ಕರ್ನಾಟಕ

karnataka

ETV Bharat / state

ಕರ್ನಾಟಕ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ: ಹಿಮಾಚಲದ ಕಥೆಯೇ ಪುನರಾವರ್ತನೆ - ಕರ್ನಾಟಕ ವಿಧಾನಸಭಾ ಚುನಾವಣೆ 2023

ಕರ್ನಾಟಕ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಕಾಣದ ಹಿನ್ನೆಲೆಯಲ್ಲಿ ಪಕ್ಷ ತೊರೆದು ಅನ್ಯ ಪಕ್ಷಗಳಿಗೆ ಸೇರಿದ ಅಥವಾ ಪಕ್ಷೇತರರಾಗಿ ಕಣಕ್ಕಿಳಿದಿರುವ ಬಿಜೆಪಿ ನಾಯಕರ ನಿರ್ಧಾರವು ಕಳೆದ ವರ್ಷ ನಡೆದ ಹಿಮಾಚಲ ಪ್ರದೇಶ ಚುನಾವಣೆಯನ್ನು ನೆನಪಿಸುವಂತಿದೆ. ಈ ಕುರಿತು ಈಟಿವಿ ಭಾರತ್ ನೆಟ್​ವರ್ಕ್​ ಸಂಪಾದಕ ಬಿಲಾಲ್ ಭಟ್ ಅವರ ವಿಶ್ಲೇಷಣೆ ಇಲ್ಲಿದೆ.

Karnataka elections : Candidate selection repeats the story of Himachal Pradesh polls
ಕರ್ನಾಟಕ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ: ಹಿಮಾಚಲದ ಪುನರಾವರ್ತನೆ ಕಥೆ

By

Published : Apr 18, 2023, 2:55 PM IST

ಕಳೆದ ವರ್ಷ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ತಾನು ಕಂಡಿರುವ ಅನುಭವವು ಮುಂಬರುವ, ಮೇ 10ರಂದು ನಡೆಯಲಿರುವ ದಕ್ಷಿಣದ ರಾಜ್ಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಪುನರಾವರ್ತನೆಯಾಗುತ್ತಿದೆ. ಕರ್ನಾಟಕವು ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಈ ರಾಜ್ಯಗಳಲ್ಲೂ ತನ್ನ ಪ್ರಭಾವವನ್ನು ಹೆಚ್ಚಿಸಲು ಕೇಸರಿ ಪಕ್ಷಕ್ಕೆ ಗೆಲುವಿಗಾಗಿ ಕಾರ್ಯತಂತ್ರ ರೂಪಿಸುವುದು ಮುಖ್ಯವಾಗಿದೆ.

ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಕೋಟೆಯನ್ನು ಭದ್ರಪಡಿಸಿಕೊಳ್ಳಲು ಮತ್ತು ಅಧಿಕಾರದಲ್ಲಿ ಮುಂದುವರಿಸಲು ಸಾಧ್ಯವಿರುವ ಎಲ್ಲ ತಂತ್ರಗಳನ್ನೂ ಹೆಣೆಯುತ್ತಿದೆ. ಇದೇ ಕಾರಣಕ್ಕೆ ಪಕ್ಷವು ತಮ್ಮ ನಾಯಕರ ಪಕ್ಷಾಂತರ ತಪ್ಪಿಸಲು ಅಭ್ಯರ್ಥಿಗಳ ಪಟ್ಟಿಯನ್ನು ವಿಳಂಬ ಮಾಡಿತ್ತು. ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತಳಮಟ್ಟದ ಕಾರ್ಯಕರ್ತರನ್ನು ತೊಡಗಿಸಿಕೊಳ್ಳುವ ಕ್ರಮದ ಒಂದು ಭಾಗವಾಗಿ ಅಭ್ಯರ್ಥಿಗಳು ಪಕ್ಷದ ಮಟ್ಟದಲ್ಲಿ ನಡೆಯುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂಬ ಮಹತ್ವಾಕಾಂಕ್ಷಿ ಪ್ರಯೋಗವನ್ನು ಮಾಡಲಾಯಿತು. ರಾಜ್ಯದ ಒಟ್ಟು 224 ವಿಧಾನಸಭಾ ಸ್ಥಾನಗಳಲ್ಲಿ ಪ್ರತಿಯೊಂದು ಕ್ಷೇತ್ರದಿಂದ ಮೂವರು ಅತ್ಯುತ್ತಮ ಅಭ್ಯರ್ಥಿಗಳ ಹೆಸರು ಪ್ರಸ್ತಾಪಿಸುವಂತೆ 2,000ಕ್ಕೂ ಹೆಚ್ಚು ಪಕ್ಷದ ನಾಯಕರಿಗೆ ಸೂಚಿಸಲಾಗಿತ್ತು. ತದನಂತರ ಅದರಲ್ಲಿ ಒಬ್ಬ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಬಿಜೆಪಿಯ ಉನ್ನತ ನಾಯಕರು ನಾಲ್ಕು ದಿನಗಳ ಸಭೆ ನಡೆಸಿ ನಂತರ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಯಿತು. ದೆಹಲಿಯಿಂದ ಹೊರತಾಗಿ ಕ್ಷೇತ್ರದ ಪಕ್ಷದ ಕಾರ್ಯಕರ್ತರ ಶಿಫಾರಸಿನ ಮೇರೆಗೆ ಪಟ್ಟಿ ಸಿದ್ಧಪಡಿಸಲಾಗಿದೆ ಎಂಬ ಸಂದೇಶವನ್ನು ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ರವಾನಿಸಲು ಅಭ್ಯರ್ಥಿಗಳ ಆಯ್ಕೆ ವಿಧಾನವನ್ನು ಬಿಜೆಪಿ ರೂಪಿಸಿತ್ತು.

ಕಳೆದ ವರ್ಷ ನಡೆದ ಹಿಮಾಚಲ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ನಾಯಕರ ಭವಿಷ್ಯವನ್ನು ದೆಹಲಿಯ ಕೆಲವು ದೊಡ್ಡ ವ್ಯಕ್ತಿಗಳು ನಿರ್ಧರಿಸುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಹಿಮಾಚಲದ ಬಿಜೆಪಿ ನಾಯಕರಲ್ಲೊಬ್ಬರಾದ ವಂದನಾ ಗುಲೇರಿಯಾ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆಗ ''ದೆಹಲಿಯಿಂದ ಪಟ್ಟಿ ಬರಬಹುದು. ಆದರೆ, ಮತಗಳು ಆಯಾ ರಾಜ್ಯದಲ್ಲೇ ಹಾಕಬೇಕಾಗುತ್ತದೆ'' ಎಂದು ಪಕ್ಷದ ನಿರ್ಧಾರದ ಬಗ್ಗೆ ವ್ಯಂಗ್ಯವಾಡಿದ್ದರು. ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳ ಎರಡು ಪಟ್ಟಿ ಪ್ರಕಟಿಸಿದ ನಂತರ ಇಂತಹದ್ದೇ ಪರಿಸ್ಥಿತಿ ವ್ಯಕ್ತವಾಗುತ್ತಿದೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಡಬಹುದೆಂಬ ನಿರೀಕ್ಷೆಯಲ್ಲಿದ್ದ ಪಕ್ಷದ ನಾಯಕರು ಟಿಕೆಟ್​ ಸಿಗದ ಕಾರಣ ಆಕ್ರೋಶಗೊಂಡಿದ್ದಾರೆ. ಟಿಕೆಟ್ ವಂಚಿತ ಬಿಜೆಪಿ ನಾಯಕರನ್ನು ಕೆಣಕುವುದು ರಾಜ್ಯದಲ್ಲಿ ಪಕ್ಷಕ್ಕೆ ಅಪಾಯ ತಂದೊಡ್ಡಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸಿದರೆ, ಬಹುಶಃ 20ರಿಂದ 30 ಸ್ಥಾನಗಳಲ್ಲಿ ಅತೃಪ್ತ ನಾಯಕರು ತಮ್ಮದೇ ಆದ ಗಮನಾರ್ಹ ಪ್ರಭಾವ ಹೊಂದಿದ್ದಾರೆ.

ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಶೇಕಡಾ 17ರಷ್ಟು ಮತಗಳನ್ನು ಹೊಂದಿರುವ ಲಿಂಗಾಯತ ಸಮುದಾಯದ ಮೇಲೆ ಭಾರಿ ಪ್ರಭಾವ ಹೊಂದಿರುವುದರಿಂದ ಇಬ್ಬರು ಬಿಜೆಪಿಗೆ ಪ್ರಮುಖ ಬೆದರಿಕೆಯಾಗಿದ್ದಾರೆ. ಅದರಲ್ಲೂ, ಶೆಟ್ಟರ್ ಇತರ ಪಕ್ಷಾಂತರಿತ ಬಿಜೆಪಿ ಸದಸ್ಯರಂತಲ್ಲ. ಅವರೊಬ್ಬರು ಆರ್‌ಎಸ್‌ಎಸ್​ನ ಮಾಜಿ ವ್ಯಕ್ತಿ. ಅಲ್ಲದೇ, ಇವರ ತಂದೆಯೂ ಪ್ರಬಲ ನಾಯಕರಾಗಿದ್ದವರು. ಈಗ ಶೆಟ್ಟರ್​ ನಿರ್ಧಾರದಿಂದ ಬಿಜೆಪಿಗೆ ಮೀಸಲಾದ ಲಿಂಗಾಯತ ಮತಬ್ಯಾಂಕ್‌ಗೆ ತೊಂದರೆಯಾಗುವ ಸಂಭವವಿದೆ. ಜೊತೆಗೆ ಅಭ್ಯರ್ಥಿಗಳ ಆಯ್ಕೆಯಿಂದಾಗಿ ಹಿಮಾಚಲದ ನಂತರದ ಎರಡನೇ ರಾಜ್ಯದಲ್ಲಿ ಬಿಜೆಪಿಯಲ್ಲಿ ಈ ಮಟ್ಟದ ಗಂಭೀರ ಪಕ್ಷಾಂತರವು ಸತತವಾಗಿ ಮರುಕಳಿಸುತ್ತಿದೆ.

ಹಿಮಾಚಲದ ಅತೃಪ್ತಿಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಆ ರಾಜ್ಯದಲ್ಲಿ ಪಕ್ಷ ಸೋಲು ಎದುರಿಸಬೇಕಾಯಿತು. ಕರ್ನಾಟಕ ರಾಜ್ಯದಲ್ಲಿ ನಾಮನಿರ್ದೇಶನಗಳನ್ನು ವಿಳಂಬಗೊಳಿಸುವ ಮೂಲಕ ಈ ಪರಿಸ್ಥಿತಿಯನ್ನು ತಪ್ಪಿಸಲು ಬಿಜೆಪಿ ಪ್ರಯತ್ನಿಸಿತ್ತು. ಇದರ ಹೊರತಾಗಿಯೂ ಕರ್ನಾಟಕದಲ್ಲಿ ಹಿಮಾಚಲದ ರೀತಿಯ ಪರಿಸ್ಥಿತಿ ಉದ್ಭವಿಸಿದೆ. ಇದು ಆಡಳಿತ ವಿರೋಧಿ ಅಂಶವನ್ನೂ ಹೆಚ್ಚಿಸುವಂತೆ ಮಾಡಿದ್ದು, ಮತಗಳ ವಿಭಜನೆಗೂ ಕಾರಣವಾಗಬಹುದು. ಪಕ್ಷದ ಟಿಕೆಟ್​ ಸಿಗದೆ ನಿರಾಶೆಗೊಂಡ ಬಿಜೆಪಿ ನಾಯಕರು ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಳ್ಳಬಹುದು. ಬಿಜೆಪಿಗೆ ಸರ್ಕಾರ ರಚಿಸುವ ಸಾಧ್ಯತೆಯನ್ನೂ ಕಡಿಮೆ ಮಾಡಬಹುದು. ಏಕೆಂದರೆ, ಬಂಡಾಯದ ಸ್ಪರ್ಧೆಯಿಂದ ಅಗತ್ಯವಿರುವ ಸ್ಥಾನಗಳ ಕೊರತೆ ಉಂಟಾಗಬಹುದು.

