ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವ್ಯವಸ್ಥಿತವಾಗಿ ಜಾಲ ರೂಪಿಸಿಕೊಂಡು ಯುವಕ-ಯುವತಿಯರಿಗೆ ಹೆರಾಯಿನ್ ಮಾರುತ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ವಿವೇಕನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಲ್ಲಿ ಯುವಕ-ಯುವತಿಯರಿಗೆ ಹೆರಾಯಿನ್ ಮಾರಾಟ: ಮೂವರು ಬಂಧನ - Kannada news
ಹೆರಾಯಿನ್ ಮಾದಕ ವಸ್ತು ಮಾರಟ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾದ ಸಿಲಿಕಾನ್ ಸಿಟಿ ವಿವೇಕನಗರ ಪೊಲೀಸರು.
ಮುಜಿಬುರ್, ಅನ್ವರ್, ಲಿಯಾನ್ ಬಂಧಿತ ಆರೋಪಿಗಳು. ಇವರು ನಗರದಲ್ಲಿ ತಮ್ಮದೇ ಜಾಲ ಸೃಷ್ಟಿಸಿ ವಿದ್ಯಾರ್ಥಿಗಳು ಹಾಗೂ ಪಬ್ಗಳಿಗೆ ಬರುವ ಯುವತಿಯರಿಗೆ ಹೆರಾಯಿನ್ ಮಾರಟ ಮಾಡ್ತಿದ್ರು. ಖಚಿತ ಮಾಹಿತಿ ಮೇರೆಗೆ ವಿವೇಕನಗರ ಠಾಣಾ ವ್ಯಾಪ್ತಿಯ ಪೊಲೀಸರು ಅಸ್ಟೀನ್ ಟೌನ್, ಬಿಡಿಎ ಕಾಂಪ್ಲೆಕ್ಸ್ ಹಿಂಭಾಗ ದಾಳಿ ಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ.
ಬಂಧಿತರಿಂದ 7,750 ರೂ. ನಗದು, ಗಾಂಜಾ ವಶಪಡಿಸಿದ್ದಾರೆ. ಇನ್ನು ತನಿಖೆಯಲ್ಲಿ ಆರೋಪಿಗಳು ಹೆರಾಯಿನ್ ಮಾದಕ ವಸ್ತುವನ್ನು ಮಣಿಪುರದಿಂದ ತರಿಸಿ ತಮ್ಮದೇ ವ್ಯವಸ್ಥಿತ ಗಿರಾಕಿಗಳಿಗೆ ಮಾರಟ ಮಾಡ್ತಿದ್ರು. ಅಷ್ಟೆ ಅಲ್ಲದೆ ವೀಕೆಂಡ್ನಲ್ಲಿ ನಗರದ ಪ್ರತಿಷ್ಠಿತ ಪಬ್ಗಳಿಗೆ ಹೆರಾಯಿನ್ ಮಾರಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯ ವಿವೇಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.