ಕರ್ನಾಟಕ

karnataka

ETV Bharat / state

ಡಾ ವೈ ರಾಮಪ್ಪ ಉಚ್ಛಾಟನೆ, ಕೆಜಿಎಫ್ ಬಾಬುಗೆ ಕಾಂಗ್ರೆಸ್‌ ಶಿಸ್ತು ಸಮಿತಿ ನೋಟಿಸ್‌

ಪಕ್ಷದ ಸಭೆ, ಸಮಾರಂಭಗಳಲ್ಲಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಗಲಾಟೆ ಮಾಡಿದ ಆರೋಪದಲ್ಲಿ ಡಾ ವೈ ರಾಮಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

By

Published : Aug 24, 2022, 10:40 PM IST

KPCC Disciplinary Committee
ಕೆಜಿಎಫ್ ಬಾಬುಗೆ ನೋಟಿಸ್

ಬೆಂಗಳೂರು: ದಾವಣಗೆರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ ವೈ ರಾಮಪ್ಪರನ್ನು ಉಚ್ಛಾಟಿಸಿ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ. ದಾವಣಗೆರೆ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಶಿಫಾರಸ್ಸಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.

ಈ ಹಿಂದೆ ಮಾಯಕೊಂಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಮಪ್ಪ, ದಾವಣಗೆರೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇದೀಗ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ತಕ್ಷಣಕ್ಕೆ ಜಾರಿಗೆ ಬರುವಂತೆ ಉಚ್ಛಾಟಿಸಲಾಗಿದೆ. ಶಾಮನೂರು ‌ಶಿವಶಂಕರಪ್ಪ ಹಾಗೂ ಡಾ ವೈ ರಾಮಪ್ಪ ‌ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು.

ಡಾ ವೈ ರಾಮಪ್ಪ ಉಚ್ಚಾಟನೆ, ಕೆಜಿಎಫ್ ಬಾಬುಗೆ ನೋಟಿಸ್

ಕೆಜಿಎಫ್ ಬಾಬುಗೆ ನೋಟಿಸ್: ಚಿಕ್ಕಪೇಟೆ ವಿಧಾನಸಭೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಆಶಯ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಯೂಸುಫ್ ಷರೀಫ್ ಅವರಿಗೂ (ಕೆಜಿಎಫ್ ಬಾಬು)ಗೆ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಇತ್ತೀಚೆಗೆ ಚಿಕ್ಕಪೇಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 350 ಕೋಟಿ ರೂಪಾಯಿ ವೆಚ್ಚದ ಯೋಜನೆಗಳನ್ನು ಪಟ್ಟಿಯನ್ನು ಹೈಕಮಾಂಡ್‌ಗೆ ಜಾಹೀರಾತುಗಳ ಮುಖಾಂತರ ವಿನಂತಿಸಿದ ಆರೋಪ ಇವರ ಮೇಲಿದೆ.

ಇದನ್ನೂ ಓದಿ :ನಿಗಮ ಮಂಡಳಿ ನೇಮಕಾತಿ ರದ್ದು: ಕಾಂಗ್ರೆಸ್ ಸೇರಲು ದಾರಿ ಸುಗಮ ಎಂದ ವಿ ಎಸ್ ಪಾಟೀಲ್

ABOUT THE AUTHOR

...view details