ಅಭ್ಯರ್ಥಿ ಪಟ್ಟಿಯನ್ನು ಅಂತಿಮಗೊಳಿಸುವಲ್ಲಿ ಮಾಡಿದ ತಪ್ಪುಗಳಿಂದ ಕಲಿಯಲು ಹಿಮಾಚಲದ ಅನುಭವವು ಬಿಜೆಪಿಗೆ ಪಾಠವಾಗಬಹುದಿತ್ತು. ಹಿಮಾಚಲದ ಸೋಲನ್ ಜಿಲ್ಲೆಯ ನಲಗಢ ಕ್ಷೇತ್ರದಲ್ಲಿ ಪಕ್ಷವು ಇನ್ನೊಬ್ಬರಿಗೆ ಟಿಕೆಟ್ ನೀಡಿದ್ದರಿಂದ ಅತೃಪ್ತ ಅಭ್ಯರ್ಥಿ ಸ್ವತಂತ್ರವಾಗಿ ಸ್ಪರ್ಧಿಸಿ ಆ ಸ್ಥಾನವನ್ನು ಗೆದ್ದದ್ದಿರು. ಅದೇ ರೀತಿಯಲ್ಲಿ ಕುಲು ಮತ್ತು ಹರೋಲಿ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಬದಲಾಯಿಸಿದ ಕಾರಣ ಆ ಸ್ಥಾನಗಳೂ ಕಾಂಗ್ರೆಸ್​ ಪಾಲಾಗಿತ್ತು. ಇಕ್ಕಟ್ಟಿನ ಸ್ಪರ್ಧೆಯಲ್ಲಿ ಪಕ್ಷಾಂತರವು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬುದು ಸ್ಪಷ್ಟ. ಇದೇ ವೇಳೆ ಅಭ್ಯರ್ಥಿಕ್ಕಿಂತ ಪಕ್ಷ ಮೇಲು ಎಂಬ ಬಿಜೆಪಿಯ ಕಲ್ಪನೆಯು ಚುನಾವಣೆಯ ಸಂದರ್ಭದಲ್ಲಿ ಅದರ ಪ್ರಸ್ತುತತೆಯನ್ನು ಕಳೆದುಕೊಂಡಿದೆ ಎಂದು ತೋರುತ್ತದೆ.

ಇದು ಹಿಮಾಚಲ ಚುನಾವಣೆಯಿಂದ ಸಾಕಷ್ಟು ಸ್ಪಷ್ಟವಾಗಿತ್ತು. ಈಗ ಇದೇ ಕಲ್ಪನೆಯನ್ನು ಬಲಪಡಿಸಲು ಯತ್ನಿಸಿದ ಕರ್ನಾಟಕದಲ್ಲೂ ಪುನರಾವರ್ತನೆಯಾಗಿದೆ. ಕರ್ನಾಟಕಕ್ಕೆ ಹೋಲಿಸಿದರೆ ಹಿಮಾಚಲವನ್ನು ಕುಶಲತೆಯಿಂದ ನಿರ್ವಹಿಸುವುದು ಇನ್ನೂ ಸುಲಭವಾಗಿತ್ತು. ಅಲ್ಲಿ ಮತ ರಾಜಕೀಯದ ಮೇಲೆ ಪ್ರಭಾವ ಬೀರುವ ಅಂಶಗಳು ಅಸಂಖ್ಯಾತವಾಗಿವೆ. ಈಗ ಕರ್ನಾಟಕ ಪ್ರಮುಖ ಸಮುದಾಯಗಳಾದ ಲಿಂಗಾಯತರು ಮತ್ತು ಒಕ್ಕಲಿಗರನ್ನು ಸಮಾಧಾನಪಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಂಜಾರ ಹಾಗೂ ಇತರ ಜಾತಿಗಳು ದೂರವಾಗುತ್ತಿವೆ. ಹೈದರಾಬಾದ್ ಮತ್ತು ಮಧ್ಯ ಕರ್ನಾಟಕವು ಈ ಬಾರಿ ಬಿಜೆಪಿಗೆ ನಿರ್ಣಾಯಕವಾಗಿದೆ. ಏಕೆಂದರೆ, ಈ ಪ್ರದೇಶಗಳಿಂದ ಉತ್ತಮ ಸಂಖ್ಯೆಯ ಶಾಸಕರನ್ನು ಪಡೆದುಕೊಂಡಿದೆ. ಬಿಜೆಪಿಯು ಪಕ್ಷಾಂತರದ ಪರಿಣಾಮ ಮತ್ತು ಪ್ರಭಾವವನ್ನು ಕಡಿಮೆ ಮಾಡಲು ಹೇಗೆ ನಿಭಾಯಿಸುತ್ತದೆ ಎಂಬುದು ಕುತೂಹಲಕರ ವಿಚಾರ.

ABOUT THE AUTHOR

...view details