ಬೆಂಗಳೂರು: ಸೆಪ್ಟೆಂಬರ್ 2ಕ್ಕೆ ನಿಗದಿ ಆಗಿರುವ ಕೆಂಪೇಗೌಡ ದಿನಾಚರಣೆ ಕುರಿತು ಇಂದು ಎರಡನೇ ಸಭೆ ನಡೆದಿದ್ದು, ಈ ಬಾರಿ 20 ಕೊರೊನಾ ವಾರಿಯರ್ಸ್ಗೆ ಕೆಂಪೇಗೌಡ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಪ್ರಶಸ್ತಿ ಪುರಸ್ಕೃತರ ಆಯ್ಕೆ ಸೋಮವಾರ ನಡೆಯಲಿದೆ.
20 ಕೊರೊನಾ ವಾರಿಯರ್ಸ್ಗೆ ಕೆಂಪೇಗೌಡ ಪ್ರಶಸ್ತಿ ನೀಡಲು ನಿರ್ಧಾರ - Bangalore latest news
ಮೇಯರ್ ಗೌತಮ್ ಕುಮಾರ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಆಗಿದೆ. ಈ ಸಮಿತಿಯಲ್ಲಿ ಉಪಮೇಯರ್ ರಾಮ್ ಮೋಹನ್ ರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ವಿಪಕ್ಷ ನಾಯಕ ವಾಜಿದ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷೆ ಅರುಣಾ ರವಿ ಇದ್ದಾರೆ. ಅಲ್ಲದೇ ಆಯಾ ಕ್ಷೇತ್ರದ ಅಧಿಕಾರಿಗಳ ಸಲಹೆ ಪಡೆದು 20 ಕೊರೊನಾ ವಾರಿಯರ್ಸ್ಗಳನ್ನು ಆಯ್ಕೆ ಮಾಡಲಿದ್ದಾರೆ.
BBMP office
ಇದಕ್ಕಾಗಿ ಮೇಯರ್ ಗೌತಮ್ ಕುಮಾರ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಆಗಿದೆ. ಈ ಸಮಿತಿಯಲ್ಲಿ ಉಪಮೇಯರ್ ರಾಮ್ ಮೋಹನ್ ರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ವಿಪಕ್ಷ ನಾಯಕ ವಾಜಿದ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷೆ ಅರುಣಾ ರವಿ ಇದ್ದಾರೆ. ಅಲ್ಲದೇ ಆಯಾ ಕ್ಷೇತ್ರದ ಅಧಿಕಾರಿಗಳ ಸಲಹೆ ಪಡೆದು 20 ಕೊರೊನಾ ವಾರಿಯರ್ಸ್ಗಳನ್ನು ಆಯ್ಕೆ ಮಾಡಲಿದ್ದಾರೆ. ಪ್ರಶಸ್ತಿಗೆ ಆಯ್ಕೆ ಆಗುವವರಿಗೆ 50,000 ರೂ. ಹಾಗೂ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತದೆ.