ಕರ್ನಾಟಕ

karnataka

ETV Bharat / state

ಅನುಪಯುಕ್ತ ಸಾಮಗ್ರಿ ಬಳಸಿ ಹ್ಯಾಂಡ್ ಫ್ರೀ‌ ಸ್ಯಾನಿಟೈಸರ್ ಯುನಿಟ್ ಸ್ಥಾಪನೆ - ಕೆಎಸ್​ಆರ್​ಟಿಸಿ‌ ನಿಗಮ

ಯಾವುದೇ ಖರ್ಚು ಮಾಡದೇ ಅನುಪಯುಕ್ತ ಸಾಮಗ್ರಿಗಳನ್ನು ಬಳಸಿ ಕೆಎಸ್​ಆರ್​ಟಿಸಿ‌ ನಿಗಮವು ಹ್ಯಾಂಡ್ ಫ್ರೀ‌ ಸ್ಯಾನಿಟೈಸರ್ ಯುನಿಟ್ ತಯಾರಿಸಿದೆ.

Hand free sanitizer
ಹ್ಯಾಂಡ್ ಫ್ರೀ‌ ಸ್ಯಾನಿಟೈಸರ್ ಯುನಿಟ್

By

Published : Apr 29, 2020, 7:48 PM IST

ಬೆಂಗಳೂರು: ಕೊರೊನಾ ಭೀತಿ ಶುರುವಾದಾಗಿನಿಂದಲೂ ಕೆಎಸ್​ಆರ್​ಟಿಸಿ‌ ನಿಗಮ ಒಂದಲ್ಲ ಒಂದು ಹೊಸ ಅನ್ವೇಷಣೆ ಮಾಡುತ್ತಲೇ ಇದೆ. ಹಳೇ ಬಸ್​ಗಳನ್ನು ಮೊಬೈಲ್ ಫೀವರ್ ಕ್ಲಿನಿಕ್ ಮಾಡಿದ್ದು, ಅದೇ ಹಳೆ ಬಸ್​​​​​ಗಳನ್ನೇ ಬಳಸಿ, ರಾಸಾಯನಿಕ‌ ಸಿಂಪಡಣೆಯ ಟನಲ್ ಮಾಡಿದ್ದು ಎಲ್ಲರಿಗೂ ಗೊತ್ತೆ ಇದೆ. ಸದ್ಯ ಈಗ ಹ್ಯಾಂಡ್ ಸ್ಯಾನಿಟೈಸರ್​​ನ ಸರದಿ.

ಹ್ಯಾಂಡ್ ಫ್ರೀ‌ ಸ್ಯಾನಿಟೈಸರ್ ಯುನಿಟ್

ಹೌದು, ಇದೀಗ ತನ್ನ‌ ಚಾಲಕರ ನಿರ್ವಾಹಕರ ಆರೋಗ್ಯದ ದೃಷ್ಟಿಯಿಂದ ಘಟಕಗಳಲ್ಲಿನ ಅನುಪಯುಕ್ತ ಯಾಂತ್ರಿಕ ಸಾಮಗ್ರಿಗಳನ್ನ ಬಳಸಿ, ಹ್ಯಾಂಡ್ ಫ್ರೀ ಸ್ಯಾನಿಟೈಸರ್ ವಿತರಣಾ ಘಟಕ ತಯಾರು ಮಾಡಿದೆ.‌ ವಿಶೇಷ ಎಂದರೆ ಇದಕ್ಕಾಗಿ ಯಾವುದೇ ಖರ್ಚು ವೆಚ್ಚ ಹಾಕದೇ, ಡಿಪೋ ದಲ್ಲಿ ಸಿಗುವ ವಸ್ತುಗಳನ್ನ ಬಳಸಿ ಸಿದ್ದಮಾಡಿದ್ದಾರೆ.

ಹ್ಯಾಂಡ್ ಸ್ಯಾನಿಟೈಸರ್​ಗೆ ಡಬ್ಬಾದ ಮೇಲ್ಭಾಗವನ್ನು ಒತ್ತುವ ಅವಶ್ಯಕತೆ ಇರೋದಿಲ್ಲ, ಬದಲಿಗೆ ಕಾಲಿನ ಕೆಳಗೆ ಪ್ರೆಸ್ ಮಾಡಿದರೆ, ಆಟೋ ಮೆಟಿಕ್ ಆಗಿ ಕೈಗೆ ಸ್ಯಾನಿಟೈಸರ್ ಲಿಕ್ವಿಡ್ ಬರಲಿದೆ. ಇದೀಗ ಎಲ್ಲ ಡಿಪೋದಲ್ಲೂ ಈ ಯುನಿಟ್ ಇಡಲಾಗಿದೆ.

ABOUT THE AUTHOR

...view details