTHOR

...view details